ಚಿತ್ರ 1: ಕಾಡು ಮೈನಾ
(www.vknews.in) : ನಾಡಿಗೆ ಹೊಂದಿಕೊಳ್ಳುತ್ತಿರುವ ಮತ್ತೊಂದು ಕಾಡು ಪಕ್ಷಿಯಿದು. ಕಾಡು ಗೊರವಂಕವೆಂದೂ ಕರೆಯಲ್ಪಡುವ ಈ ಹಕ್ಕಿ ‘ಮೈನಾ’ ಪಕ್ಷಿಯನ್ನೇ ಹೋಲುತ್ತದೆ, ಕೆಲವೊಂದು ವ್ಯತ್ಯಾಸಗಳಿವೆ ಅಷ್ಟೇ.
ಆಂಗ್ಲ ಹೆಸರು: – Jungle myna
ವೈಜ್ಞಾನಿಕ ಹೆಸರು: – Acridotheres fuscus
ಇನ್ನೂ ಹೆಚ್ಚಿನ ಪಕ್ಷಿಗಳ ಕುರಿತು ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
ಬೂದು – ಕಂದು ಮಿಶ್ರಿತ ಬಣ್ಣದ ದೇಹದ ಪಕ್ಷಿಯಿದು. ಎದೆಯಿಂದ ತಲೆಯ ಕಡೆಗೆ ಸಾಗಿದಂತೆ ಬಣ್ಣಗಳು ಗಾಢವಾಗುತ್ತಾ ಸಾಗಿ ತಲೆ ಪೂರ ಕಪ್ಪು ಬಣ್ಣವಾಗಿ ಕಾಣಿಸುತ್ತದೆ. ನೀಟಾಗಿ ಕ್ರಾಪು ತೆಗೆದಂತೆ ಪುಟ್ಟ ಕಪ್ಪು ಕಿರೀಟವಿದೆ. ಕೊಕ್ಕಿನ ಮುಂದರ್ಧ ಹಳದಿ ಬಣ್ಣವಿದ್ದರೆ ಹಿಂದಿನ ಭಾಗ ಕಪ್ಪು ಬಣ್ಣವನ್ನೊಂದಿದೆ. ತೆಳು ನೀಲಿ ಬಣ್ಣದ ಕಣ್ಣು ಆಕರ್ಷಣೀಯ. ಹಳದಿ ಬಣ್ಣದ ಕಾಲುಗಳನ್ನೊಂದಿದೆ. ರೆಕ್ಕೆಗಳಲ್ಲಿ ಕಂದು – ಬೂದು ಬಣ್ಣದ ಜೊತೆಗೆ ಬಿಳಿ ಪಟ್ಟಿಗಳೂ ಇವೆ. ಆದರಿವು ಕಾಣಿಸುವುದು ಕಾಡು ಮೈನಾ ಹಾರಾಟದಲ್ಲಿದ್ದಾಗ ಮಾತ್ರ. ಬಾಲದ ತುದಿಯೂ ಬೆಳ್ಳಗಿದೆ. ಹೆಣ್ಣುಗಂಡಿನ ನಡುವೆ ವ್ಯತ್ಯಾಸಗಳಿಲ್ಲ.
(ಸಾಮಾನ್ಯ ಮೈನಾದ ವಿಶೇಷತೆಗಳನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿ)
ಸಾಮಾನ್ಯವಾಗಿ ಭತ್ತದ ಗದ್ದೆಗಳ ಸಮೀಪ, ತೋಟ, ನೀರಿನ ಸೆಲೆಗಳ ಹತ್ತಿರ ಗೂಡು ಕಟ್ಟಿಕೊಳ್ಳುತ್ತವೆ. ಕಟ್ಟಿಕೊಳ್ಳುತ್ತವೆ ಎನ್ನುವುದಕ್ಕಿಂತ ಲಭ್ಯವಿರುವ ಸುರಕ್ಷಿತವೆನ್ನಿಸುವ ಪೊಟರೆಗಳನ್ನು ತಮ್ಮ ವಾಸಸ್ಥಾನವನ್ನಾಗಿಸಿಕೊಳ್ಳುತ್ತವೆ. ಹಳೆಯ ತೆಂಗಿನ ಮರದ ಪೊಟರೆ ಇವುಗಳಿಗೆ ಅಚ್ಚುಮೆಚ್ಚು.
ಚಿತ್ರ 2: ಮಿಡತೆಗಳನ್ನು ಕಚ್ಚಿನಿಂತಿರುವ ಕಾಡು ಮೈನಾ
ಮಿಶ್ರಾಹಾರಿ ಪಕ್ಷಿಗಳಾದ ಕಾಡು ಮೈನಾಗಳು ಕಾಳು – ಧಾನ್ಯ, ಚಿಕ್ಕ ಪುಟ್ಟ ಹುಳಗಳನ್ನು ತಿನ್ನುತ್ತವೆ. ಒಂದೇ ಬಾರಿಗೆ ಹತ್ತಾರು ಮಿಡತೆಗಳನ್ನು ಬಾಯಲ್ಲಿ ಕಚ್ಚಿಕೊಂಡಿದ್ದಾವೆಂದರೆ ಪೊಟರೆಯಲ್ಲಿ ಆಹಾರಕ್ಕೆ ಕಾಯುತ್ತಿರುವ ಮರಿಗಳಿದ್ದಾವೆ ಎಂದೇ ಅರ್ಥ.
ಗುಂಪಿನಲ್ಲಿ ಅಥವಾ ಜೋಡಿಯಾಗೇ ಕಾಣಿಸಿಕೊಳ್ಳುವ ಈ ಪಕ್ಷಿಗಳು ನಿಧಾನಕ್ಕೆ ನಗರ ಪ್ರದೇಶಕ್ಕೂ ಹೊಂದಿಕೊಳ್ಳಲಾರಂಭಿಸಿವೆ. ಹಾಗಿದ್ದರೂ ಕೂಡ, ಇವುಗಳ ಸಂಖೈ ಕಡಿಮೆಯಾಗುತ್ತಿದೆ ಎನ್ನುವ ವರದಿಗಳೂ ಇವೆ. ಇವುಗಳ ಹೊಂದಾಣಿಕೆಯ ಮಟ್ಟ ಎಷ್ಟಿದೆಯೆಂದು ಇನ್ನೊಂದಷ್ಟು ವರುಷಗಳ ನಂತರ ಅರಿವಾಗಬಹುದು.
ಚಿತ್ರ ನೆನಪು –
ಚಿತ್ರ 1: ಕುಣಿಗಲ್ ಬೈಪಾಸಿನ ಸರ್ವೀಸು ರಸ್ತೆಯಲ್ಲಿ ತೆಗೆದ ಪಟವಿದು. ದೂರದಿಂದ ಕಂಡಾಗ ತೀರ ಸಾಧಾರಣ ಪಕ್ಷಿಯಂತೆಯೇ ಕಾಣುವ ಕಾಡು ಮೈನಾಗಳನ್ನು ಹತ್ತಿರದಿಂದ ಸೂರ್ಯನ ಹೊಂಬೆಳಕಿನಲ್ಲಿ ನೋಡಿದಾಗ ಆಕರ್ಷಣೀಯವಾಗಿ ಕಾಣಿಸುತ್ತವೆ. ಅದರಲ್ಲೂ ಆ ಕಪ್ಪು ಕಿರೀಟವಂತೂ ಎಣ್ಣೆ ಹಾಕಿ ತೀಡಿ ನಿಲ್ಲಿಸಿದ ಕೂದಲಿನಂತೆಯೇ ಕಾಣಿಸುತ್ತದೆ ಅಲ್ಲವೇ?
ಚಿತ್ರ 2: ಮಂಡ್ಯದ ಸೂಳೆಕೆರೆಯಲ್ಲಿ ತೆಗೆದ ಪಟವಿದು. ನೀರು ಕಡಿಮೆಯಿದ್ದ ಸಮಯ. ನೀರ ಮಧ್ಯದಲ್ಲಿನ ಮಣ್ಣಿನ ಗುಡ್ಡೆಯ ಮೇಲೆ ಬೆಳೆದುಕೊಂಡಿದ್ದ ಕೆಲವು ಹುಲ್ಲು ಗಿಡಗಳ ಬಳಿಗೆ ಬಂದ ಕಾಡು ಮೈನಾ ಒಂದು ಮಿಡತೆಯನ್ನು ಬಾಯಲ್ಲಿ ಕಚ್ಚಿಕೊಂಡಿತು. ಹಾರೋಗುತ್ತೆ ಎಂದುಕೊಂಡೆ. ಉಹ್ಞೂ, ಮತ್ತಷ್ಟು ಮಿಡತೆಗಳನ್ನು ಕಚ್ಚಿ ಹಿಡಿಯಿತು. ಪುಟ್ಟ ಕೊಕ್ಕಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಹುಳಗಳನ್ನು ಕಚ್ಚಿ ಹಿಡಿದು ಮರಿಯ ಪೋಷಣೆಗೆ ಹಾರಿ ಹೋಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.