(www.vknews.com) : ಕಳೆದ ಸುಮಾರು ಎರಡು ದಶಕ ಗಳಿಂದ ನಿರಂತರವಾಗಿ ಶೈಕ್ಷಣಿಕ , ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ದುಬೈ ಯ ಪ್ರತಿಷ್ಠಿತ ಬ್ಯಾರೀಸ್ ಕಲ್ಚರಲ್ ಫೋರಮ್ ( BCF ) ಪ್ರತೀ ವರ್ಷ ಸಾವಿರಾರು ಅನಿವಾಸಿ ಕನ್ನಡಿಗರನ್ನು ಒಟ್ಟು ಗೂಡಿಸಿ ಅದ್ದೂರಿಯ ಬಿಸಿಫ್ ಕ್ರೀಡಾ ಕೂಟವನ್ನು ನಡೆಸಿಕೊಂಡು ಬರುತ್ತಿದ್ದು ಇದು UAE ಯ ಅನಿವಾಸಿ ಕನ್ನಡಿಗರಲ್ಲಿ ಅತೀ ಜನಪ್ರಿಯ ಹೊಂದಿರುವ ಒಂದು ಕ್ರೀಡಾ ಸಮಾವೇಶವಾಗಿದೆ .ಅದರಂತೆ ಈ ವರ್ಷ ಕೂಡಾ BCF ಕ್ರೀಡೋತ್ಸವ 2019 ( BCF SPORTS FESTIVAL 2019 ) ಇದೆ ಬರುವ ದಿನಾಂಕ 15 / 02 / 2019 ನೇ ಶುಕ್ರವಾರ ಅಜ್ಮಾನಿನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಕ್ರೀಡಾಂಗಣದಲ್ಲಿ ಏರ್ಪಡಿಸುವುದಾಗಿ BCF ಕ್ರೀಡಾ ಕೂಟ ಸಮಿತಿ 2019 ಚಯರ್ಮನ್ ಜನಾಬ್ ಅಬ್ದುಲ್ ರಹಿಮಾನ್ ಸಜಿಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
UAE ಯಾದ್ಯಂತ ಇರುವ ಸಾವಿರಾರು ಮಂದಿ ಅನಿವಾಸಿ ಕನ್ನಡಿಗರ ಮತ್ತು ಹಲವಾರು ಗೌರವಾನ್ವಿತ ಅತಿಥಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಜನಸ್ತೋಮ ಭಾಗವಹಿಸುವ ನಿರೀಕ್ಷೆ ಇರುವ ಈ ಕ್ರೀಡಾ ಕೂಟದ ಅಧ್ಯಕ್ಷತೆಯನ್ನು BCF ಅಧ್ಯಕ್ಷರಾದ ಡಾ ಬಿ ಕೆ ಯೂಸುಫ್ ವಹಿಸಲಿದ್ದು BCF ಇದರ ಸ್ಥಾಪಕ ಪೋಷಕರಾದ ಡಾ ತುಂಬೆ ಮೊಹಿಯುದ್ದೀನ್ ಹಾಗೂ ಇತರ ಹಲವಾರು ಗಣ್ಯ ವ್ಯಕ್ತಿಗಳ ಉಪಸ್ಥತಿಯಲ್ಲಿ ಈ ನಡೆಯುವ ಈವ್ ಸಮಾರಂಭದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕೀಡೆಗಳು ಮತ್ತು ಕರಾವಳಿ ಕರ್ನಾಟಕದ ಹಲವಾರು ವಿಶೇಷ ಕ್ರೀಡೆಗಳನ್ನು ಏರ್ಪಡಿಸಲಾಗೋದು. ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ವಿವಿಧ ರೀತಿಯ ಕ್ರೀಡೆಗಳಲ್ಲಿ ಮುಖ್ಯವಾಗಿ ಕ್ರಿಕೆಟ್, ವಾಲೀ ಬಾಲ್ , ಕಬಡ್ಡಿ, ತ್ರೋ ಬಾಲ್, ಬ್ಯಾಡ ಮಿಂಟನ್, ಬಿಲಿಯರ್ಡ್ಸ್, ರಿಲೇ, ಹಗ್ಗ ಜಗ್ಗಾಟ, ಮೊದಲಾದ ಕ್ರೀಡೆಗಳನ್ನು ನಡೆಸಲಾಗುವುದು. ಮಹಿಳೆಯರಿಗೆ ವಿಶೇಷವಾಗಿ ಪಾಕ ಸ್ಪರ್ಡ್ಗೆ ( Cookery Competition ), ಮೆಹಂದಿ ಡಿಸೈನ್ ಸ್ಪರ್ಧೆ ಮೊದಲಾದ ಆಕರ್ಷಕ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.
ವಿಶೇಷ ಆಕರ್ಷಣೆಯಾಗಿ ಬೆಲೆ ಬಾಳುವ ರೇಫ್ ಲ್ ಬಹುಮಾನಗಳು ( RAFFLE DRAWS ) ನೀಡಲಾಗುವುದು. ಬೆಳಿಗ್ಗೆ 8 ಘಂಟೆಯಿಂದ ರಾತ್ರಿ ಸುಮಾರು 9 ಘಂಟೆಯ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಭೋಜನದ ಜೊತೆಗೆ ಟೀ , ಕಾಫೀ ಹಾಗೂ ತಿಂಡಿ ತಿನಸುಗಳು ಲಭ್ಯವಿದೆ. ಮಾಹಿತಿಗಳಿಗಾಗಿ ಈ ಕೆಳಗಿನ ಮೊಬೈಲ್ ನಂಬರ್ ನಲ್ಲಿ ಸಂಪರ್ಕಿಸ ಬಹುದಾಗಿದೆ.
Abdul Rahman Sajipa 050-7983573 Afeeq Hussain 050-5883943 Rafeeq Mulky 050-5156284 Nawaz Kotakar 050-8417475 Mrs. Mumtaz : 056-2721152
BEARYS SPORTS FESTIVAL 2019 SCHEDULE OF EVENTS (Timings from: 8 am to 9 pm)
Types of Games Responsibility Contact Number 1 VolleyBall Iqbal / Aslam Karaje 055-2218351/052-9929488 2 Football Nawaz Kotekar / A Rahman Sajipa 050-8417475 / 050-7983573 3 Kabbadi Samad Birali 055-3540287 4 Badminton ( doubles) Athaulla G.K. 052-2865663 5 Billiards & Table Tennis Ashraf Sathikal 050-8407831 6 Pot Breaking Abdul Razak Muttikal 056-8033786 7 Tug of War Yakoob Dewa 050-3584256 8 Athletics ( Open Age) Rafeeq Mulky/ Ameer Moideen 050-5156284/056-2299596 Relay 100 Mtr Shot put 9 Athletics ( Under 14 Age) Nawaz Kotekar / Rafeeq Sathikal 050-8417475 / 055-7393623 Football 100 Mtr lemon and spoon 3 legged race 10 March Past Rauf Kotekar 050-2555645 11 Cookery & Mehandi Competition,Ladies & Children Games Mrs. Mumtaz Mrs. Shahnaz Mrs. Asiya 056-2721152 050-2552734 056-6576165
For Registration for Cookery Competition, please contact: Mrs. Mumtaz : 056-2721152 / Mrs. Shahnaz : 050-2552734 / Mrs. Asiya : 056-6576165
ಪಾಕ ಸ್ಪರ್ಧೆಯಲ್ಲಿ ಭಾಗವಹಿಸುವವರ ಗಮನಕ್ಕೆ- ಪಾಕ ಸ್ಪರ್ಧೆಯಲ್ಲಿ ಇಟ್ಟಿರುವ ವಿಭಾಗಗಳು.
1 ) ಫ್ಯೂಶನ್ ಫುಡ್ ( Fusion Food ) 2 ) ಬಾರ್ ಬಿಕ್ಯೂ ದಿಶೆಸ್ ( Bar B Qu Dishes) 3 ) ಪುಡ್ಡಿಂಗ್ಸ್ ( Puddings )
ಸ್ಪರ್ಧಾರ್ಥಿಗಳು ತಮ್ಮ ತಮ್ಮ ಪಾಕಗಳನ್ನು ( Prepared Food ) ಅಂದು ಬೆಳಿಗ್ಗೆ 11 ಗಂಟೆಗೆ ಸ್ಪರ್ಧಾ ಟೇಬಲ್ ನಲ್ಲಿ ಇಟ್ಟು ಹಾಜರು ಪಡಿಸ ಬೇಕು. ರುಚಿ ಮತ್ತು ಶೈಲಿ ಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಮಾರ್ಕು ನೀಡಲಾಗುವುದು. ಪ್ರಥಮ , ದ್ವಿತೀಯ ಮತ್ತು ತ್ರಿತೀಯ ಬಹುಮಾನ ದೊಂದಿಗೆ ಎಲ್ಲಾ ಪಾಕ ಸ್ಪರ್ಧೆಯ ಸ್ಪರ್ಧಾಳುಗಳಿಗೆ ಉತ್ತೇಜಕರ ಬಹುಮಾನಗಳನ್ನು ನೀಡಲಾಗುವುದು. ಎಲ್ಲಾ ಮೂರೂ ವಿಭಾಗಗಳಲ್ಲಿ ಭಾಗವಹಿಸಸುವವರಿಗೆ ಎರಡು ಉತ್ತೇಜಕರ ಬಹುಮಾನಗಳನ್ನು ನೀಡಲಾಗುವುದು.
BCF ಕಾರ್ಯಕಾರೀ ಸಮಿತಿಯ ಪರವಾಗಿ BCF SPORTS FESTIVAL 2019 ಇದರ ಕಮಿಟಿ ಚಯರ್ಮನ್ ಜನಾಬ್ ಅಬ್ದುಲ್ ರಹಿಮಾನ್ ಸಜಿಪ ಮತ್ತು ಇತರ ಸದಸ್ಯರು ಈ ಸಮಾರಂಭಕ್ಕೆ UAE ಮತ್ತು ಇತರ ನೆರೆಯ ಕೊಲ್ಲಿ ರಾಷ್ಟ್ರಗಳ ಅನಿವಾಸಿ ಕನ್ನಡಿಗ ಭಾಂದವರು ತಮ್ಮ ಕುಟುಂಬ ಸಮೇತ ಭಾಗವಿಸಬೇಕೆಂದು ವಿನಂತಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.