ನಮ್ಮ ಕಣ್ಣಂಗಾರು, ಕಡಬ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮೊಳಗಲಿದೆ ಮಾನವ ಸರಪಳಿಯ ಕಲರವ. ಬನ್ನಿ ಒಂದಾಗಿ ನಿಂತು ರಾಷ್ಟ್ರದ ಮಹಿಮೆಯನ್ನು ಕೊಂಡಾಡೋಣ
ತಲಾಖ್ ಬಗ್ಗೆ ಪುನಃ ಸುಗ್ರಿವಾಜ್ಞೆ ಖೇಧಕರ
(www.vknews.in) : ಸಮಸ್ತ ವಿದ್ವಾಂಸ ಸಭೆಯು ಎಲ್ಲಾ ಕಾಲದಲ್ಲಿ ಧಾರ್ಮಿಕ ಪ್ರಜ್ಞೆ ಯೊಂದಿಗೆ ರಾಷ್ಟ್ರ ಭಕ್ತಿಯನ್ನು ಪ್ರತಿಪಾದಿಸುತ್ತಾ ಬಂದಿದೆ. ಶ್ರೇಷ್ಠ ವಿದ್ವಾಂಸ ರಾದ ಶಂಸುಲ್ ಉಲಮಾ ಮತ್ತು ಸಮಸ್ತದ ಅಗ್ರೇಸರ ನಾಯಕರು ಕೂಡಾ ಅದನ್ನೇ ಎತ್ತಿಹಿಡಿದು ಮುನ್ನಡೆದಿದ್ದಾರೆ.
ಸಮಸ್ತದ ನಿರ್ದೇಶ ಪ್ರಕಾರ, ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿಯ ಆದೇಶದಂತೆ, ಪ್ರತಿ ಜಿಲ್ಲಾ ಕೇಂದ್ರ ಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡು ದೇಶ ರಕ್ಷಣೆಯ ಪ್ರತಿಜ್ಞೆ ಬೋಧಿಸುವ ಮಂತ್ರವಾಗಿದೆ, ರಾಷ್ಟ್ರ ರಕ್ಷಣೆ ಗೆ ಸೌಹಾರ್ದತೆಯ ಸಂಕಲ್ಪ.
ಜಗತ್ತಿನ ಬಲಿಷ್ಟ ಡೆಮಾಕ್ರಸಿ ಸಿದ್ದಾಂತ ವಿರುವ ದೇಶ ಭಾರತ.ಭೌಗೋಳಿಕ ಸನಾತನ ಪುರಾತನ ಭವ್ಯ ಪರಂಪರೆಯ ವೈವಿಧ್ಯಮಯ ನಾಡು ನಮ್ಮದು. ಸ್ವತಂತ್ರ ಭಾರತ ಪ್ರಜಾತಂತ್ರ ಗಣರಾಜ್ಯ ವಾಗಿ ಬೆಳಗಿದ್ದ ದಿನ 1950 ಜನವರಿ 26. ಸಮಸ್ತ ಭಾರತೀಯರಿಗೆ ಇದು ಉಜ್ವಲವಾದ ಸುದಿನ.ಬಹುರೂಪತೆಯ ಭಾರತೀಯತೆಯನ್ನು ಸಂಪೂರ್ಣವಾಗಿ ಅಪ್ಪಿಕೊಂಡ ದಿನ.ಸಹೋದರತೆ , ಸ್ವಾತಂತ್ರ್ಯ, ಸಮಾನತೆ ಈ ಮೂರು ಅಂಶಗಳನ್ನೊಳಗೊಂಡ ಪವಿತ್ರ ಪಾವನ ಸಂವಿಧಾನ ಜಾರಿಯಾದ ದಿನವನ್ನು ಹಬ್ಬವಾಗಿ ಆಚರಿಸುವುದರೊಂದಿಗೆ ಸೌಹಾರ್ದತೆಯ ಸಂದೇಶವನ್ನು ಎಸ್ಕೆ ಎಸ್ ಎಸ್ ಎಫ್ ಎತ್ತಿ ಹಿಡಿಯುತ್ತದೆ. ಮಾನವ ಸರಪಳಿ ಮೂಲಕ ಲಕ್ಷ ಲಕ್ಷ ಹೃದಯದ ಲ್ಲಿ ರಾಷ್ಟ್ರ ಭಕ್ತಿಯನ್ನು ಅದು ಜಾಗ್ರತಿ ಗೊಳಿಸುತ್ತದೆ.
ಎಲ್ಲಾ ಕ್ಕಿಂತಲೂ ಮಿಗಿಲಾದ ಶಕ್ತಿ ಸಹೃದಯ ಮನಸ್ಸಿನ ಶಕ್ತಿಯಾಗಿದೆ.ಆ ಬಲಿಷ್ಟ ಸೌಹಾರ್ದತೆಯ ಮನಸ್ಸುಗಳನ್ನು ಜೊಡಿಸುವ ಮೂಲಕ ಸಂವಿಧಾನ ವನ್ನು ಬಲ ಪಡಿಸಿ ರಾಷ್ಟ್ರದ ರಕ್ಷಣೆ ಗೆ ಕಟಿ ಬದ್ಧ ರಾಗಬೇಕೆನ್ನುವುದು ಎಸ್ಕೆ ಎಸ್ ಎಸ್ ಎಫ್ ನ ಗುರಿಯಾಗಿದೆ. ಹೃದಯ ಗಳನ್ನು ಬೆಸೆಯುವ ಮೂಲಕ ಮಾತ್ರ ಅದು ಸಾದ್ಯವೆಂದು ಅದು ಸಾರುತ್ತದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರೂ ಜಾತಿ ಭೇದ ಮರೆತು ಒಂದಾಗಿ ಹೋರಾಡಿದ ಕಾರಣ ನಮ್ಮ ದೇಶ ಡೆಮಾಕ್ರಸಿ ದೇಶವಾಗಿ ಹೊರಹೊಮ್ಮಿತು. ದೇಶದ ವಿಭಜನೆ ಯು ಭಾರತೀಯರನ್ನು ಕಂಗೆಡಿಸಿದರೆ ನಂತರದಲ್ಲಿ ನಡೆದ ಹಿಂಸೆಯು ಲಕ್ಷಾಂತರ ಭಾರತೀಯರನ್ನು ಬಲಿ ತೆಗೆಯಿತು. ಆದರೂ ದೇಶ ಇಂದು ಆತ್ಮ ಗೌರವ ದೊಂದಿಗೆ ಎದ್ದು ನಿಂತಿದ್ದರೆ ಅದು ನಮ್ಮ ಮಹಾನ್ ನಾಯಕರು ತೋರಿದ ಎದೆಗಾರಿಕೆ ಮಾತ್ರ ವಾಗಿದೆ. ದೇಶ ನೂರಾರು ಸಂಸ್ಥಾನ ಗಳಾಗಿ ಹೋಳಾಗಿ ಹೋಗದಿರಲು ಕಾರಣ ಸರ್ವರಿಗೂ ಸಮಪಾಲು ಎಲ್ಲರಿಗೂ ಸಮಾನ ಕಾನೂನು ಮತ್ತು ಸಮಾನ ಗೌರವ ನೀಡುವ ಸಂವಿಧಾನ ಕಾರಣವಾಗಿದೆ.ಅದನ್ನು ಉಳಿಸಿಕೊಳ್ಳುವುದರಲ್ಲಿ ಈ ದೇಶದ ಉಜ್ವಲ ಭವಿಷ್ಯ ಅಡಗಿದೆ.ಅದು ಸೌಹಾರ್ದತೆಯ ಲ್ಲಿ ಮಾತ್ರ ಸಾದ್ಯವೆಂದು ಎಸ್ಕೆ ಎಸ್ ಎಸ್ ಎಫ್ ಪ್ರತಿಪಾದಿಸುತ್ತದೆ.
ಸೌಹಾರ್ದತೆಯು ನಮ್ಮ ಪರಂಪರೆಯೂ ಆಗಿದೆ.ಚೇರಮಾನ್ ಪೆರುಮಾಳ್,ಸಹೋದರಿ ಶ್ರೀ ದೇವಿ, ಮಗ ಮಹಾಬಲಿ ದೇಶದ ಪ್ರಥಮ ಮುಸ್ಲಿಂ ರಾಜ ಮನೆತನ ವಾಗಿರುತ್ತದೆ.ಅವರ ಸಹಕಾರ ಮಾಲಿಕುದ್ದೀನಾರ್ ರವರ ದಅವಾ ಕಾರ್ಯಕ್ಕೆ ಚಾಲನೆ ನೀಡಿತು.ಮಸೀದಿಗಳು ನಿರ್ಮಾಣಗೊಂಡಿತು. ನಂತರದ ಕಾಲದಲ್ಲಿ ಉಲಮಾಗಳು ಸಾದಾತುಗಳು ಸೌಹಾರ್ದತೆಯ ಪರಂಪರೆಯನ್ನು ಮುಂದುವರೆಸಿದರು.ಮಹಾನ್ ವಿದ್ವತ್ ಪ್ರತಿಭೆ ಶಂಸುಲ್ ಉಲಮಾ ಮತ್ತು ಸಮಸ್ತದ ಉಲಮಾ ವಿದ್ವಾಂಸರು ದೇಶದ ಸೆಕ್ಯೂಲರ್ ಸಿದ್ದಾಂತ ವನ್ನು ಬೆಂಬಲಿಸಲು ಮತ್ತು ಬಲಪಡಿಸಲು ಕರೆ ನೀಡುತ್ತಾರೆ.ಅದು ನಮ್ಮ ರಾಷ್ಟೀಯ ನಿಲುವು ಕೂಡಾ ಆಗಿರುತ್ತದೆ.
ರಾಷ್ಟ್ರದ ಬಗ್ಗೆ ಪ್ರೀತಿ ತೋರುವುದು ಪರಮವಾದ ನಂಬಿಕೆಯ ಭಾಗವೆಂದು ಸಮಸ್ತ ಶಿಕ್ಷಣ ಮಂಡಳಿ ಕರೆ ನೀಡುತ್ತದೆ. حب الوطن من الايمان “ಸ್ವರಾಜ್ಯ ಪ್ರೀತಿಯು ನಂಬಿಕೆಯ ಭಾಗ” ಎಂಬ ಪಾಠವನ್ನೇ ಮದ್ರಸ ಪುಸ್ತಕದಲ್ಲಿ ಆಳವಡಿಸಿದೆ. ಸಮಸ್ತದ ಎಪ್ಪತ್ತರ ಮಹಾ ಸಮ್ಮೇಳನದಲ್ಲಿ ಶೈಖುನಾ ಶಂಸುಲ್ ಉಲಮಾ ರವರು ಇದೇ ಕಾರಣಕ್ಕಾಗಿ ಮತೀಯ ಸಾಮರಸ್ಯ ಉಳಿಯಬೇಕಾದರೆ ಸಮಸ್ತ ಉಳಿಯಬೇಕೆಂದು ಕರೆ ನೀಡಿದ್ದರು.
ನಮ್ಮ ಧಾರ್ಮಿಕ ಕಾರ್ಯ ಚಟುವಟಿಕೆಗಳು ಅಡೆತಡೆ ಇಲ್ಲದೇ ನಡೆಯುವುದು ಕೂಡಾ ಸಂವಿಧಾನವು ನಮಗೆ ನೀಡಿದ ಹಕ್ಕಿನ ಕಾರಣವಾಗಿದೆ.
artical 25 ಪ್ರಕಾರ
all persons are equally entilted to freedom of conscience and the right freely to profess, practise and propagate religion.
ಧಾರ್ಮಿಕ ನಂಬಿಕೆ, ಆಚರಣೆ,ಬೋಧನೆ, ಪ್ರಚಾರ ಕಾರ್ಯಗಳಿಗೆ ಮುಕ್ತ ಸ್ವಾತಂತ್ರ್ಯ ಸಿಕ್ಕಿರುವುದು ಈ ಹಕ್ಕಿನ ಮೂಲಕವೇ ಆಗಿರುತ್ತದೆ.ಇದನ್ನು ದುರ್ಬಲ ವಾಗದಂತೆ ನೋಡಿಕೊಳ್ಳುವುದು ಪ್ರತೀ ಭಾರತೀಯನ ಕರ್ತವ್ಯವೂ ಆಗಿರುತ್ತದೆ. ಈ ದೇಶ ಜಾತ್ಯತೀತ ವಾಗಿ ಮಾತ್ರ ಬೆಳಗಲು ಸಾಧ್ಯ.ಹತ್ತಿಪ್ಪತ್ತು ಮೈಲುಗಳಿಗೆ ಬದಲಾಗುವ ಸಂಸ್ಕೃತಿ ,ನೂರಾರು ಭಾಷೆ ಸಾವಿರಾರು ಜಾತಿ ಆಚಾರ,ವಿಚಾರ ಆಹಾರ, ವಿಹಾರ ಗಳೆಲ್ಲವೂ ವಿಭಿನ್ನ. ಇವೆಲ್ಲವನ್ನೂ ಒಂದೇ ಸೂರಿನಲ್ಲಿ ತರಲು ಬಲಿಷ್ಟ ವ್ಯವಸ್ಥೆ ಅನಿವಾರ್ಯವಾಗಿತ್ತು. ಸ್ವಾತಂತ್ರ್ಯ ನಂತರದ ಭವಿಷ್ಯದ ಬಗ್ಗೆ ಎಲ್ಲರಿಗೂ ಆತಂಕವಿತ್ತು.
ಗಾಂಧಿ, ನೆಹರು, ಆಜಾದ್ ಆದರೆ ಬುದ್ದಿ ಸಾಮರ್ಥ್ಯದ ಅದ್ಭುತ ಕಲಾಗಾರ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು 368 ಮಂದಿ ಸಹಚರರು ಸೇರಿ 2 ವರ್ಷ 11 ತಿಂಗಳು 18 ದಿವಸಗಳಲ್ಲಿ 63 ಲಕ್ಷ 98 ಸಾವಿರದ 729 ರುಪಾಯಿ ವೆಚ್ಚದಲ್ಲಿ ಸಂವಿಧಾನದ ಕರಡನ್ನು ಸಿದ್ದ ಪಡಿಸಿದರು. ಆ ಮೂಲಕ ಈ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪ್ರಜಾತಂತ್ರ ರಾಷ್ಟವಾಗಿ ಮೆರೆಯಿತು. ಸಂವಿಧಾನ ಸಾರುವು ಸಮಾನತೆ ಮತ್ತು ಸಹೋದರತೆಯು ಇಸ್ಲಾಮಿನಲ್ಲಿಯೂ ಕಾಣಬಹುದು. ಈ ಕಾರಣ ದಿಂದಲೇ ಸರೋಜಿನಿ ನಾಯ್ಡು ಒಮ್ಮೆ ಹೇಳಿದ್ದು,
ಇಸ್ಲಾಮಿನಲ್ಲಿರುವ ಡೆಮಾಕ್ರಸಿ ಯನ್ನು ನಾನು ಬೇರಲ್ಲಿಯೂ ನೋಡಿಲ್ಲ.ಮುಸ್ಲಿಮರೆಲ್ಲರೂ ಬಾಂಗ್ ಕರೆಯಲ್ಪಟ್ಟಾಗ ಮಸೀದಿಗೆ ತೆರಳಿ ರಾಜ ಪ್ರಜೆ ಬಡವ ಬಲ್ಲಿದ ನೆಂಬ ವ್ಯತ್ಯಾಸ ವಿಲ್ಲದೇ ಭುಜಕ್ಕೆ ಭುಜ ಕೊಟ್ಟು ನಿಲ್ಲುವಾಗ ಡೆಮಾಕ್ರಸಿ ಪೂರ್ಣ ವಾಗುತ್ತದೆ. ಇಸ್ಲಾಮ್ ಹುಟ್ಟಿನಿಂದಲೇ ಸಮಾನರೆಂದು ಹೇಳುತ್ತದೆ
يَا أَيُّهَا النَّاسُ إِنَّا خَلَقْنَاكُمْ مِنْ ذَكَرٍ وَأُنْثَىٰ وَجَعَلْنَاكُمْ شُعُوبًا وَقَبَائِلَ لِتَعَارَفُوا ۚ إِنَّ أَكْرَمَكُمْ عِنْدَ اللَّهِ أَتْقَاكُمْ ۚ إِنَّ اللَّهَ عَلِيمٌ خَبِيرٌ
*ಓ ಮನುಷ್ಯರೇ! ಖಂಡಿತವಾಗಿಯೂ ನಾವು ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿರುವೆವು. ನೀವು ಪರಸ್ಪರ ಗುರುತಿಸುವುದಕ್ಕಾಗಿ ನಾವು ನಿಮ್ಮನ್ನು ವಿವಿಧ ಸಮುದಾಯ ಮತ್ತು ಜನಾಂಗಗಳನ್ನಾಗಿ ಮಾಡಿರುವೆವು. ಖಂಡಿತವಾಗಿಯೂ ಅಲ್ಲಾಹುವಿನ ಬಳಿ ನಿಮ್ಮ ಪೈಕಿ ಅತ್ಯಂತ ಗೌರವಾನ್ವಿತನು ನಿಮ್ಮ ಪೈಕಿ ಅತಿಹೆಚ್ಚು ಭಯಭಕ್ತಿ ಪಾಲಿಸುವವನಾಗಿರುವನು.ಖಂಡಿತವಾಗಿಯೂ ಅಲ್ಲಾಹು ಸರ್ವಜ್ಞನೂ ಸೂಕ್ಷ್ಮ ಜ್ಞಾನಿಯೂ ಆಗಿರುವನು. ಸರ್ವರಿಗೂ ನ್ಯಾಯ ಧರ್ಮದ ಮೂಲ ತತ್ವ ವಾಗಿದೆ.ಕುರಾನ್ ಹೇಳುತ್ತದೆ.
يَا أَيُّهَا الَّذِينَ آمَنُوا كُونُوا قَوَّامِينَ بِالْقِسْطِ شُهَدَاءَ لِلَّهِ وَلَوْ عَلَىٰ أَنْفُسِكُمْ أَوِ الْوَالِدَيْنِ وَالْأَقْرَبِينَ ۚ إِنْ يَكُنْ غَنِيًّا أَوْ فَقِيرًا فَاللَّهُ أَوْلَىٰ بِهِمَا ۖ فَلَا تَتَّبِعُوا الْهَوَىٰ أَنْ تَعْدِلُوا ۚ وَإِنْ تَلْوُوا أَوْ تُعْرِضُوا فَإِنَّ اللَّهَ كَانَ بِمَا تَعْمَلُونَ خَبِيرًا
ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವಿಗೋಸ್ಕರ ಸಾಕ್ಷ್ಯವಹಿಸುವವರಾಗಿರುತ್ತಾ ದೃಢವಾಗಿ ನಿಂತು ನ್ಯಾಯ ಪಾಲಿಸುವವರಾಗಿರಿ. ಅದು ಸ್ವತಃ ನಿಮಗೆ ಅಥವಾ ನಿಮ್ಮ ಮಾತಾಪಿತರಿಗೆ ಅಥವಾ ನಿಕಟ ಸಂಬಂಧಿಕರಿಗೆ ವಿರುದ್ಧವಾಗಿದ್ದರೂ ಸರಿ. (ನ್ಯಾಯಬೇಡುವವನು) ಧನಿಕನಾಗಿರಲಿ ಬಡವನಾಗಿರಲಿ ಅವರಿಬ್ಬರೊಂದಿಗೂ ಹೆಚ್ಚು ನಿಕಟನಾಗಿರುವವನು ಅಲ್ಲಾಹುವಾಗಿರುವನು. ಆದ್ದರಿಂದ ನೀವು ನ್ಯಾಯ ಪಾಲಿಸದೆ ದೇಹೇಚ್ಛೆಗಳನ್ನು ಅನುಸರಿಸದಿರಿ. ನೀವು ತಿರುಚುವುದಾಗಲಿ ಹಿಂದೆ ಸರಿಯುವುದಾಗಲಿ ಮಾಡಿದರೆ ಖಂಡಿತವಾಗಿಯೂ ನೀವು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹು ಸೂಕ್ಷ್ಮವಾಗಿ ಅರಿಯುವವನಾಗಿರುವನು.
ಸಂವಿಧಾನದ ಮೂಲಕ ಪ್ರತೀ ಭಾರತೀಯ ನೂ ಸ್ವತಂತ್ರನಾಗಿ ವ್ಯವಹರಿಸಲು ಶಕ್ತನಾಗಿದ್ದಾನೆ.ಪ್ರತಿನಿಧಿಗಳನ್ನು ಆರಿಸುವ,ಅಧಿಕಾರ ವನ್ನು ಬದಲಿಸುವ ಹಕ್ಕನ್ನು ಪಡೆದಿರುತ್ತಾನೆ. ಅನ್ಯಾಯದ ವಿರುದ್ದ ಹೋರಾಡುವ ಹಕ್ಕನ್ನು ಹೊಂದಿದ್ದಾನೆ. ಸರಕಾರದ ಅಧಿಕಾರ, ಪೌರರ ಹಕ್ಕು ಕರ್ತವ್ಯಗಳು ಸರಕಾರ ಮತ್ತು ಪ್ರಜೆಗಳು ಮಧ್ಯೆ ಇರುವ ಸಂಬಂಧ ಗಳನ್ನು ತಿಳಿಸುವ ದಾಖಲೆಯೇ ಸಂವಿಧಾನ.
ರಾಷ್ಟ್ರದ ಏಕತೆ ಮತ್ತು ಅಖಂಡತೆಯನ್ನು ಬಲ ಪಡಿಸಿ ಎಲ್ಲರಲ್ಲಿಯೂ ಭ್ರಾತೃತ್ವ ಭಾವನೆ ಯನ್ನು ಬೆಳೆಸುವಂತೆ ಶ್ರದ್ಧಾ ಪೂರ್ವಕವಾಗಿ ದೃಡ ಸಂಕಲ್ಪ ಮಾಡಲು ಸಂವಿಧಾನ ಕರೆ ನೀಡುತ್ತದೆ. ಈ ಮಹತ್ತರವಾದ ಕರ್ತವ್ಯವನ್ನು ಎಸ್ಕೆ ಎಸ್ ಎಸ್ ಎಫ್ ಪ್ರತಿ ವರ್ಷ ನಿರ್ವಹಿಸುತ್ತದೆ.
ರಾಜಕೀಯ ಷಡ್ಯಂತ್ರ ,ಜಾತಿ ವೈಮನಸ್ಯ, ಪ್ರಭುತ್ವ ದ ಶೋಷಣೆ,ರಾಷ್ಟ್ರದಲ್ಲಿ ವರ್ಗೀಯತೆ, ಅಪನಂಬಿಕೆ,ಅಸಹಿಷ್ಣುತೆಗೆ ಕಾರಣವಾಗಿ ಅಮಾಯಕ ಜನರು ಬಲಿಯಾಗುತ್ತಿರುವುದು ದುಃಖದ ಸಂಗತಿ.
ಕೋರ್ಟು,ಶಿಕ್ಷಣ ವ್ಯವಸ್ಥೆ, ಚುನಾವಣಾ ಸಂಸ್ಥೆ,ಪತ್ರಿಕೋದ್ಯಮ ಮುಂತಾದ ಪವಿತ್ರ ಕೇಂದ್ರಗಳ ಬಗ್ಗೆಯೇ ಅನುಮಾನ ಪಡುವ ಅವಸ್ಥೆ ಮುಟ್ಟಿರುವುದು ಖೇದಕರ. ಎಲ್ಲಾ ಧರ್ಮದ ಆಚಾರಗಳಿಗೆ ಮಾನ್ಯತೆ ದೊರಕಬೇಕೆನ್ನುವುದು ನಮ್ಮ ದ್ಯೇಯ. ತಲಾಖ್ ವಿಚಾರ ದಲ್ಲಿ ಕೇಂದ್ರ ಸರಕಾರ ಏನು ಮಾಡಲು ಹೊರಟಿದೆಯೋ ತಿಳಿಯದು.ಎರಡನೇಯ ಸಲ ಸುಗ್ರಿವಾಜ್ಞೆ ಹೊರಡಿಸಿದೆ.
ಪ್ರಕೃತಿ ವಿರುದ್ಧ ಲೈಂಗಿಕತೆಗೆ ಪರವಾನಿಗೆ ನೀಡುವುದು,ಅನಾಚಾರಕ್ಕೆ ಅವಕಾಶವನ್ನು ಮಾಡಿಕೊಡುವುದರ ಬದಲು ಸುಸಂಸ್ಕೃತ ಸಮಾಜಕ್ಕಾಗಿ ದುಡಿಯಬೇಕಾಗಿದೆ.
ಪತ್ರಿಕೋದ್ಯಮ ದ ಹೆಸರಲ್ಲಿ ಮಾನಹಾನಿ ಮಾಡುವ, ಕೋಮು ಭಾವನೆಗಳನ್ನು ಕೆದಕುವ ಮೀಡಿಯಾ ವಿರುದ್ದ ಕ್ರಮ ಜರಗಿಸಬೇಕಾಗಿದೆ.
ಕಾರ್ಯಾಂಗ ನ್ಯಾಯಾಂಗ ಶಾಸಕಾಂಗ ವ್ಯವಸ್ಥೆ ಯನ್ನೇ ಬುಡಮೇಲು ಮಾಡಲು ಹೊರಟ ಮತಾಂಧ ಶಕ್ತಿಗಳಿಂದ ದೇಶವನ್ನು ರಕ್ಷಿಸಬೇಕಾಗಿದೆ.ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎಂದು ಹೇಳುವ ಮೂಲಕ ಪರಮೋಚ್ಚ ನ್ಯಾಯಾಲಯ ದ ಉನ್ನತ ನ್ಯಾಯಾಧೀಶರು ತಮ್ಮ ಅಸಹಾಯಕತೆಯನ್ನು ಹೊರಹಾಕುವಷ್ಟು ಪರಿಸ್ಥಿತಿ ಬಿಗಡಾಯಿಸಿರೋದು ರಾಷ್ಟ್ರೀಯ ದುರಂತವಾಗಿದೆ.
ಸಂವಿಧಾನಾತ್ಮಕ ವಾಗಿ ಮತ ಪಡೆದು ಗೆದ್ದು ಜನ ಸೇವೆ ಮಾಡುವ ಬದಲು ಸಂವಿಧಾನ ವ್ಯವಸ್ಥೆಯ ನ್ನೇ ಬುಡಮೇಲು ಮಾಡುವ ರೀತಿಯಲ್ಲಿ ರೆಸಾರ್ಟ್ ರಾಜಕೀಯ, ಕುದುರೆ, ಕತ್ತೆ ವ್ಯಾಪಾರ, ಎಂ ಎಲ್ ಎ ಖರೀದಿ ಮುಂತಾದ ವಾರ್ತೆ ಗಳು ಅತ್ಯಂತ ಹೇಸಿಗೆಯ ಸಂಗತಿಯಾಗಿದೆ.
ಸರ್ವರಿಗೂ ಸ್ವಾತಂತ್ರ್ಯ, ಸಮಾನತೆ ಸಿಗಲಿ ಸೌಹಾರ್ದತೆಯ ನಾಡು ಬೆಳಗಲಿ ಎಂಬ ನಿಟ್ಟಿನಲ್ಲಿ ಜನವರಿ 26 ರ ಸಂಜೆ ರಾಷ್ಟ್ರ ರಕ್ಷಣೆಗಾಗಿ ಸೌಹಾರ್ದತೆಯ ಸಂಕಲ್ಪ ಪ್ರತಿಜ್ಞೆ ಯು ನಡೆಯಲಿರುವ ಉಡುಪಿ ಜಿಲ್ಲೆಯ ಕಣ್ಣಂಗಾರು ಮತ್ತು ದ.ಕ ಜಿಲ್ಲೆಯ ಕಡಬದಲ್ಲಿ ಸಹಸ್ರಾರು ಮಂದಿಯ ಕೈಗಳಲ್ಲಿ ನಮ್ಮ ಕೈಗಳನ್ನು ಸೇರಿಸೊಣ. ರಾಷ್ಟ್ರ ಶಕ್ತಿ ಮೆರೆಯೋಣ.
ವರದಿ : ಅಲ್ ಅಹ್ಸನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.