ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ಶಿಡ್ಲಘಟ್ಟ ನಗರ ಸೇರಿದಂತೆ ತಾಲೂಕಿನಾದ್ಯಂತ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರ-ಸಂಭ್ರಮ ಮತ್ತು ಶ್ರಧ್ದಾಭಕ್ತಿಯಿಂದ ಆಚರಿಸಲಾಯಿತು.
ಮಳೆ ಮತ್ತು ಬೆಳೆ ಇಲ್ಲದೇ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು ಹೂ-ಹಣ್ಣುಗಳ ದರ ಗಗನಕ್ಕೇರಿದರು ಸಹ ಹಬ್ಬದ ಆಚರಣೆಗೆ ಯಾವುದೇ ಕೊರತೆಯಾಗದಂತೆ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.
ಹಬ್ಬದ ಅಂಗವಾಗಿ ವಿವಿಧ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಮನೆಯಲ್ಲಿ ವರ ಮಹಾಲಕ್ಷ್ಮೀಯ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದಿತ್ತು ನೆರೆಹೊರೆಯ ಮುತೈದಿಯರು,ಹೆಂಗೆಳೆಯರನ್ನು ಕರೆದು ಅರಿಶಿನ-ಕುಂಕುಮ ಕೊಟ್ಟು ತಾಂಬೂಲ ನೀಡಿ ತೀರ್ಥ ಪ್ರಸಾದವನ್ನು ವಿತರಿಸಿ ಆಶೀರ್ವಾದ ಪಡೆದರು.
ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ