(www.vknews.com) : ನೀನು ತೋರ್ಪಡಿಸುವ ಕೆಲವೊಂದು ಅತಿರೇಕದ ಸಾಹಸಗಳಿಂದ ನೀನು ಕೆಲವೊಂದು ಸಂದರ್ಭಗಳಲ್ಲಿ ರಕ್ಷಿಸಲ್ಪಡುವುದು ನಿನ್ನ ಸಾಮರ್ಥ್ಯಗಳಿಂದಾಗಿರುತ್ತದೆ ಅಂತ ನೀನು ಚಿಂತಿಸುವುದಾದರೆ ಈ ಆಧುನಿಕ ಕಾಲದ ಅತೀ ದೊಡ್ಡ ಬುದ್ಧಿ ಹೀನ ನೀನಾಗಿರುವಿ ಅನ್ನುವುದರಲ್ಲಿ ಸಂಶಯವಿಲ್ಲ.
ಎದುರುಗಡೆಯಿಂದ ಬರುವ ವಾಹನ ಸವಾರ ಅಥವಾ ನಿಯಮವನ್ನು ಉಲ್ಲಂಘಿಸಿ ನೀನು ಪ್ರಯಾಣಿಸುವಾಗ ನಿನ್ನಂತೆಯೇ ಆತನೂ ಒಂದು ರೀತಿಯ ನಿಯಮವನ್ನು ಉಲ್ಲಂಘಿಸಲ್ಪಟ್ಟು ಸಾಹಸ ಪ್ರದರ್ಶಿಸುವ ಮಾನಸಿಕನಾಗಿದ್ದರೆ, ಆತ ಒಂದು ವೇಳೆ ಹಠ ಹಿಡಿದರೆ ಅಲ್ಲಿಗೆ ಮುಗಿಯುವಂತಾಗಿರುತ್ತದೆ ನಿನ್ನೆಲ್ಲಾ ಶೌರ್ಯ..!!
ನಿನ್ನ ಎಲ್ಲಾ ಒಳಿತುಗಳ ಹಿಂದೆ , ನಿನ್ನ ಎಲ್ಲಾ ಬೆಳವಣಿಗೆಗಳ ಹಿಂದೆ ನಿನಗೆ ಆಸರೆಯಾಗಿದ್ದ ನಿನ್ನ ಎಲ್ಲಾ ಮಕ್ಕಳಾಟಿಕೆಗಳಿಗೆ ನಿನಗೆ ಜೊತೆಗಾರರಾಗಿದ್ದ ಹೆತ್ತವರೂ, ಸಹೋದರ, ಸಹೋದರಿಗಿಂತಲೂ ಒಂದುವೇಳೆ ನೀನು ಇಷ್ಟಪಟ್ಟ , ಆಧುನಿಕ ಪ್ಯಾಶನ್ ಹಿಂದೆ ಜೋತು ಬಿದ್ದು ಗಂಡೋ, ಹೆಣ್ಣೋ ಅಂತ ತಿಳಿಯದಷ್ಟರ ರೂಪದಲ್ಲಿ ಇರುವ ನಿನ್ನ ರೋಲ್ ಮಾಡೆಲ್ ಸ್ನೇಹಿತರಿದ್ದಾರಲ್ವಾ ಅವರು ನಿನ್ನ ಮರಣದ ವಾರ್ತೆಗಳು ಕೇಳಿದಾಗ ಕಣ್ಣೀರು ಸುರಿಸುವರು. ಅದೆಷ್ಟು ದಿನಗಳ ಕಾಲ ಆ ಕಣ್ಣೀರು ಇರಬಹುದು ಅಂತ ನಿನಗೆ ಗೊತ್ತೇ..? ಮೂರೇ ಮೂರು ದಿನಗಳು ಮಾತ್ರ..!!
ಮತ್ತೆ ನಿನಗಾಗಿ ಅವರೊಂದು ಮಹತ್ತರವಾದ ಸೇವೆ ಮಾಡುವರು. ನಿನ್ನ ನಗುಮೊಗದ ಒಂದು ಫೋಟೋವನ್ನು ಫೇಸ್ ಬುಕ್, ವಾಟ್ಸ್ ಅಪ್ ನಲ್ಲಿ ಶೇರ್ ಮಾಡಿ ಅದರ ಕೆಳಗೊಂದು ತಲೆಬರಹ ” ಪ್ರೀತಿಯಾ ಗೆಳೆಯಾ.. ನೀನೆಂದೂ ಮರಣ ಹೊಂದಿಲ್ಲ. ನಮ್ಮ ನೆನಪುಗಳಲ್ಲಿ ನೀನೆಂದೂ ಜೀವಿಸುತ್ತಿರುವೆ” ಅದರೊಂದಿಗೆ ನಿನ್ನನ್ನು ಅವರು ಮರೆತುಬಿಡುತ್ತಾರೆ..!! ಇದನ್ನು ಕೇಳುವಾಗ ಒಂದುವೇಳೆ ನಿನಗೆ ನಗು ಬರುತ್ತಿರಬಹುದು. ಅವರ ನೆನಪಿನಲ್ಲಿ ನೀನು ಜೀವಿಸುತ್ತಿ ಅಂತ ಕೇಳಿದಾಗ.
ಮಾದಕ ವಸ್ತುಗಳ ದಾಸರಾಗಿ ನೆನಪು ಬಿಟ್ಟು ತಾನೆಲ್ಲಿರುವೆ ಅನ್ನುವುದನ್ನೇ ಅರ್ಥೈಸಲು ಸಾಧ್ಯವಾಗಲ್ಲ ಅನ್ನುವುದನ್ನು ಇತರರಿಗಿಂತಲೂ ಅಧಿಕವಾಗಿ ಅವರ ಸ್ನೇಹಿತ ಅನ್ನುವ ಕಾರಣಗಳಿಂದ ನಿನಗಲ್ವಾ ಎಲ್ಲವೂ ಗೊತ್ತಿರುವುದು. ಸಾಮಾಜಿಕ ಜಾಲ ತಾಣಗಳಲ್ಲಿ ರಕ್ತದ ಮಡುವಿನಿಂದ ಕೂಡಿದ ನಿನ್ನ ಶರೀರದ ಫೋಟೋ ವೈರಲ್ ಆಗುವಾಗ ಒಂದು ವೇಳೆ ರೂಮಿನೊಳಗೆ ಕೂಡಿಕೊಂಡು , ಹಸಿವಿನಿಂದ ಕಳೆದು , ಹೆದರಿಸಿ , ಕೊನೆಗೆ ನಿರ್ವಾಹವಿಲ್ಲದೆ ನಿನ್ನ ಹದಿಹರೆಯದ ವಯಸ್ಸಿನಲ್ಲಿ ನಿನಗೆ ಬೈಕ್ ತೆಗೆಸಿಕೊಟ್ಟ ನಿಮಿಷವನ್ನು ಅಥವಾ ಸ್ನೇಹಿತರ ಬೈಕನ್ನು ಪಡೆದುಕೊಳ್ಳುವಂತೆ ಮಾಡಿದ ಆ ನಿಮಿಷವನ್ನು ಶಪಿಸಿಕೊಂಡು ನಿನ್ನ ಹೆತ್ತವರು , ಒಡನಾಡಿಗಳು ತಲೆ ತಗ್ಗಿಸಿ ಅಳುತ್ತಿರಬಹುದು. ಮನೆಯ ಯಾವುದಾದರೂ ರೂಮಿನೊಳಗೆ ಕುಳಿತುಕೊಂಡು. ನೋವನ್ನು ತಡೆಯಲಾಗದೆ ಕಣ್ಣೀರಿನ ಬದಲು, ಕಣ್ಣಿನಿಂದ ಬರುವ ರಕ್ತವನ್ನು ಕಾಣಲಾಗದೆ ನೀನು ಯಾವುದೋ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ರೂಮಿನಲ್ಲಿ ಅಂಗಾತ ಮಲಗಿ , ತಲೆ ಹೊಡೆದು, ಕಿವಿ, ಮೂಗು, ಬಾಯಿಯಲ್ಲಿ ಸೋರುತ್ತಿರುವ ರಕ್ತದೊಂದಿಗೆ ಜೀವನದಲ್ಲಿ ಅಹಂಕಾರವನ್ನು ಪ್ರದರ್ಶಿಸಿದ ನೀನು ನಿಸ್ಸಹಾಯಕನಾಗಿ ಮಲಗಿರುವೆ.
ಜೀವನ ಏನು ಅಂತ ಅರ್ಥೈಸಬೇಕಾದ ನೀನು, ಜವಾಬ್ದಾರಿಗಳನ್ನು ವಹಿಸಬೇಕಾದ ನೀನು, ದಾಂಪತ್ಯ ಜೀವನದ ಹೊಸ್ತಿಲಿಗೆ ಕಾಲಿಡಬೇಕಾದ ನೀನು, ಜೀವನ ಏನು ಅಂತ ಅನುಭವಿಸಿ ತೀರಲು ದಿನಗಳು ಮಾತ್ರ ಬಾಕಿ ಇರುವಂತೆಯೇ ನಿನ್ನ ಅಹಂಕಾರ ,ಅಹಂಭಾವ , ಸ್ವಾರ್ಥದ ಕಾರಣಗಳಿಂದ ಸಣ್ಣ ಪ್ರಾಯದಲ್ಲೇ ಮರಣವನ್ನು ಕೇಳಿ ಪಡೆದ ಬುದ್ದಿಹೀನನಾಗಿ ನೀನಲ್ಲಿ ಮಲಗಿರುವೆ.
ಪ್ರೀತಿಯ ತಮ್ಮಂದಿರೇ.. ನೀವಿನ್ನಾದರೂ ಬದಲಾಗಬೇಕಿದೆ. ನೀವು ನಿಮ್ಮ ಮನೆಯ ಭರವಸೆಯ ನಿರೀಕ್ಷೆಗಳಾಗಿದ್ದೀರಿ. ಭವಿಷ್ಯದಲ್ಲಿ ನಿಮ್ಮ ಹೆತ್ತವರಿಗೆ ಭರವಸೆಯ ಬೆಳಕಾಗಬೇಕಾದವರು ಆಗಿರುವಿರಿ ನೀವು. ಅವರನ್ನು ದುಃಖದ ಮಡುವಿನಲ್ಲಾಗಿಸಿ ಹೋಗಬೇಕಾದವರಲ್ಲ ನೀವು. ಹದಿಹರೆಯದ ಹುಚ್ಚು ಸಾಹಸಕ್ಕಾಗಿ ಹಿಂದೆ – ಮುಂದೆ ನೋಡದೆ ಓಡಾಡುವಾಗಲೂ ಎರಡು ಚಕ್ರಗಳೇ ಬೈಕ್ ಗೆ ಇರುವುದು ಅಂತ ನೀವು ನೆನಪಿನಲ್ಲಿಡಬೇಕಿದೆ.
ಶ್ರದ್ಧೆ ಗೆ ಬಾರದ ಒಂದು ಸಣ್ಣ ಕಲ್ಲು ಸಾಕು ನಿಮ್ಮ ಜೀವನಾವಸ್ಥೆಯನ್ನು ಜೀವನ ಪರ್ಯಂತ ಕಷ್ಟದಲ್ಲಾಗಿಸಲು. ಟ್ರಾಫಿಕ್ ನಿಯಮವನ್ನು ಉಲ್ಲಂಘಿಸದಂತೆ ಜಾಗರೂಕರಾಗಿ, ಸಾಧ್ಯವಾದಷ್ಟು ಅಮಿತ ವೇಗದಲ್ಲಿ ಸಂಚರಿಸದಂತೆ ಎಚ್ಚರವಹಿಸಿರಿ. ಹಲವು ಇಂತಹ ಘಟನೆಗಳಿಗೆ ದೃಶ್ಯ ಸಾಕ್ಷಿಗಳಾಗಿ ನೀವೇ ಇರುವಾಗ ಬದಲಾಗಲು ಇನ್ನೊಂದು ಅನುಭವಕ್ಕಾಗಿ ಕಾಯಬೇಕಾದ ಅವಶ್ಯಕತೆ ಬರದು ಅನ್ನುವ ವಿಶ್ವಾಸದೊಂದಿಗೆ…
ಮೂಲ : ಮಲಯಾಳಂ ಅನುವಾದ : ಸ್ನೇಹಜೀವಿ ಅಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.