ಟ್ರಾಫಿಕ್ ಪೊಲೀಸರನ್ನು ತರಾಟೆಗೆಳೆದ ಆಕ್ರೋಶಿತ ಸಾರ್ವಜನಿಕರು
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಇಲ್ಲಿನ ಟ್ರಾಫಿಕ್ ಎಸ್ಸೈ ಮಂಜುನಾಥ ಅವರು ಠಾಣಾಧಿಕಾರಿಯಾಗಿ ಬಂದ ನಂತರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೇಕಾಬಿಟ್ಟಿ ಕಾರ್ಯಾಚರಣೆ ನಡೆಸುವ ಪರಿಣಾಮ ಅಪಘಾತಗಳು ಸಂಭವಿಸುತ್ತಿದ್ದು, ಜನರ ಪ್ರಾಣ ಹಾಗೂ ವಾಹನಗಳಿಗೆ ಹಾನಿ ಸಂಭವಿಸುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಶನಿವಾರ ಬಿ ಸಿ ರೋಡು ಹೆದ್ದಾರಿಯಲ್ಲೇ ಎಸ್ಸೈ ಸಹಿತ ಟ್ರಾಫಿಕ್ ಪೊಲೀಸರನ್ನು ಸುತ್ತುವರಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಪಘಾತದಿಂದ ಜಖಂಗೊಂಡ ಅಟೋ ರಿಕ್ಷಾ
ಬಿ ಸಿ ರೋಡು ಹೆದ್ದಾರಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಶನಿವಾರ ಮಧ್ಯಾಹ್ನ ಕಾರ್ಯಾಚರಣೆ ನಡೆಸಿದ ಟ್ರಾಫಿಕ್ ಎಸ್ಸೈ ಮಂಜುನಾಥ್ ಸಹಿತ ಸಂಚಾರಿ ಪೊಲೀಸರು ದ್ಚಿಚಕ್ರ ವಾಹನ ಸವಾರರನ್ನು ಹೆದ್ದಾರಿ ಮಧ್ಯದಲ್ಲೇ ಬಂದು ನಿಲ್ಲಿಸುತ್ತಿದ್ದರು. ಈ ಸಂದರ್ಭ ವೇಗವಾಗಿ ಬಂದ ಬೈಕ್ ಚಾಲಕ ಬಿ ಸಿ ರೋಡು ಸಮೀಪದ ಪರ್ಲಿಯಾ ನಿವಾಸಿ ಹಮೀದ್ ಎಂಬವರ ಪುತ್ರ ಶರೀಫ್ (20) ಎಂಬಾತ ಪೊಲೀಸರ ಕೈ ಬೈಕಿನ ಹ್ಯಾಂಡಲ್ಗೆ ತಾಗಿ ನಿಯಂತ್ರಣ ಕಳೆದುಕೊಂಡು ಮುಂಭಾಗದಲ್ಲಿ ಸಂಚರಿಸುತ್ತಿದ್ದ ಅಟೋ ರಿಕ್ಷಾಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಅಟೋ ರಿಕ್ಷಾ ಫ್ಲೈ ಓವರ್ ಬಳಿ ಇರುವ ಹೆದ್ದಾರಿ ಡಿವೈಡರ್ಗೆ ಡಿಕ್ಕಿಯಾಗಿ ರಸ್ತೆಯಲ್ಲೇ ಉರುಳಿ ಬಿದ್ದಿದೆ. ಘಟನೆಯಿಂದ ಬೈಕ್ ಸವಾರ ಶರೀಫ್ ಗಂಭೀರ ಗಾಯಗೊಂಡರೆ, ರಿಕ್ಷಾ ಚಾಲಕ ಸಹಿತ ಇಬ್ಬರು ಮಹಿಳಾ ಪ್ರಯಾಣಿಕರೂ ಕೂಡಾ ಗಾಯಗೊಂಡಿದ್ದಾರೆ. ರಿಕ್ಷಾ ಚಾಲಕ ಸಜಿಪ ಮೂಲದ ಮೆಲ್ವಿನ್ ಎಂಬವರಾಗಿದ್ದಾರೆ ಎಂದು ತಿಳಿದು ಬಂದಿದ್ದು, ಮಹಿಳೆಯರ ವಿವರ ತಿಳಿದು ಬಂದಿಲ್ಲ.
ಕಾರ್ಯಾಚರಣೆಗೆ ಬಿ ಸಿ ರೋಡು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಜಮಾಯಿಸಿದ್ದ ಟ್ರಾಫಿಕ್ ಪೊಲೀಸ್ ತಂಡ
ಈ ಸಂದರ್ಭ ಸ್ಥಳದಲ್ಲಿ ಜಮಾಯಿಸಿದ ಭಾರೀ ಸಂಖ್ಯೆಯ ಸಾರ್ವಜನಿಕರು ಟ್ರಾಫಿಕ್ ಪೊಲೀಸರ ಕ್ರಮವನ್ನು ಹಿಗ್ಗಾ ಮುಗ್ಗಾ ಝಾಡಿಸಿದರಲ್ಲದೆ ಸುಮಾರು ಅರ್ಧ ತಾಸಿಗೂ ಹೆಚ್ಚು ಸಮಯ ಹೆದ್ದಾರಿಯಲ್ಲೇ ಪೊಲೀಸ್ ಅಧಿಕಾರಿಯನ್ನು ತರಾಟೆಗೆಳೆದರು. ಹೆದ್ದಾರಿಯ ಪ್ರಮುಖ ಜಂಕ್ಷನ್ಗಳಲ್ಲಿ ಅದರಲ್ಲೂ ಪೀಕ್ ಅವರ್ಗಳಲ್ಲಿ ಪೊಲೀಸರು ಲಾಠಿ ಹಿಡಿದು ಹೊಡೆದು ಬಡಿದು ವಾಹನಗಳನ್ನು ನಿಲ್ಲಿಸುವುದರಿಂದ ವಾಹನ ಸವಾರರು ನಿಯಂತ್ರಣ ಕಳೆದುಕೊಳ್ಳುವದಲ್ಲದೆ ಪೇಟೆ-ಪಟ್ಟಣಗಳಲ್ಲಿ ಟ್ರಾಫಿಕ್ ಜಂಜಾಟಕ್ಕೂ ಕಾರಣರಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಅದರಲ್ಲೂ ರಿಕ್ಷಾದಲ್ಲಿದ್ದ ಮಹಿಳಾ ಪ್ರಯಾಣಿಕರು ಪೊಲೀಸರು ಏನು ಇಲಾಖೆಗೆ ಉತ್ತಮ ಹೆಸರು ತರಲು ಈ ಕೆಲಸ ಮಾಡುತ್ತಾರೋ ಅಥವಾ ಹೆದ್ದಾರಿ ಮಧ್ಯದಲ್ಲಿ ಹಣ ಮಾಡುವ ಉದ್ದೇಶಕ್ಕಾಗಿ ಈ ರೀತಿ ವರ್ತಿಸುತ್ತಾರೋ ಎಂಬುದು ಅರ್ಥವಾಗುತ್ತಿಲ್ಲ. ವಾಹನ ಸವಾರರ ಪ್ರಾಣ ಹಿಂಡಿ ಯಾವ ಕಾನೂನು ಪಾಲನೆ ಇವರು ಮಾಡುತ್ತಾರೆ ಎಂದು ಪ್ರಶ್ನಿಸುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಸಾರ್ವಜನಿಕರ ಆಕ್ರೋಶದಿಂದ ಸ್ಥಳದಲ್ಲಿದ್ದ ಟ್ರಾಫಿಕ್ ಎಸ್ಸೈ ಸಹಿತ ಪೊಲೀಸರು ಕೆಲವು ಕ್ಷಣ ಕಕ್ಕಾಬಿಕ್ಕಿಯಾದರು. ಗಾಯಾಳು ಯುವಕನನ್ನು ಪೊಲೀಸ್ ಇಂಟರ್ಸೆಪ್ಟರ್ ವಾಹನದಲ್ಲೇ ಸಾರ್ವಜನಿಕರು ಬ¯ವಂತವಾಗಿ ಆಸ್ಪತ್ರೆಗೆ ಸಾಗಿಸುವಂತೆ ತಾಕೀತು ಮಾಡಿದ್ದಾರೆ. ಕೊನೆಗೆ ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಎಸ್ಸೈ ಚಂದ್ರಶೇಖರ್ ಅವರು ಆಕ್ರೋಶಿತ ಸಾರ್ವಜನಿಕರನ್ನು ಸಮಾಧಾನಪಡಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಹೆದ್ದಾರಿ ಮಧ್ಯ ಭಾಗದಲ್ಲಿ ಬಂದು ದ್ವಿಚಕ್ರ ವಾಹನವನ್ನು ಬಲವಂತವಾಗಿ ನಿಲ್ಲಿಸುತ್ತಿರುವ ಟ್ರಾಫಿಕ್ ಸಿಬ್ಬಂದಿ
ಪೊಲೀಸರ ಕಾರ್ಯಾಚರಣೆಯಿಂದ ಬಿ ಸಿ ರೋಡಿನಲ್ಲಿ ಟ್ರಾಫಿಕ್ ಅಸ್ತವ್ಯಸ್ತತೆ ಉಂಟಾಗುತ್ತಿದೆ
ಶನಿವಾರ ಬಿ ಸಿ ರೋಡು ಹೆದ್ದಾರಿಯಲ್ಲಿ ನಡೆದ ಈ ಎಲ್ಲಾ ಹೈಡ್ರಾಮಾದ ಪೂರ್ಣ ವೀಡಿಯೋ ತುಣುಕು ಇದೀಗ ಸಾಮಾಜಿಕ ತಾಣಗಳಲ್ಲಿ ಸಕತ್ ವೈರಲ್ ಆಗಿದ್ದು, ಟ್ರಾಫಿಕ್ ಪೊಲೀಸರ ಜನವಿರೋಧಿ ಕ್ರಮಕ್ಕೆ ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗುತ್ತಿದೆ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.