(ವಿಶ್ವ ಕನ್ನಡಿಗ ನ್ಯೂಸ್ ): ಕೆಲವೇ ದಿನಗಳ ಹಿಂದೆ ನಡೆದ ಬಾಂಗ್ಲಾದೇಶ ಚುನಾವಣೆಯಲ್ಲಿ ಶೇಖ್ ಹಸೀನಾ ಭರ್ಜರಿ ಜಯಗಳಿಸಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ . ಈ ಗೆಲುವು ಅಂತಿಂತ ಗೆಲುವಲ್ಲ , ಸಂಸತ್ ನ 300 ಕ್ಷೇತ್ರಗಳಲ್ಲಿ 288 ಸ್ಥಾನಗಳನ್ನು ಗೆದ್ದುಕೊಂಡ ಹಸೀನಾ ನೇತೃತ್ವದ ಆಡಳಿತಾರೂಢ ಅವಾಮಿ ಲೀಗ್ ಮೈತ್ರಿಕೂಟ ಎದುರಾಳಿಯೆ ಇಲ್ಲದಂತೆ ಮಾಡಿದೆ .ಹೇಗಾದರೂ ಮಾಡಿ ಹಸೀನಾ ಅವರನ್ನು ಕಿತ್ತೊಗೆಯಬೇಕು ಎಂದು ಹರಸಾಹಸ ಪಟ್ಟ ನ್ಯಾಷನಲ್ ಯೂನಿಟಿ ಫ್ರಂಟ್(ಯುಎನ್ಎಫ್) ಗಳಿಸಿದ್ದು ಕೇವಲ 7 ಸ್ಥಾನಗಳನ್ನು . ಚುನಾವಣೆಯಲ್ಲಿ ಊಹಿಸಲಾಗದಷ್ಟು ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದರೂ ಹಸೀನಾ ಡೋಂಟ್ ಕ್ಯಾರ್ ಮಾಡಿದ್ದಾರೆ , ಎಲ್ಲವು ಪಾರದರ್ಶಕವಾಗೇ ನಡೆದಿದೆ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ . ಒಂದಂತೂ ನಿಜ ಈಗ ಬಾಂಗ್ಲಾದೇಶ ಸಂಪೂರ್ಣ ಹಸೀನಾ ಕಪಿಮುಷ್ಠಿಗೊಳಗಾಗಿದೆ.
ಶೇಖ್ ಹಸೀನಾ ಇತಿಹಾಸವೇ ರೋಚಕ :
ವಿಶ್ವದ ಅತ್ಯಂತ ಬಲಿಷ್ಠ ಮಹಿಳಾ ರಾಜಕಾರಣಿಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನ ಪಡೆಯುತ್ತಿರುವ ನಾಯಕಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ . ಆಕೆಯ ಜೀವನ ಯಾವ ಹಾಲಿವುಡ್ ಚಿತ್ರಕ್ಕೂ ಕಡಿಮೆಯೇನಿಲ್ಲ , ಒಂದು ರೀತಿಯಲ್ಲಿ ಶೇಖ್ ಹಸೀನಾ ಬೆಂಕಿಯಲ್ಲಿ ಅರಳಿದ ಹೂ . ಅದೆಷ್ಟೋ ಅಡೆತಡೆಗಳನ್ನ ದಾಟಿ ಇಂದು ಬಾಂಗ್ಲಾ ಪ್ರಧಾನಿಯಾದವರು . ಸಾವಿನ ಜೊತೆ ಆಟವಾಡಿ ಬಂದವರು , ಆದರೆ ಇದೀಗ ಸೇಡು ಹಾಗು ರಾಜಕೀಯ ಚದುರಂಗದಾಟದಲ್ಲಿ ಅವರನ್ನ ಮೀರಿಸುವವರು ಈ ಜಗತ್ತಿನಲ್ಲಿ ಸಿಗಲು ಸಾಧ್ಯವೇ ಇಲ್ಲ .
ಬಾಂಗ್ಲಾದೇಶದ ಮೊದಲ ಅಧ್ಯಕ್ಷ ಶೇಖ್ ಮುಜಿಬುರ್ ರಹಮಾನ್ ರ ಪುತ್ರಿಯಾಗಿದ್ದ ಶೇಖ್ ಹಸೀನಾ ಚಿಕ್ಕ ವಯಸ್ಸಿನಲ್ಲೇ ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ . 1970 ರಲ್ಲಿ ತನ್ನ ತಂದೆಯನ್ನ ತನ್ನದೇ ದೇಶದ ಕೆಲವರ ಒಳಸಂಚಿನಿಂದ ಬಂಧಿಸಲ್ಪಟ್ಟಾಗ ಹಸೀನಾ ತನ್ನ ಅಜ್ಜಿಯ ಆಶ್ರಯ ಪಡೆದುಕೊಂಡಿದ್ದರು . ಆ ಸಮಯದಲ್ಲಿ ಅತ್ಯಂತ ಕುಗ್ರಾಮದಲ್ಲಿ ವಾಸಿಸ ತೊಡಗಿದ ಹಸೀನಾ ಸರಿಯಾಗಿ ಶಾಲೆಗೆ ಹೋಗಲು ಆಗುತ್ತಿರಲಿಲ್ಲ, ಕಾರಣ ಮರದ ಸೇತುವೆಯಿಂದ ಕಾಲುವೆಯನ್ನು ದಾಟಬೇಕಾದ ಪರಿಸ್ಥಿತಿ , ಎಲ್ಲಿಯಾದರೂ ಆ ಮರದ ಸೇತುವೆಯಿಂದ ಬಿದ್ದರೆ ತಾನು ನದಿಯಪಾಲಾಗುವುದಾಗಿ ಎಲ್ಲರು ಹೇಳುತ್ತಿದ್ದುದರಿಂದ ಶಾಲೆಗೂ ಹೋಗಿರಲಿಲ್ಲ ಎಂದು ಸ್ವತಃ ಅವರೇ ಬರೆದುಕೊಂಡಿದ್ದಾರೆ .
1975 ರಲ್ಲಿ ಹಸೀನಾ ಅವರ ತಂದೆಯನ್ನ ಒಳಸಂಚಿನಿಂದ ಭೀಕರವಾಗಿ ಹತ್ಯೆ ಮಾಡಲಾಯಿತು . ಆ ಸಂದರ್ಭದಲ್ಲಿ ಹಸೀನಾ ಬಾಂಗ್ಲಾದೇಶದಲ್ಲಿರಲಿಲ್ಲ , ಹಸೀನಾ ಕುಟುಂಬದವರನ್ನ ಒಬ್ಬೊಬ್ಬರನ್ನಾಗಿ ಕೊಲ್ಲಲಾಯಿತು , ಅದರಲ್ಲಿ ಬೆರಳೆಣಿಕೆಯ ಮಂದಿ ಬದುಕುಳಿದರು ಅದರಲ್ಲಿ ಹಸೀನಾ ಕೂಡ ಒಬ್ಬರು . ಅವರಿಗೆ ಬಾಂಗ್ಲಾದೇಶಕ್ಕೆ ಪ್ರವೇಶವಿರಲಿಲ್ಲ ಆದರೆ 1981 ರಲ್ಲಿ ಬಾಂಗ್ಲಾದೇಶಕ್ಕೆ ಆಗಮಿಸಿದ ಹಸೀನಾ ನಂತರ ನಡೆದುಕೊಂಡ ರೀತಿ ನಿಜವಾಗಿಯೂ ರೋಚಕ .
ರಾಜಕೀಯವಾಗಿ ಬಲಿಷ್ಠ ನೆಲೆಯನ್ನು ಕಂಡುಕೊಂಡಿದ್ದ ಶೇಕ್ ಹಸೀನಾ ಅಪ್ಪ ನ ಹತ್ಯೆಯ ಪ್ರತಿಕಾರಕ್ಕೋಸ್ಕರ ಕಾಯುತ್ತಿದ್ದರೇನೋ ಎಂಬ ರೀತಿಯಲ್ಲಿ ವರ್ತಿಸತೊಡಗಿದರು . ತಂದೆಯ ಹತ್ಯೆಯಲ್ಲಿ ನೇರವಾಗಿ ಹಾಗು ಪರೋಕ್ಷವಾಗಿ ಭಾಗಿಯಾಗಿದ್ದ ಎಲ್ಲರನ್ನು ಹುಡುಕಿ ಹುಡುಕಿ ಸೆರೆಮನೆಗೆ ದಬ್ಬಿದರು, ಆದರೆ ಅವರ ಪ್ರತಿಕಾರದ ಜ್ವಾಲೆ ಅಷ್ಟಕ್ಕೇ ಸುಮ್ಮನಿರಲಿಲ್ಲ , ಒಬ್ಬೊಬ್ಬರನ್ನೇ ಸದ್ದಿಲ್ಲದೇ ದೇಶ ದ್ರೋಹದ ಆರೋಪದ ಮೇಲೆ ಮರಣದಂಡನೆ ನೀಡುತ್ತಲೇ ಮುಗಿಸಿಬಿಟ್ರು . ತನ್ನ ಹತ್ಯೆಗೆ ಯತ್ನಿಸಿದ್ದಾರೆ ಎಂಬ ಆರೋಪದಡಿಯಲ್ಲಿ 17 ಜನರನ್ನ ಹತ್ಯೆ (ಮರಣದಂಡನೆ )ಮಾಡಿಸಿಯೇ ಬಿಟ್ರು .ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಮಾಡಿ ಪ್ರತಿಭಟನೆಗಳು ನಡೆದವು ಆದರೆ ಹಸೀನಾ ಜಗ್ಗಲಿಲ್ಲ , ತನ್ನ ದೇಶ ಮೊದಲು ಎಂಬ ಸಿದ್ದಂತವನ್ನ ಜನರಲ್ಲಿ ತುಂಬಿದ ಹಸೀನಾ ಇಂದಿಗೂ ಬಾಂಗ್ಲಾದೇಶದ ಜನರ ಪ್ರೀತಿಯ ನಾಯಕಿ .
ಭಯೋತ್ಪಾದಕ ಚಟುವಟಿಕೆಗೆ ತೀವ್ರ ವಿರೋಧಿಯಾಗಿರುವ ಶೇಖ್ ಹಸೀನಾ ಕೆಲವು ವರುಷಗಳ ಹಿಂದೆ ನಡೆದ ಢಾಕಾ ದಾಳಿಯ ನಂತರ ಭಯೋತ್ಪಾದಕರ ವಿರುದ್ಧ ತೀವ್ರ ಸ್ವರೂಪದ ದಾಳಿಗೆ ಮುಂದಾದರು. ದೇಶದಲ್ಲಿ ಅಡಗಿ ಕೂತಿದ್ದ ಉಗ್ರರನ್ನ ಹುಡುಕಿ ಹುಡುಕಿ ಕೊಲ್ಲಲು ತನ್ನ ಕಮಾಂಡೋಗಳಿಗೆ ಸೂಚನೆ ನೀಡಿದ ಹಸೀನಾ ಇಂದಿಗೂ ಆ ಕೆಲಸವನ್ನು ಮುಂದುವರೆಸುತ್ತಿದ್ದಾರೆ . ಉಗ್ರರ ನೆಲೆಯನ್ನೇ ಬಾಂಗ್ಲಾದೇಶದಲ್ಲಿ ಇಲ್ಲವಾಗಿಸಿದ ದಿಟ್ಟ ಪ್ರಧಾನಿ ಅವರಾಗಿದ್ದಾರೆ . ಪಾಕಿಸ್ಥಾನವನ್ನು ಪ್ರೀತಿಸುವವರನ್ನು ಶಿಕ್ಷಿಸಲೇಬೇಕು ಎಂದು ಹೇಳಿದ್ದ ಹಸೀನಾ ಭಾರತದ ಜೊತೆ ಉತ್ತಮ ಸಂಬಂಧವಿಟ್ಟುಕೊಂಡಿದ್ದಾರೆ. ಶೇಕ್ ಹಸೀನಾ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಿರುವುದು ಭಾರತಕ್ಕೆ ಅನುಕೂಲವೇ ಆಗಿದೆ .
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.