– ಡಿ.ಎಸ್.ಐ.ಬಿ. ಪಾಣೆಮಂಗಳೂರು
ಒಂದು ತಿಂಗಳುಗಳ ಕಾಲ ಪವಿತ್ರ ರಮಳಾನ್ ಮಾಸದ ಉಪವಾಸಿಗನಾಗಿ ಒಂದು ದಿನದ ಪೆರ್ನಾಳ್ ಹಬ್ಬವನ್ನು ಆಚರಿಸಲಿದ್ದೇವೆ. ಈ ಒಂದು ದಿನ ಹಬ್ಬದ ಸಂಭ್ರಮ ಸಡಗರ ಸಂತೋಷದಿಂದ ದುಃಖಕ್ಕೆ ಕಾರಣರಾಗಬೇಡಿ. ಯಾರೇ ಆಗಲಿ ಯಾವುದೇ ಹಬ್ಬಗಳನ್ನು ಆಚರಿಸಬೇಕಾದರೆ ಹೊರನಾಡಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವುದರೊಂದಿಗೆ ತಮ್ಮ ಸಂತೋಷದ ಸಮಯವನ್ನು ಸ್ನೇಹಿತ ಅಥವಾ ಕುಟುಂಬದೊಂದಿಗೆ ಕಳೆಯುತ್ತಾರೆ. ಇಂತಹ ಸಂದರ್ಭಗಳಲ್ಲಿಯೂ ನಾವು ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ತುಂಬಾ ಸೂಕ್ತ.
ಸ್ನೇಹಿತರೇ, ಕಳೆದ ಪೆರ್ನಾಳ್ ಹಬ್ಬದ ಸಂದರ್ಭದಲ್ಲಿ ನಮ್ಮ ಸ್ನೇಹಿತನೋರ್ವ ಬೈಕ್ ಅಪಘಾತದಲ್ಲಿ ಇಹಲೋಕ ತ್ಯಜಿಸಿದನು. ಈ ಒಂದು ನೆನಪು ಪ್ರತಿಯೊಂದು ಸಮಯದಲ್ಲೂ ಆತನ ಕುಟುಂಬ ಮತ್ತು ಸ್ನೇಹಿತರಿಗೆ ಆ ನೋವು ಇನ್ನೂ ಮರೆಯಾಗಿಲ್ಲ. ಇದೊಂದೇ ಘಟನೆಯಲ್ಲ. ಇಂತಹ ಅದೆಷ್ಟೋ ಘಟನೆಗಳನ್ನು ನೀವು ನೋಡಿರಬಹುದು, ಕೇಳಿರಬಹುದು. ಹಬ್ಬದ ಸಂಭ್ರಮವನ್ನು ಆನಂದಿಸುವಾಗ ನಾವು ಎಚ್ಚರವಹಿಸಲೆಬೇಕು. ಇದು ಮಳೆಗಾಲದ ಸಮಯ. ಇತ್ತೀಚೆಗೆ ಮಳೆ ತುಂಬಾ ಭೀಕರವಾಗಿದೆ. ಬಿರುಗಾಳಿ ಮಳೆಯ ಆರ್ಭಟಕ್ಕೆ ಸಮುದ್ರದ ಅಲೆಗಳು ತುಂಬಾ ಭೀಕರವಾಗಿದೆ. ಈ ಭೀಕರ ಗಾಳಿ ಮಳೆಯಿಂದಾಗಿ ಅದೆಷ್ಟೋ ಮನೆ, ಮರ, ಗುಡ್ಡಗಳು ಬೀಳುತ್ತಿರುವುದರಿಂದ ಮನುಷ್ಯ ಅಥವಾ ಪ್ರಾಣಿ ಪಕ್ಷಿಗಳ ಜೀವ ಇಹಲೋಕ ತ್ಯಜಿಸುತ್ತಿದೆ. ಹೆದ್ದಾರಿಗಳ ಮೂಲಕ ನೀರು ಹರಿಯುತ್ತಿರುವುದರಿಂದ ಮತ್ತಷ್ಟು ಪ್ರಾಣಾಪಾಯಕ್ಕೆ ಕಾರಣವಾಗುತ್ತಿವೆ.
ನಿಮ್ಮ ಪ್ರವಾಸವು ಸಮುದ್ರ, ಕಾಡು, ಗುಡ್ಡ ಪ್ರದೇಶ, ಜಲಪಾತ ಇನ್ನಿತರ ಅಪಾಯಕಾರಿ ಕಡೆಗೆ ಹೋಗದಿರಿ. ಒಂದು ವೇಳೆ ಹೋದರು ಎಚ್ಚರವಹಿಸಿರಿ. ಭೀಕರವಾದ ಗಾಳಿಗೆ ಮರಗಳು ಬೀಳುತ್ತಿದ್ದು ಇದರ ಅಡಿಯಲ್ಲಿ ಸಂಚರಿಸುವಾಗ ತುಂಬಾ ಎಚ್ಚರವಹಿಸಿ. ಸಮುದ್ರದ ಅಲೆಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಸಮುದ್ರಕ್ಕಿಳಿದು ಆಟವಾಡಬೇಡಿ. ಅಲ್ಲಲ್ಲಿ ಗುಡ್ಡ, ಗೋಡೆಗಳು ಬೀಳುತ್ತಿದ್ದು ಇದರ ಅಡಿಯಿಂದ ಕೂಡ ಅತಿ ಹೆಚ್ಚು ಗಮನಾರ್ಹ ಅಗತ್ಯ. ಬಸ್, ರೈಲುಗಳ ಮೆಟ್ಟಿಲುಗಳಲ್ಲಿ ನೇತಾಡಿಕೊಂಡು ಸಂಚರಿಸದಿರಿ. ವಿದ್ಯುತ್ ಕಂಬ, ತಂತಿಗಳನ್ನು ಕೂಡ ಗಮನಿಸಿ.
ಯುವ ಜನರಿಗೆ ದ್ವಿಚಕ್ರ ವಾಹನ ತುಂಬಾ ಅಚ್ಚುಮೆಚ್ಚು. ಇದನ್ನು ಓಡಿಸುವಾಗಲು ಅಚ್ಚುಕಟ್ಟಾಗಿದ್ದರೆ ತುಂಬಾ ಉತ್ತಮ. ಇಂದು ದ್ವಿಚಕ್ರ ವಾಹನಗಳ ಓಡಾಟ ನೋಡಿದರೆ ಭಯವಾಗುತ್ತಿವೆ. ಅತಿ ಹೆಚ್ಚು ದ್ವಿಚಕ್ರ ವಾಹನವೇ ಅಪಘಾತಕ್ಕೆ ಒಳಗಾಗುತ್ತಿರುವುದು. ಮೋಜು ಮಸ್ತಿಯಲ್ಲಿ ಎರಡಕ್ಕಿಂತ ಹೆಚ್ಚು ಮಂದಿಯನ್ನು ಕುಳ್ಳಿರಿಸಿ ಯಾವುದೇ ಸುರಕ್ಷಿತವಿಲ್ಲದೆ ಅತೀ ವೇಗವಾಗಿ ಲಾರಿ, ಬಸ್ಗಳ ಓವರ್ಟೇಕ್ ಮಾಡುತ್ತ ಸಂಚರಿಸಿ ಅಪಘಾತಕ್ಕೆ ಒಳಗಾಗಿ ಕುಟುಂಬಕ್ಕೆ ಆಸರೆಯಾಗಿದ್ದವರು ನಮ್ಮಿಂದ ದೂರವಾಗುತ್ತಾರೆ. ಸ್ನೇಹಿತರೇ, ವಾಹನ ಓಡಿಸುವಾಗ ಸುರಕ್ಷಿತವಾಗಿ ಓಡಿಸಿ. ಎರಡಕ್ಕಿಂತ ಹೆಚ್ಚು ಮಂದಿಯನ್ನು ಕುಳ್ಳಿರಿಸದೆ, ಅತಿಯಾದ ವೇಗದಲ್ಲಿಯೂ ಸಂಚರಿಸದೆ, ಓವರ್ಟೇಕ್ ಮಾಡದೆ, ಗಮನವಿಟ್ಟು ವಾಹನ ಓಡಿಸಿ. ಇದು ಬರೀ ದ್ವಿಚಕ್ರಕ್ಕೆ ಮಾತ್ರ ಸೀಮಿತವಲ್ಲ. ಪ್ರತಿಯೊಂದು ವಾಹನ ಚಾಲಕರಿಗೂ ಮನವಿ ಮಾಡುತ್ತಿದ್ದೇನೆ. ಒಂದು ದಿನದ ಖುಷಿಗಾಗಿ ಜೀವನ ಪೂರ್ತಿ ಹೆತ್ತವರು, ಹೆಂಡತಿ, ಮಕ್ಕಳ ಕಣ್ಣೀರಿಗೆ ನಾವು ಕಾರಣರಾಗಬಾರದು. ರಸ್ತೆ ಅಪಘಾತದಲ್ಲಿ ಅದೆಷ್ಟೋ ಸ್ನೇಹಿತರು ನಮ್ಮಿಂದ ಕಳೆದುಕೊಂಡಿದ್ದಾರೆ. ವಾಹನಗಳ ಸಂಖ್ಯೆ ಹೆಚ್ಚಾಗಿದ್ದು ಮತ್ತು ಇಕ್ಕಟ್ಟಾದ ರಸ್ತೆಗಳು ಕಾರಣವಾಗಿದೆ. ಕೆಲವೊಂದು ಘನ ವಾಹನಗಳ ವೇಗಕ್ಕೆ ಸಣ್ಣಪುಟ್ಟ ವಾಹನ ಸವಾರರ ಜೀವ ಬಲಿಯಾಗುತ್ತಿದೆ. ಇತ್ತೀಚೆಗಷ್ಟೇ ನಗರದ ರಸ್ತೆ ಅಪಘಾತದಲ್ಲಿ ಒಂದು ದಂಪತಿಯ ಜೀವ ಇಹಲೋಕ ತ್ಯಜಿಸಿದ್ದು ಪ್ರತಿಯೊಬ್ಬರ ಮನದ ನೋವು ಇನ್ನೂ ವಾಸಿಯಾಗಿಲ್ಲ ಯಾರದ್ದೊ ತಪ್ಪಿಗೆ ಅನಾಥ ಜೀವಗಳು ಬಲಿಯಾಗುತ್ತಿವೆ.
ಸರ್ವಶಕ್ತನಾದ ಅಲ್ಲಾಹನು ಈ ಪವಿತ್ರ ಮಾಸದ ಬರಕತ್ತಿನಿಂದ ದುಃಖವನ್ನು ತಾಳುವ ಸಹನಾ ಶಕ್ತಿಯನ್ನು ಆ ದಂಪತಿಗಳ ಕುಟುಂಬಕ್ಕೂ, ಇತರ ಮಿತ್ರ ಬಳಗಕ್ಕೂ ಉದಾರವಾಗಿ ಕರುಣಿಸಲಿ… ನಾಳೆ ಜನ್ನಾತುಲ್ ಫಿರ್ದೌಸ್ನಲ್ಲಿ ಆ ದಂಪತಿಯನ್ನು ಹಾಗೂ ನಮ್ಮನ್ನು ಅಲ್ಲಾಹನ ಇಷ್ಟದಾಸರೊಂದಿಗೆ ಸಂತೋಷದಿಂದ ಒಂದುಗೂಡಿಸಲಿ. ನಮ್ಮೆಲ್ಲರನ್ನು ಅಲ್ಲಾಹು ದುರಂತ ಮರಣಗಳಿಂದಲೂ, ತಕ್ಷಣದ ಮರಣಗಳಿಂದಲೂ, ಅಕಾಲಿಕ ಮರಣಗಳಿಂದಲೂ ರಕ್ಷಿಸಲಿ…. ಆಮೀನ್.
ಸ್ನೇಹಿತರೇ, ನಿಮಗೆ ಹೇಳುವಷ್ಟು ನಾನು ದೊಡ್ಡವನಲ್ಲ. ಇತ್ತಿಚಿನ ಅಪಾಯ, ಅನಾಹುತಗಳ ಬಗ್ಗೆ ಎಚ್ಚರಿಸುತ್ತಿದ್ದೇನೆ ಅಷ್ಟೇ. ಇದು ಬರೀ ಹಬ್ಬದ ದಿನಕ್ಕೆ ಮಾತ್ರ ಸೀಮಿತವಲ್ಲ ಪ್ರತಿಯೊಂದು ಸಮಯದಲ್ಲೂ, ಪ್ರತಿಯೊಬ್ಬರು ಕೂಡ ಪಾಲಿಸಬೇಕಾಗಿದೆ. ನಿಮ್ಮ ಒಂದು ಜೀವವನ್ನು ಅದೆಷ್ಟೋ ಮಂದಿ ಕನಸು ಕಂಡಿದ್ದಾರೆ ಎಲ್ಲರಿಗಿಂತ ಹೆಚ್ಚಾಗಿ ನಿಮ್ಮ ಹೆತ್ತವರು ಕನಸಿನ ಅರಮನೆಯೇ ಕಟ್ಟಿದ್ದಾರೆ. ಆ ಅರಮನೆ ನೆಲಸಮ ಮಾಡದಿರಿ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.