ಪ್ರಸ್ತುತ ಬೆಳವಣಿಗೆಯಲ್ಲಿ ಹಲವಾರು ಅಂತರ್ಜಾಲ ವಾರ್ತಾ ತಾಣಗಳು ಕಾರ್ಯನಿರ್ವಹಿಸುತ್ತಿದೆಯಾದರೂ ಹಲವು ರೀತಿಯ ಒತ್ತಡಗಳಿಗೆ ಮಣಿದು ನೈಜ ಸುದ್ದಿಗಳನ್ನು ಬಿತ್ತರಿಸುವಲ್ಲಿ ವಿಫಲವಾಗಿರುವಾಗ ಯಾವುದೇ ಒತ್ತಡ, ಅಂತೆ-ಕಂತೆಗಳಿಗೆ ಬಲಿಯಾಗದೇ ಮಾಧ್ಯಮ ಧರ್ಮವನ್ನು ಕಾಪಾಡಿಕೊಂಡು ಸತ್ಯ ಸುದ್ದಿಗಳ ನಿಜವಾದ ಚಿತ್ರಣವನ್ನು ಸಮರ್ಪಕವಾಗಿ ಕನ್ನಡಿಗರ ಅದರಲ್ಲೂ ಹಲವು ದೇಶಗಳಲ್ಲಿ ನೆಲೆಸಿಕೊಂಡಿರುವ ವಿದೇಶಿ ಕನ್ನಡಿಗರಿಗೆ ತಲುಪಿಸಿ ಓದುಗರ ವಿಶ್ವಾಸಕ್ಕೆ ಪಾತ್ರವಾದ ಕನ್ನಡಿಗರ ಹೆಮ್ಮೆಯ ಪ್ರಮುಖ ಅಂತರ್ಜಾಲ ವಾರ್ತಾ ತಾಣವಾಗಿದೆ ವಿಕೆ ನ್ಯೂಸ್. ಜೊತೆಗೆ ಸಮಾಜದ ಹಲವಾರು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಸಮಾಜಕ್ಕೆ ಪರಿಚಯಿಸಿ ಕೊಟ್ಟ ವಿಕೆ ನ್ಯೂಸ್, ಪ್ರತಿಭೆಗಳ ತೆರೆದಿಟ್ಟ ವೇದಿಕೆಯಾಗಿದೆ.
ಅಂತರ್ಜಾಲ ಮೂಲಕ ಯಾವುದೇ ಫಲಾಪೇಕ್ಷೆ ಇಲ್ಲದೇ ವಿಶ್ವದ ಮೂಲೆ ಮೂಲೆಗಳಿಂದ ಸಿಗುವ ಸುದ್ದಿಗಳ ಸತ್ಯಾ ಸತ್ಯತೆಯನ್ನು ಅನ್ವೇಷಿಸಿ ಸಮರ್ಪಕವಾಗಿ ಓದುಗರಿಗೆ ತಲುಪಿಸುವ ಉದ್ದೇಶದಿಂದ ಸ್ಥಾಪಿತವಾದ ಈ ಅಂತರ್ಜಾಲ ವಾರ್ತಾ ತಾಣವು ಜಿಲ್ಲೆ, ರಾಜ್ಯ, ರಾಷ್ಟ್ರ, ವಿದೇಶ ಸುದ್ದಿಗಳೊಂದಿಗೆ ಕ್ರೀಡಾ ಸುದ್ದಿಗಳು, ಅಂಕಣಗಳು, ಲೇಖನಗಳು, ವಿಕೆ ಸ್ಪೆಷಲ್ಸ್, ಜಾಹೀರಾತುಗಳು, ಹಾಗೂ ಹಲವು ವಿಭಿನ್ನ ಸಾಧನೆಗಳೊಂದಿಗೆ 9 ವರ್ಷಗಳನ್ನು ಪೂರೈಸಿ ಹತ್ತನೇ ವರ್ಷಕ್ಕೆ ಮುನ್ನುಗ್ಗುತ್ತಿರುವಾಗ ಕನ್ನಡಿಗರಲ್ಲಿ ಹೊಸ ಉತ್ಸಾಹವನ್ನು ತರುತ್ತಿದೆ.
ವಿಕೆ ನ್ಯೂಸ್ ಸಂಪಾದಕರು, ಲೇಖಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗಕ್ಕೆ ಎಲ್ಲಾ ರೀತಿಯ ಅಭಿನಂದನೆಗಳನ್ನು ಸಲ್ಲಿಸುತ್ತಾ ಮುಂದೆಯೂ ಹೆಸರೇ ಸೂಚಿಸುವಂತೆ ಇಡೀ ವಿಶ್ವದ ಕನ್ನಡಿಗರ ಹೆಮ್ಮೆಯ ಅಂತರ್ಜಾಲ ತಾಣವಾಗಿ ಪ್ರಪಂಚದ ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲೂ ಪಸರಿಸಿ ಇನ್ನಷ್ಟು ಯಶಸ್ಸನ್ನು ಸಾಧಿಸಲಿ ಎಂದು ಹಾರೈಸುತ್ತೇನೆ.
ಮುಸ್ತಫಾ ಅಮ್ಚಿನಡ್ಕ , ದುಬೈ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.