(www.vknews.com) : ಹಲೋ, ಈ ಬಾರಿಯ ಅಂಕಣದಲ್ಲಿ ನಾನು ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ಸೀಸನ್ ಓಪನರ್ ಪಂದ್ಯಕ್ಕೆ ಸಿಎಸ್ಕೆ ಯಾವ 11 ಆಟಗಾರರನ್ನು ಕಣಕ್ಕಿಳಿಸಿದರೆ ಉತ್ತಮವಾಗಿರುತ್ತದೆ ಎಂಬುದರ ಬಗೆಗೆ ಬರೆಯುತ್ತೇನೆ.
ಕಳೆದ ಬಾರಿಯ ಸೀಸನ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಹುತೇಕ ಕಳೆದ ಚಾಂಪಿಯನ್ ತಂಡವನ್ನೇ ಉಳಿಸಿಕೊಂಡಿದೆ. ಮೋಹಿತ್ ಶರ್ಮ ಹಾಗೂ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಇಬ್ಬರೇ ಹೊಸಬರಾಗಿ ಈ ಬಾರಿ ಚೆನ್ನೈ ತಂಡಕ್ಕೆ ಆಗಮಿಸಿದ್ದಾರೆ. ಇನ್ನು ಕಳೆದ ಸೀಸನ್ನಲ್ಲಿ ಗಾಯದ ಕಾರಣದಿಂದ ಹೊರಬಿದ್ದಿದ್ದ ಮಿಷೆಲ್ ಸ್ಯಾಂಟನರ್ ಕೂಡ ಈ ಬಾರಿ ತಂಡಕ್ಕೆ ಆಗಮಿಸಿದ್ದಾರೆ. ಉಳಿದಂತೆ ಚೆನ್ನೈ ತಂಡಕ್ಕೆ ಈ ಬಾರಿಯ ಮತ್ತೊಂದು ದೊಡ್ಡ ಸಂಗತಿಯೇನೆಂದರೆ ಕಳೆದ ಸೀಸನ್ನ ಎರಡನೇ ಅರ್ಧದಲ್ಲಿ ಅತ್ಯುತ್ತಮ ಆಟವಾಡಿದ್ದ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಗಿಡಿ ಗಾಯದ ಕಾರಣಕ್ಕೆ ಈ ಸೀಸನ್ನಿಂದ ಹೊರಬಿದ್ದಿದ್ದಾರೆ. ಆದುದರಿಂದ ಸಿಎಸ್ಕೆಯ ಬೌಲಿಂಗ್ ಲೈನಪ್ಗೆ ದೊಡ್ಡ ಹೊಡೆತ ಬಿದ್ದಿದೆ ಎಂದೇ ಹೇಳಬಹುದಾಗಿದೆ.
ಸಿಎಸ್ಕೆ ತಂಡದ ಓಪನರ್ಗಳಾಗಿ ನಾನು ಕಳೆದ ಸೀಸನ್ ಇದ್ದ ರಾಯುಡು ಹಾಗೂ ವ್ಯಾಟ್ಸನ್ರನ್ನೇ ಆಯ್ದುಕೊಳ್ಳುತ್ತೇನೆ. ಮೂರನೇ ಕ್ರಮಾಂಕಕ್ಕೆ ಸುರೇಶ್ ರೈನಾ, ನಾಲ್ಕನೇ ಕ್ರಮಾಂಕಕ್ಕೆ ಧೋನಿ ಹಾಗೂ ಐದನೇ ಕ್ರಮಾಂಕಕ್ಕೆ ಜಾಧವ್ ನನ್ನ ತಂಡದಲ್ಲಿ ಇರುತ್ತಾರೆ. ಆರನೇಯವರಾಗಿ ಸ್ಯಾಂಟನರ್ ಅವರನ್ನು ಆಯ್ದುಕೊಳ್ಳುತ್ತೇನೆ. ಚೆಪಾಕ್ನ ಸ್ಪಿನ್ ಕಂಡೀಷನ್ಗಳಿಗೆ ಸ್ಯಾಂಟನರ್ ಉತ್ತಮ ಆಯ್ಕೆ ಆಗಿದ್ದಾರೆ. ಅದೂ ಅಲ್ಲದೇ ಅವರು ಉತ್ತಮ ಬ್ಯಾಟಿಂಗ್ ಸಹ ಮಾಡಬಲ್ಲರು.
ಚೆಪಾಕ್ನ ಹೊರಗೆ ಬ್ಯಾಟಿಂಗ್ ಕಂಡೀಷನ್ಗಳಲ್ಲಿ ಆಡಬೇಕಾದರೆ ನಾನು ಸ್ಯಾಮ್ ಬಿಲ್ಲಿಂಗ್ಸ್ರನ್ನು ಈ ಸ್ಥಾನದಲ್ಲಿ ಆಡಿಸಲು ಇಚ್ಛಿಸುತ್ತೇನೆ. ಬಿಲ್ಲಿಂಗ್ಸ್ ಪ್ರತಿಭಾವಂತ ಬ್ಯಾಟ್ಸ್ಮನ್ ಆಗಿದ್ದು ತಂಡವನ್ನು ಗೆಲುವಿನ ದಡಕ್ಕೆ ಕರೆದೊಯ್ಯುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಸ್ಯಾಂಟನರ್ನಂತಹ ಬೌಲರ್ ಅನ್ನು ಕೀಪರ್ ಬಿಲ್ಲಿಂಗ್ಸ್ ಹೇಗೆ ರಿಪ್ಲೇಸ್ ಮಾಡುತ್ತಾರೆ ಎಂಬ ಪ್ರಶ್ನೆ ಬರಬಹುದು. ಆದರೆ ಸಿಎಸ್ಕೆಯಲ್ಲಿ ಬ್ಯಾಕಪ್ ಆಗಿ ಬ್ಯಾಟಿಂಗ್ ಲೈನಪ್ನಲ್ಲಿಯೇ ವ್ಯಾಟ್ಸನ್, ರೈನಾ ಹಾಗೂ ಜಾಧವ್ ತರಹದ ಅತ್ಯುತ್ತಮ ಪಾರ್ಟ್ ಟೈಮರ್ಗಳಿದ್ದಾರೆ. ಆದುದರಿಂದ ಆರನೇ ಕ್ರಮಾಂಕಕ್ಕೆ ಸ್ಯಾಂಟನರ್/ಬಿಲ್ಲಿಂಗ್ಸ್ ಕಂಡೀಷನ್ಗಳಿಗೆ ಅನುಗುಣವಾಗಿ. ಏಳನೇ ಕ್ರಮಾಂಕದಲ್ಲಿ ಬ್ರಾವೋ ಹಾಗೂ ಎಂಟನೇ ಕ್ರಮಾಂಕದಲ್ಲಿ ಜಡೇಜರನ್ನು ನಾನು ಆಡಿಸುತ್ತೇನೆ. ಉಳಿದ ಮೂರು ಜನ ಬೌಲರ್ಗಳ ವಿಷಯಕ್ಕೆ ಬಂದರೆ ಒಬ್ಬರು ದೀಪಕ್ ಚಹಾರ್ ಆಗಿರುತ್ತಾರೆ. ಅವರು ಪವರ್ಪ್ಲೇಯಲ್ಲಿ ಅತ್ಯುತ್ತಮ ಬೌಲ್ ಮಾಡಬಲ್ಲ ಸಾಮಥ್ರ್ಯ ಹೊಂದಿದ್ದಾರೆ. ಇನ್ನಿಬ್ಬರ ಸ್ಥಾನಕ್ಕೆ ಒಬ್ಬರ ಜಾಗಕ್ಕೆ ಮೋಹಿತ್ ಹಾಗೂ ಶಾರ್ದೂಲ್ರ ಮಧ್ಯೆ ಪೈಪೋಟಿಯಿದೆ. ನಾನು ಇವರಿಬ್ಬರಲ್ಲಿ ಮೋಹಿತ್ರನ್ನು ಪ್ರಥಮ ಆಯ್ಕೆಯಾಗಿಸಿಕೊಳ್ಳುತ್ತಾನೆ. ಯಾಕೆಂದರೆ ಅವರು ಫಾರ್ಮ್ನಲ್ಲಿದ್ದ ದಿನ ಬೇರೆಯವರಿಗೆ ಅವರನ್ನು ಹಿಂದಿಕ್ಕಲು ಸಾಧ್ಯವಾಗದು. ತಮ್ಮ ಅತ್ಯುತ್ತಮ ಬ್ಯಾಕ್ಹ್ಯಾಂಡ್ ಎಸೆತಗಳಿಂದ ಮೋಹಿತ್ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಬಲ್ಲರು. ಆದುದರಿಂದ ಮೋಹಿತ್ ಶರ್ಮ ನನ್ನ ಪ್ರಥಮ ಆಯ್ಕೆ, ಅವರು ವಿಫಲರಾದಲ್ಲಿ ಅಥವಾ ಫಾರ್ಮ್ನಿಂದ ಹೊರ ಹೋದಲ್ಲಿ ಶಾರ್ದೂಲ್ರನ್ನು ಆಡಿಸಬಹುದು.
– ಅಂತಃಕರಣ ಶಿವಮೊಗ್ಗ,ಅಂಕಣಗಾರರು, ವಿಕೆ ನ್ಯೂಸ್
ಇನ್ನೊಬ್ಬ ಬೌಲರ್ ಯಾರು ಬೇಕಾದರೂ ಆಗಬಹುದು. ಒಬ್ಬ ಸ್ಪಿನ್ನರ್ ಕೂಡ ಹಾಗೂ ಒಬ್ಬ ವೇಗಿ ಕೂಡ ! ಯಾಕೆಂದರೆ ತಂಡದಲ್ಲಿ ಈಗಾಗಲೇ ನಾಲ್ಕು ವೇಗಿಗಳು (ವ್ಯಾಟ್ಸನ್, ಮೋಹಿತ್, ಬ್ರಾವೋ, ದೀಪಕ್) ಹಾಗೂ ಮೂವರು ಸ್ಪಿನ್ನರ್ಗಳು (ಜಾಧವ್, ರೈನಾ, ಜಡೇಜ – ಸ್ಯಾಂಟನರ್ ಆಡಿದರೆ ನಾಲ್ಕು) ಇದ್ದಾರೆ. ನಾನು ಈ ಸ್ಥಾನದಲ್ಲಿ ಒಬ್ಬ ಸ್ಪಿನ್ನರ್ ಅನ್ನು ಆಡಿಸಲಿಚ್ಛಿಸುತ್ತೇನೆ. ಹರಭಜನ್, ತಾಹಿರ್ ಹಾಗೂ ಕರಣ್ರ ಮಧ್ಯದಲ್ಲಿ ನಾನು ಹರಭಜನ್ರನ್ನು ಆಡಿಸುತ್ತೇನೆ. ಯಾಕೆಂದರೆ ಈ ತಂಡದಲ್ಲಿ ಈಗಾಗಲೇ ಚೆಂಡನ್ನು ಎಡಕ್ಕೆ ತಿರುಗಿಸಬಲ್ಲ ಸ್ಪೆಷಲಿಸ್ಟ್ಗಳಾಗಿ ಸ್ಯಾಂಟನರ್ ಹಾಗೂ ಜಡೇಜರಿದ್ದಾರೆ. ಬಲಕ್ಕೆ ತಿರುಗಿಸುವವರಾಗಿ ಆಫ್ಸ್ಪಿನ್ನರ್ ಹರಭಜನ್ರನ್ನು ಆಡಿಸುತ್ತೇನೆ.
ಇದು ನನ್ನ ಸಿಎಸ್ಕೆ ತಂಡ
– ಅಂತಃಕರಣ ಶಿವಮೊಗ್ಗ, ಅಂಕಣಗಾರರು, ವಿಕೆ ನ್ಯೂಸ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.