(www.vknews.com) : ಸೃಷ್ಟಿಗಳೊಂದಿಗೆ ಕರುಣೆ ತೋರಿಸುವ ಜನರೊಂದಿಗೆ ಅಲ್ಲಾಹನು ಕರುಣೆ ತೋರಿಸುತ್ತಾನೆ. ಪ್ರೀತಿಸುವ ಜನರನ್ನು ಪ್ರೀತಿಸುತ್ತಾನೆ. ದ್ವೇಷಿಸುವ ಜನರನ್ನು ಅಲ್ಲಾಹನು ದ್ವೇಷಿಸುತ್ತಾನೆ. ಹಸಿದವನಿಗೆ ಆಹಾರ, ರೋಗಿಗೆ ನೆರವು, ಮನೆ ಇಲ್ಲದವನಿಗೆ ಮನೆ, ಅನಾಥರ ಸಂರಕ್ಷಣೆ, ಸ್ವಾವಲಂಭಿಯಾಗಲು ನೆರವು ನೀಡುವ ವ್ಯಕ್ತಿಯನ್ನು ಅಲ್ಲಾಹನು ಇಷ್ಟಪಡುತ್ತಾನೆ. ಆದರೆ ಅದೇ ಒಳಿತು ಮತ್ತು ಸತ್ಕರ್ಮವನ್ನು ತಡೆಯಲು ಪ್ರಯತ್ನಿಸುವ ಮತ್ತು ಸಂಶಯಗಳನ್ನು ಬಿತ್ತುವ ಜನರನ್ನು ಅಲ್ಲಾಹನು ಮತ್ತು ಮಲಕುಗಳು ಶಪಿಸುತ್ತಾರೆ ಎಂದು ಕಲ್ಲೆಗ ಜುಮ್ಮಾ ಮಸೀದಿಯ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಹೇಳಿದರು. ಅವರಿಂದು ಜುಮ್ಮಾ ಭಾಷಣದಲ್ಲಿ ಮಾತನಾಡುತ್ತಾ, ಸತ್ಕರ್ಮಗಳನ್ನು ಹೆಚ್ಚಿಸಲು ಜನರನ್ನು ಪ್ರೋತ್ಸಾಹಿಸಬೇಕು, ಒಳಿತು ಮತ್ತು ಉಪಕಾರವಾಗುವ ಯೋಜನೆಗಳನ್ನು ಬೆಂಬಲಿಸಬೇಕು. ನಮ್ಮ ವರ್ತನೆ ಮತ್ತು ಉದ್ದೇಶವು ಉತ್ತಮ ಕಾರ್ಯಕ್ಕೆ ತಡೆಯಾದರೆ ಅದರ ದೋಷ ನಮ್ಮನ್ನು ಇಹ ಮತ್ತು ಪರದಲ್ಲೂ ಅಪಮಾನವಾಗಿ ಕಾಡಲಿದೆ ಎಂದು ಖತೀಬರು ಹೇಳಿದರು.
ಉಪವಾಸ ಆರಂಭವಾಗುವ ಮೊದಲು ಬಿಸಿಲಿನ ಬೆಗೆಯು ನಮ್ಮನ್ನು ಪೀಡಿಸುತ್ತಿತ್ತು. ಬಾಯಾರಿಕೆ ಮತ್ತು ಸಂಕಟವು ಬಾದಿಸುತ್ತಿತ್ತು. ಆದರೆ ಈಗ ನಮ್ಮ ದೇಹ ಮತ್ತು ಮನಸು ಆಧ್ಯಾತ್ಮದಲ್ಲಿ ಆನಂದದಲ್ಲಿದೆ. ಬಿಸಿಲಿನ ಬೆಗೆಯು ತಂಪಾಗಿದೆ. ಅಲ್ಲಾಹನ ಕರುಣೆ ಉಪವಾಸಿಗನ ಮೇಲಿದೆ ಎಂಬುವುದಕ್ಕೆ ಇದೊಂದು ಸಾಕ್ಷಿ ಸಾಕು. ಈಗ ನಮಗೆ ಹಗಲು ಆರೋಗ್ಯವಿದೆ. ಉಪವಾಸ ತೊರೆದ ಕ್ಷಣ ಸಂಕಟಗಳು ಆರಂಭವಾಗುತ್ತದೆ. ಅದಕ್ಕಾಗಿ ನಾವು ಹೆಚ್ಚು ತಿನ್ನುವುದು ನಿಲ್ಲಿಸಿ ಮಿಥವನ್ನು ಪಾಲಿಸಬೇಕು. ರಾತ್ರಿಯೂ ಉಪವಾಸದ ಸಹವಾಸ ಹಿತವಾಗಿದೆ. ಈ ತಿಂಗಳು ನಮ್ಮ ಮುಂದಿನ 11 ತಿಂಗಳಿಗೆ ಬೆಳಕು ಹಚ್ಚುವ ಕಾರ್ಯ ಮಾಡುತ್ತದೆ ಎಂದ ಖತೀಬರು, ಒಬ್ಬ ವ್ಯಕ್ತಿ ನನ್ನ ಬಳಿಗೆ ಬಂದು ” ಭಯಂಕರ ಬೈಲ್ ಉಸ್ತಾದ್, ಈ ಚೂಡುಲು ಎಂಗನೆ ನೋಂಬು ಪಿಡಿಕ್ಕುರೊ, ಇಪ್ಪಮೇ ಇಂಗನೆ ಇನ್ನೆಂಗ್ ಇನ್, ನಾಲ್ ವರ್ಷ ಬುಟ್ಟು ಬಂಡೆ ನೋಂಬುರೊ ಚೂಡು ಎಂಗನೆ ಇಕ್ಕು”. ಆ ವ್ಯಕ್ತಿಯಲ್ಲಿ ನಾನು ಹೇಳಿದೆ ನಾಲ್ಕು ವರ್ಷದವರೆಗೆ ಬದುಕುವ ಗ್ಯಾರಂಟಿ ಇಲ್ಲ, ನಾಳೆ ಮರಣ ಹೊಂದಿದರೆ ಕಬರಿನಲ್ಲಿ ಹೇಗೆ ಮಲಗುವುದು ಎಂಬುವುದನ್ನು ನಾವು ಹೆಚ್ಚು ಯೋಚಿಸಬೇಕು. ಅದೇ ರೀತಿ ಸಾವಿರಾರು ವರ್ಷ ಮಹ್ ಶರದಲ್ಲಿ ಸೂರ್ಯನ ತಾಪ ಸಹಿಸಿ ಬೆತ್ತಳಾಗಿ, ತಾಮ್ರದ ನೆಲದಲ್ಲಿ ಬರಿಗಾಲಿನಲ್ಲಿ ಹೇಗೆ ನಿಲ್ಲುವುದು ಎಂಬುವುದನ್ನೂ ಆಲೋಚಿಸಬೇಕು. ಅಲ್ಲಾಹನು ಕ್ಷಮಾಶೀಲರಿಗೆ ಕ್ಷಮಿಸುತ್ತಾನೆ. ಸತ್ಕರ್ಮಿಗಳಿಗೆ ಅವರ ಪ್ರತಿಫಲವನ್ನು ಇಮ್ಮಡಿ ಕೊಡುತ್ತಾನೆ ಆದರೆ ಅಕ್ರಮಿಗಳನ್ನು ಕಠಿಣವಾಗಿ ಶಿಕ್ಷಿಸುತ್ತಾನೆ ಎಂದು ಖತೀಬರು ಎಚ್ಚರಿಸಿದರು.
ಉಪವಾಸದ ತಿಂಗಳು ನಾವು ಕ್ಲಪ್ತ ಸಮಯದಲ್ಲಿ ನಮಾಝ್ ಮಾಡುತ್ತೇವೆ, ದಾನ ಮಾಡುತ್ತೇವೆ, ಒಳಿತಿನ ಕಾರ್ಯದಲ್ಲಿರುತ್ತೇನೆ, ಉತ್ತಮ ಸ್ವಭಾವ ತೋರಿಸುತ್ತೇವೆ ಹೀಗೆ ನಾವು ಪ್ರತೀ ತಿಂಗಳು ಇರುವುದಕ್ಕೆ ಯಾಕೆ ಸಾಧ್ಯವಿಲ್ಲ ? ನಿಮಗೆ ಸ್ವರ್ಗಕ್ಕಿಂತ ಉತ್ತಮವಾದ ಕೊಡುಗೆಯ ಕುರಿತು ಹೇಳುತ್ತೇನೆ. ಅದು ಅಲ್ಲಾಹನ ದರ್ಶನವಾಗಿದೆ. ದೇವನನ್ನು ನಾವು ನಮ್ಮ ಕಣ್ಣಿನಿಂದ ಕಾಣುವುದು ಮಹಾ ಭಾಗ್ಯವೇ ಸರಿ. ನೀವು ಪ್ರತೀ ದಿನ ಪ್ರಾರ್ಥಿಸಿ. ಅಲ್ಲಾಹನಲ್ಲಿ ಕಣ್ಣೀರಿಟ್ಟು ನಿವೇದಿಸಿ. ಅಲ್ಲಾಹನ್ನು ಕಾಣುವ ಇಚ್ಚೆಯನ್ನು ಬಲಪಡಿಸಿ. ಆಗ ಪ್ರತೀ ತಿಂಗಳು ನಮಗೆ ಅಲ್ಲಾಹನ ದಾಸ್ಯ ಆರಾಧನೆ ಮಾಡಲು ಅನುಸರಣೆ ಮಾಡಲು ಸಾಧ್ಯವಾಗುತ್ತದೆ. ಮೂಸಾನಬಿಯವರಲ್ಲಿ ಅಲ್ಲಾಹನು ಕೇಳುತ್ತಾನೆ, ” ನನಗಾಗಿ ಏನು ಮಾಡಿದೆ ?”. ಆಗ ಮೂಸ ನಬಿ ಹೇಳುತ್ತಾರೆ, ನಮಾಝ್ ಮಾಡಿದೆ. ಉಪವಾಸ ಹಿಡಿದೆ, ಝಿಕ್ರ್ ಮಾಡಿದೆ ಎಂದು. ಆಗ ಅಲ್ಲಾಹನು ಹೇಳುತ್ತಾನೆ “ಅದೆಲ್ಲವೂ ನಿನಗಾಗಿ ನೀನು ಮಾಡಿರುವುದು, ನನ್ನ ಮನುಷ್ಯರ ಸೇವೆ ಮಾಡುವುದು, ಕಣ್ಣೀರು ಒರೆಸುವುದು, ದುಃಖದಲ್ಲಿ ಭಾಗಿಯಾಗುವುದು , ನನ್ನಲ್ಲಿ ಅವರು ನೆರವಿಗಾಗಿ ಪ್ರಾರ್ಥಿಸಿದಾಗ ನೀನು ನನ್ನ ಸಹಾಯಕನಾಗಿ ಅವರಿಗೆ ನೆರವು ತಲುಪಿಸುವುದು, ಇದಾಗಿದೆ ನನಗೆ ನೀನು ಮಾಡುವ ಉಪಕಾರ” ಎಂದ ಖತೀಬರು ನಾವು ತರ್ಕಿಸುವ , ಚರ್ಚಿಸುವ ಸಮಯವನ್ನು ಒಳಿತಿನ ಕಾರ್ಯಕ್ಕೆ ಮೀಸಲಿಟ್ಟಿದ್ದರೆ ನಮ್ಮ ಎಲ್ಲಾ ಸಮಸ್ಯೆ ಪರಿಹಾರವಾಗಿ ಪ್ರಗತಿ ಉಂಟಾಗುತಿತ್ತು. ಇನ್ನಾದರೂ ನಾವು ನಮಗೂ, ನಮ್ಮ ಸಂಸಾರಕ್ಕೂ ಅಗತ್ಯ ಇರುವುದನ್ನು ಮಾಡಿಟ್ಟು ಅಲ್ಲಾಹನ ಸೃಷ್ಟಿಗಳ, ಧರ್ಮದ ಸೇವೆಗೆ ಹೆಚ್ಚಿನದು ವಿನಿಯೋಗಿಸುವ ಎಂದು ಖತೀಬರು ಉಪದೇಶ ಮಾಡಿದರು.
– ಸುನ್ನೀಟುಡೇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.