ರಾಜಕೀಯ ಕುತಂತ್ರದಿಂದ ಬೇಸತ್ತ ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ವಿದ್ಯಾರ್ಥಿಗಳು
(ವಿಶ್ವ ಕನ್ನಡಿಗ ನ್ಯೂಸ್) : ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗುಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯದ ಕುಲಪತಿಗಳ ಆಯ್ಕೆಯ ವಿಚಾರದಲ್ಲಿ ರಾಜಕೀಯತೆ ನಡೆಯುತ್ತಿದೆ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.
ಯುಜಿಸಿ ನಿಯಾಮವಳಿಯ ಪ್ರಕಾರ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ,ಹಾಗೂ ವಿಷಯದಲ್ಲಿ ಅನುಭವವನ್ನು ಹೊಂದಿರುವ ಪ್ರಾಧ್ಯಾಪಕರನ್ನು ಕುಲಪತಿಯನ್ನಾಗಿ ಮಾಡಬೇಕೆಂಬ ನಿಯಮವಿದೆ. ಈ ಹಿಂದೆ ಅನ್ಯ ಭಾಷೆಯ ಪ್ರಾಧ್ಯಾಪಕರನ್ನು ಒಳಗೊಂಡಂತೆ ಕುಲಪತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು ಹಾಗು ಶಿಫಾರಸ್ಸು ಮಾಡಲಾಗಿತ್ತು ಆದ್ರೆ ನಿಯಮಾವಳಿಯನ್ನು ಮೀರಿ ಸೆಲೆಕ್ಷನ್ ನೆಡೆದಿದೆ ಎಂಬ ಕಾರಣಕ್ಕಾಗಿಯೇ ಕಲಪತಿಯ ಆಯ್ಕೆಯನ್ನು ರಾಜ್ಯಪಾಲರು ಹಿಂದಿರುಗಿಸಿದ್ದರು . ಈಗ ಅದೇ ರೀತಿ ಮತ್ತೆದೆ ಪ್ರಯತ್ನ ನಡೆಯುತ್ತಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.
ಮಂಗಳವಾರ(16/07/19) ನೆಡದ ಉನ್ನತ ಶಿಕ್ಷಣದ ಸೆಲೆಕ್ಷನ್ ಕಮಿಟಿ ಸಭೆಯಲ್ಲಿ ಯುಜಿಸಿ ನಿಯಮಕ್ಕೆ ವಿರುದ್ಧವಿದ್ದರೂ, ಅನ್ಯಭಾಷೆಯ ವಿಷಯ ತಜ್ಞರ ಹೆಸರನ್ನೇ ಮತ್ತೆ ಪ್ರಸ್ಥಾಪಿಸಲಾಗಿದೆ ಹಾಗೆ ವಯೋಮಾನ ಮೀರಿದ ಪ್ರದ್ಯಾಪಕರನ್ನು ಶಿಫಾರಸ್ಸು ಮಾಡಲಾಗಿದೆ . ಇಂಗ್ಲೀಷ್ ನಿವೃತ್ತಿ ಪ್ರಾಧ್ಯಾಪಕರಾಗಿರುವ ಕೆ.ಟಿ ಸುನೀತಾ, ನಿವೃತ್ತ ಐಎಎಸ್ ಅಧಿಕಾರಿ ಮದ್ದು ಮೋಹನ್, ಸಂಗೀತ ನಿವೃತ್ತಿ ಪ್ರಾಧ್ಯಾಪಕಿ ಬಿ.ಎಂ ಜಯಶ್ರೀಯರ (ಎಂ ಪಿ ಎಸ )ಹೆಸರು ಕುಲಪತಿಯ ಸ್ಥಾನಕ್ಕೆ ಕೇಳಿಬರುತ್ತಿದೆ. ಮೂರೂ ಆಯಾರ್ಥಿಗಳಿಗು ಈಗಾಗಲೇ 63 ವರ್ಷ ಮೀರಿರುತ್ತಾರೆ ಯಾರೋಬರಿಗೂ ನಾಲ್ಕು ವರೆ ವರ್ಷಕಗಳ ಕುಲಪತಿ ಅವಧಿಯು ಪೂರ್ಣವಾಹಿಸಲು ಸಾಧ್ಯವಾಗುವುದಿಲ್ಲ ಅದಲ್ಲದೆ ಇಲ್ಲಿಯವರೆಗೂ
ಈ ರೀತಿಯ ನಿಯಮ ಉಲ್ಲಂಘನೆ ಆಗಿಲ್ಲ ಈ ಕುತಂತ್ರಗಳನ್ನು ನೋಡಿದರೆ ರಾಜಕೀಯ ಕೈವಾಡ ಸ್ಪಷ್ಟವಾಗಿ ಕಾಣುತ್ತದೆ , ಈ ಸ್ಥಾನಕ್ಕೆ ಅರ್ಹತೆಯಿಲ್ಲದಿದ್ದರೂ ಅಂತಿಮವಾಗಿದೆ.
ಮೈಸೂರಿನ ಡಾ. ಹಂಗುಬಾಯಿ ಹಾನಗಲ್ ವಿಶ್ವ ವಿದ್ಯಾನಿಲಯವೂ ಆರಂಭಗೊಂಡು 10 ವರ್ಷವಾದರೂ ಒಳ ರಾಜಕೀಯತೆ, ವಿಷಯ ತಜ್ಞರ ಕೊರತೆಯಿಂದಾಗಿ ಇನ್ನೂ ಅಭಿವೃದ್ಧಿಯಾಗಬೇಕಾದ ಕೆಲಸಗಳು ಸಾಕಷ್ಟಿದೆ. ಇದರಿಂದ ವಿದ್ಯಾರ್ಥಿಗಳು ಕಲಾ ಆಸಕ್ತರು ಮತ್ತು ಕರ್ನಾಟಕ ಪ್ರದರ್ಶನ ಕಲೆಗಳ ಪದವೀಧರರ ಒಕ್ಕೂಟ ಪ್ರತಿವರ್ಷವೂ ಅಸಮಾಧಾನಕ್ಕೆ ಒಳಗಾಗುತ್ತಿದ್ದಾರೆ. ಈ ಹಿಂದೆ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿ ಗಳಿಗೆ ಈ ವಿಚಾರ ಕುರಿತು ದೂರು ನೀಡಲಾಗಿತ್ತು ಹಾಗಿದ್ದರೂ ಮತ್ತೆ ಅದೇ ಪ್ರಯತ್ನ ಮುಂದುವರಿದಿದೆ.
ಒಟ್ಟಾರೆಯಾಗಿ ಕುಲಪತಿ ಆಯ್ಕೆ ವಿಚಾರದಲ್ಲಿನ ರಾಜಕೀಯತೆಯಿಂದ ವಿಶ್ವವಿದ್ಯಾನಿಲಯ ಕೊರಗುತ್ತಿದೆ. ಈ ಭಾರಿ ಉತ್ತಮ ವಿಷಯ ತಜ್ಞರನ್ನೇ, ನಿಯಮಾವಳಿಯ ಪ್ರಕಾರ ಗರ್ವನರ್ ಆಯ್ಕೆ ಮಾಡಿ, ಯಾವುದೇ ರಾಜಕೀಯತೆಯನ್ನು ಮಾಡದೇ ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ಸಹಕರಿಸಬೇಕೆಂಬುದು ಅಲ್ಲಿನ ಸಾರ್ವಜನಿಕರ ಸೇರಿದಂತೆ ವಿದ್ಯಾರ್ಥಿಗಳ ಮನವಿಯಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.