ನಾಗರಿಕ ಪ್ರಪಂಚದಲ್ಲಿ ವಾರ್ತಾ ಪತ್ರಿಕೆಗಳಿಗೆ ವಿಶೇಷ ಸ್ಥಾನವಿದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಗಂತೂ ಪತ್ರಕರ್ತರ ಸಹಾಯ ಸಾಮಾನ್ಯವಾದದ್ದೇನಲ್ಲ. ಕನ್ನಡದಲ್ಲಿ ಪತ್ರಿಕೋದ್ಯಮ ಪ್ರಾರಂಭವಾದುದು ಕಳೆದ ಶತಮಾನದ ಉತ್ತರಾರ್ಧದಲ್ಲಿ. ಪತ್ರಿಕೆಗಳು ಕನ್ನಡ ಜನ ಜೀವನದ ಪ್ರತಿಬಿಂಬವಾಗಿದೆ. ಪ್ರಥಮ ಪತ್ರಿಕೆಯ ವಿಷಯದ ಚರ್ಚೆ ಇದ್ದರೂ 1843 ನೆಯ ಜುಲೈ ಒಂದರಲ್ಲಿ ಪ್ರಾರಂಭವಾದ ‘ಮಂಗಳೂರು ಸಮಾಚಾರ’ವೆಂಬ ಪತ್ರಿಕೆಯೇ ಕರ್ನಾಟಕದ ಪ್ರಥಮ ಪತ್ರಿಕೆಯೆಂದು ಭಾವಿಸಬಹುದು.
ಈ ಪತ್ರಿಕೆಯನ್ನು ಸ್ವೀಝರ್-ಲ್ಯಾಂಡ್ *ಇವಾಂಜಲಿಕಲ್* ಸೊಸೈಟಿಯ ರೆವರೆಂಡ್ ಮಾಗ್ಲಿಂಗ್ ರವರು ಮುದ್ರಿಸುತ್ತಿದ್ದರು. ಇದನ್ನು ಕ್ರಿಸ್ತ ಮತ ಪ್ರಚಾರಕ್ಕೆ ಬಳಸುವುದೇ ಇವರ ಉದ್ದೇಶವಾಗಿತ್ತು. ಪ್ರತಿ ತಿಂಗಳು 1ನೇ ಮತ್ತು 15ನೇ ತಾರೀಖುಗಳಲ್ಲಿ ಪ್ರಕಟವಾಗುತ್ತಿತ್ತು. ಸ್ವಲ್ಪ ಕಾಲದಲ್ಲಿಯೇ ಬಳ್ಳಾರಿಗೆ ವರ್ಗವಾಗಿ ‘ಕನ್ನಡ ಸಮಾಚಾರ’ ಎಂಬ ಹೊಸ ಹೆಸರನ್ನು ತಾಳಿತು.1844 ರ ಮಾರ್ಚ್ ಒಂದರಿಂದ ಬಳ್ಳಾರಿಯಿಂದ ಪ್ರಕಟವಾಗಲು ಪ್ರಾರಂಭವಾಯಿತು. ಅಲ್ಪಕಾಲದಲ್ಲಿಯೇ ಮಂಗಳೂರಿಗೆ ವರ್ಗವಾಗಿ ‘ಕನ್ನಡ ಸುವಾರ್ತಿಕ’, ‘ಕರ್ನಾಟಕ ಪತ್ರಿಕೆ’, ‘ಬಾಲಪತ್ರ’, ‘ಸತ್ಯದೀಪಿಕೆ’, ‘ಕ್ರಿಸ್ತಸಭಾಪತ್ರ’, ಎಂಬ ಬೇರೆ ಬೇರೆ ಹೆಸರುಗಳಿಂದ 1940 ರವರೆಗೆ ಬೆಳೆಯಿತು. 1844 ಕ್ಕೂ ಮೊದಲು ‘ಭಾಷಾ’ ಎಂಬ ಪತ್ರಿಕೆ ಜನ್ಮ ತಾಳಿ ಅಲ್ಪಕಾಲದಲ್ಲಿಯೇ ನಿಂತು ಹೋಯಿತೆಂದೂ ಹೇಳಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್ 2010 ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೈಜ ಸುದ್ದಿಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಹುಟ್ಟಿತು. ವಿಶ್ವ ಕನ್ನಡಿಗ ನ್ಯೂಸ್ ರಕ್ತದ ಆವಶ್ಯಕ ಸಮಯದಲ್ಲಿ ತಮ್ಮ ಜಾಲತಾಣಗಳ ಮೂಲಕ ವಿಶ್ವದ ಯಾವುದೇ ಕಡೆಯಲ್ಲಿ ರಕ್ತದ ಆವಶ್ಯಕತೆ ಇದ್ದಾಗ ರಕ್ತದಾನಿಗಳ ಪೂರೈಕೆಯನ್ನು ತಮ್ಮ ವಾರ್ತಾ ಜಾಲತಾಣಗಳ ಮೂಲಕ ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡದೊಂದಿಗೆ ಕೈ ಜೋಡಿಸಿರುವುದು ಮತ್ತು ಹಲವು ಬಡ ಕುಟುಂಬಗಳಿಗೆ ಆಸರೆ ಆಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಇದರ ಉನ್ನತಿಗೆ ಇನ್ನೊಂದು ಕಿರೀಟ ವಾಗಿದೆ.
ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಅದೆಷ್ಟೋ ವಾರ್ತಾ ಮಾದ್ಯಮಗಳು ಹುಟ್ಟತ್ತಾನೇ ಇದೆ, ಇದರಲ್ಲಿ ವಿಭಿನ್ನ ಅನ್ನಬಹುದು ವಿಶ್ವ ಕನ್ನಡಿಗ ನ್ಯೂಸ್, ಜಾತಿ ಬೇಧ ಮರೆತು ಸತ್ಯತೆಯ ವಾರ್ತೆಗಳನ್ನು ಕ್ಷಣ ಕ್ಷಣಕ್ಕೂ ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ ತಲುಪಿಸುತ್ತಾ ಇದೆ, ಇನ್ನು ಮುಂದೆಯೂ ಉತ್ತಮ ರೀತಿಯಲ್ಲಿ ಮುಂದುವರಿಯಲಿ, ನಿಜ ಸುದ್ದಿಗಳನ್ನು ಸಮಾಜಕ್ಕೆ ತೋರಿಸುವಲ್ಲಿ ನಿಮ್ಮ ಮೀಡಿಯಾ ಯಶಸ್ಸು ಕಾಣಲಿ ಎಂದು, 9ನೇ ವಸಂತದಲ್ಲಿರುವ ವಿಶ್ವ ಕನ್ನಡಿಗ ನ್ಯೂಸ್ ತಂಡಕ್ಕೆ ಶುಭ ಹಾರೈಸುತ್ತಾ ಇದ್ದೇನೆ.
ಇಮ್ರಾನ್ ಇಮ್ಮು ಉಳ್ಳಾಲ (ಕಾರ್ಯನಿರ್ವಾಹಕ ಬ್ಲಡ್ ಡೋನರ್ಸ್ ಮಂಗಳೂರು (ರಿ))
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.