ಮೀರತ್ (www.vknews.in) : ಆಹಾರ ಪ್ರಿಯರಿಗೊಂದು ಸಿಹಿಸುದ್ದಿ. ಹೊಟ್ಟೆ ತುಂಬ ತಿಂದು ಅದರ ಜೊತೆಗೆ ಹಣವೂ ಸಿಗುತ್ತದೆ. ಮೀರತ್ನ ಸಿಹಿ ಅಂಗಡಿಯೊಂದು ವಿಭಿನ್ನ ಕೊಡುಗೆಯೊಂದಿಗೆ ಬಂದಿದೆ. ಅರ್ಧ ಗಂಟೆಯೊಳಗೆ 12 ಕೆ.ಜಿ ತೂಕದ ‘ಬಾಹುಬಲಿ ಸಮೋಸ’ ತಿಂದರೆ 71,000 ರೂಪಾಯಿ ಬಹುಮಾನ ಸಿಗಲಿದೆ.
ಲಾಲ್ಕುರ್ಟಿಯ ಪ್ರಸಿದ್ಧ ಕೌಶಲ್ ಸ್ವೀಟ್ಸ್ನ ಮೂರನೇ ತಲೆಮಾರಿನ ಉಜ್ವಲ್ ಕೌಶಲ್ (30) ಆಹಾರ ಪ್ರಿಯರಿಗೆ ಕುತೂಹಲಕಾರಿ ಸವಾಲು ಒಡ್ಡಿದ್ದಾರೆ. ನಾಲ್ವರು ಬಾಣಸಿಗರು ಆರು ಗಂಟೆಗಳ ಕಾಲ ಬಾಹುಬಲಿ ಸಮೋಸ ತಯಾರಿಸಿದ್ದಾರೆ. ಆಲೂಗಡ್ಡೆ, ಬಟಾಣಿ, ಮಸಾಲೆ ಪದಾರ್ಥಗಳು, ಪನೀರ್, ಡ್ರೈ ಫ್ರೂಟ್ಸ್ ಇತ್ಯಾದಿ 7 ಕೆಜಿ ಪದಾರ್ಥಗಳನ್ನು ಸಮೋಸಾದೊಳಗೆ ತುಂಬಿಸಲಾಗುತ್ತದೆ. ಇದು ಬೇಯಿಸಲು 90 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸುವ ಬದಲು ಈ ಸಮೋಸಗಳನ್ನು ಕಟ್ ಮಾಡುತ್ತಾರೆ ಹಾಗಾಗಿ ಸಾಕಷ್ಟು ಆರ್ಡರ್ ಗಳು ಬರುತ್ತಿವೆ ಎಂದು ಉಜ್ವಲ್ ಹೇಳಿದ್ದಾರೆ. ಉಜ್ವಲ್ ಕುಟುಂಬ ಕಳೆದ 60 ವರ್ಷಗಳಿಂದ ಬೇಕರಿ ಉದ್ಯಮದಲ್ಲಿದೆ. ಕಳೆದ ವರ್ಷ ಜುಲೈನಲ್ಲಿ 4 ಕೆಜಿ ತೂಕದ ಸಮೋಸ ತಯಾರಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಾಗ 8 ಹಾಗೂ 12 ಕೆಜಿ ಸಮೋಸ ತಯಾರಿಸಲಾಗಿದೆ. ಬಾಹುಬಲಿ ಸಮೋಸಾಗಳ ಬೆಲೆ 1500 ರೂ. ಬಾಹುಬಲಿ ಸಮೋಸಾವನ್ನು ಮುಂಗಡವಾಗಿ ಆರ್ಡರ್ ಮಾಡಿದವರಿಗೆ ಮಾತ್ರ ರುಚಿ ನೋಡಬಹುದು. ಕುಟುಂಬಗಳು, ವಿಶೇಷ ಸಂದರ್ಭಗಳಲ್ಲಿ ಬಾಹುಬಲಿ ಸಮೋಸಾಗಳನ್ನು ಆರ್ಡರ್ ಮಾಡುತ್ತಾರೆ ಮತ್ತು ಕೆಲವರು ಮರುದಿನ ಪರಾಠಗಳನ್ನು ತಯಾರಿಸಲು ಉಳಿದ ಹೂರಣವನ್ನು ಬಳಸುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.