ದಾಖಲೆಗಳ ಸರಮಾಲೆ ಕಟ್ಟಿದ ಡಾ.ಅಂಬಿಕಾ ಹಂಚಾಟೆ

 

ಹಾವೇರಿ, ವಿಶ್ವ ಕನ್ನಡಿಗ ನ್ಯೂಸ್ ಜನ ಮನ ಫೌಂಡೇಷನ್ (ರಿ), ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಹಾಗೂ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ವೇದಿಕೆಯ ನಿರ್ಮಾತೃ ಆದ ಹಾವೇರಿ ಜಿಲ್ಲೆಯ ಡಾ.ಅಂಬಿಕಾ ಹಂಚಾಟೆ ಯವರು ವಿವಿಧ ವಿಭಾಗದ ಅಪರೂಪದ ಸಾಧಕರ ಸಾಧನೆಯನ್ನು ನಾಡಿನ ಸಾಧಕರ ಪಟ್ಟಿಗೆ ಸೇರಿಸುವ ಕಾರ್ಯ ಮಾಡುತ್ತಿದ್ದು ಕರ್ನಾಟಕ ರಾಜ್ಯಕ್ಕೆ ಮೀಸಲಾದ ವೇದಿಕೆಯನ್ನು ದೇಶದ ಎಲ್ಲ ಅಪರೂಪದ ಲಿಮ್ಕಾ, ಗಿನ್ನಿಸ್ ಹಾಗೂ ಮಲ್ಟಿಪಲ್ ರೆಕಾರ್ಡ್ ಮಾಡಿದ / ಹೊಂದಿದ ಸಾಧಕಾರಿಗೂ ಅವಕಾಶ ನೀಡಿ ಅವರನ್ನು ಸಹ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಸ್ಥೆಯನ್ನು ರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ್ದು ಕರ್ನಾಟಕ ಸೇರಿದಂತೆ, ತಮಿಳ್ನಾಡು, ಆಂಧ್ರ ಪ್ರದೇಶ, ತೆಲಂಗಾಣ, ಛತ್ತೀಸ್ಗಡ್ ,ರಾಜಸ್ಥಾನ್, ಮಹಾರಾಷ್ಟ್ರ, ಉತ್ತರಪ್ರದೇಶ, ಲಕ್ನೌ, ದೆಹಲಿ ಹೀಗೆ ನಾನಾ ರಾಜ್ಯಗಳ ಸಾಧಕರನ್ನು ಸಹ ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ ಪಟ್ಟಿಯಲ್ಲಿ ಸೇರ್ಪಡೆ ಮಾಡುತ್ತಿರುವದು ಹೆಮ್ಮೆಯ ಕಾರ್ಯವಾದರು ಸಂಸ್ಥೆಯ ನಿರ್ವಾಹಕರಾಗಿ ಕೇವಲ ಸಂಸ್ಥೆ ನಡೆಸುವದಲ್ಲದೆ ತಾವು ಒಬ್ಬ ವಿಧ್ಯಾರ್ಥಿನಿಯಂತೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆಯನ್ನು ನೀಸುವದರಲ್ಲಿ ಏನು ಹಿಂದೆ ಬಿದ್ದಿಲ್ಲ ಎಂಬುದಕ್ಕೆ ಸಾಲು ಸಾಲು ವಿಭಿನ್ನ ರೀತಿಯಲ್ಲಿ ನಾಲ್ಕು ವಿಶ್ವ ದಾಖಲೆಯನ್ನು ಮಾಡಿ ಹಾವೇರಿ ಜಿಲ್ಲೆಗೆ ಹಾಗು ನಾಡಿಗೆ ಹೆಮ್ಮೆ ತಂದಿದ್ದಾರೆ .

ಸತತ ಪ್ರಯತ್ನವಿದ್ದರೆ, ನಿರಂತರ ಮಾಡುವ ಕಾಯಕದಲ್ಲಿ ಶ್ರಮವಿದ್ದಾರೆ ಎಲ್ಲವೂ ಸಾಧ್ಯ ಎನ್ನುವದಕ್ಕೆ ಡಿಸೇಂಬರ್ 18, 2108 ರಿಂದ ಮಾರ್ಚ್ 30 ,2019 ರ ವರೆಗಿನ ಅವಧಿಯಲ್ಲಿ 91 ಬಗೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಮ್ಮ ಕಾರ್ಯ ಸಾಧನೆಯನ್ನು ಸತತವಾಗಿ ಈ ಪೋರ್ಟಲ್ ನ್ಯೂಸ್ ನಲ್ಲಿ ಸುದ್ದಿಯಾಗಿ 90 ದಿನಗಳಲ್ಲಿ, 91 ಸಾಧನೆಯ ಕೀರ್ತಿ ಬಿರುದನ್ನು ಪಡೆದು ಜಿನಿಯಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿದ್ದಾರೆ.

ಇನ್ನು 2018 ರಿಂದ 2019 ಎರಡು ವರುಷಗಳ ಕಾಲ ಸತತವಾಗಿ ನಡೆಯುವ ಅಂತರ್ ರಾಷ್ಟ್ರೀಯ ಅವಾರ್ಡ್ ಕಮಿಟಿಗೆ ವಾಲಂಟಿಯರ್ ತೀರ್ಪುಗಾರರಾಗಿ 25ಕ್ಕಿಂತ ಅಧಿಕ ಕಮಿಟಿಯಲ್ಲಿ ಭಾಗವಹಿಸಿದ ದಾಖಲೆಯು ಭಾರತ್ ವರ್ಡ್ ರೇಕಾರ್ಡ್ ನಲ್ಲಿ ಪ್ರಶಂಸೆ ಪಡೆದಿದೆ ,ಮತ್ತು ಕರ್ನಾಟಕದಲ್ಲಿ ಬುಕ್ ಆಫ್ ರೆಕಾರ್ಡ್ ವೇದಿಕೆಯನ್ನು ಸ್ಥಾಪಿಸಿ ಸಾಧಕರನ್ನು ಗುರುತಿಸಿ
ಕಾರ್ಯಕ್ರಮ ಮಾಡಿ ಅದರ ಅರಿವನ್ನು ನೀಡುವದರ ಜೊತೆಗೆ ನವೀನತೆಯ ಕಾರ್ಯವನ್ನು ಮಾಡುತ್ತಾ ಮುನ್ನಡೆಯುತ್ತಿರುವ ಇವರ ಈ ಕಾರ್ಯವು ಗೋಲ್ಡನ್ ಸ್ಟಾರ್ ಬುಕ್ ಆಫ್ ರೇಕಾರ್ಡ್ನಲ್ಲಿ ಸೇರ್ಪಡೆಯಾಗಿದೆ ಇನ್ನು ಕಳೆದ 2018 ರಲ್ಲಿ ಅಂತರಾರ್ಷ್ಟ್ರೀಯ ಏಕನಾಮಿಕ್ಸ್ ಯುನಿವರ್ಸಿಟಿಯಲ್ಲಿ ಅತಿ ಕಿರಿಯ ವಯಸ್ಸಿನ ಡಿ.ಲಿಟ್ ಪದವಿ ಪಡೆದ ಮಹಿಳೆ ಎಂಬ ಖ್ಯಾತಿಯೊಂದಿಗೆ ಜೈ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರನ್ನು ದಾಖಲಿಸಿದ್ದಾರೆ .

ಒಟ್ಟಾರೆ ದಾಖಲೆಗಳ ಮೇಲೆ ದಾಖಲೆಯನ್ನು ಮಾಡುತ್ತ ಶೈಕ್ಷಣಿಕ ಮತ್ತು ಸೃಜನಶೀಲತೆಯನ್ನು ಒಟ್ಟು ಗೂಡಿಸಿ ಸಾಧನೆಯ ಹಾದಿಯಲ್ಲಿ ನಡೆಯಲಿರುವ ಡಾ.ಅಂಬಿಕಾ ಹಂಚಾಟೆಯವರನ್ನು ಇದೀಗ ಅವರ ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವ ದಿ ಯಂಗೆಸ್ಟ್ ಡಿ.ಲಿಟ್ ಅವಾರ್ಡ್ ಹೋಲ್ಡರ್ ಇನ್ ವುಮನೆ ಎಂಬ ರೆಕಾರ್ಡ್ ಪಟ್ಟಿಯ ಪ್ರಶಸ್ತಿ ಪತ್ರವನ್ನು ಇಂಟರ್ನ್ಯಾಷನಲ್ ಏಕನಾಮಿಕ್ಸ್ ಯುನಿವರ್ಸಿಟಿ ಯ ಛಾನ್ಸಲರ್ ಆದ ಡಾ.ವೆಂಕಟರಾಮನ್ ಸುಂದರಂ ಅವ್ರು ಮಧುರೈ ನಲ್ಲಿ ನಡೆಯಲಿರುವ ಡಾಕ್ಟ್ರೇಟ್ ಸಮಾರಂಭದಲ್ಲಿ ಪ್ರಧಾನ ಮಾಡಲಿದ್ದಾರೆ ಎಂದು ಮಾಹಿತಿ ತಿಳಿಸಿರುತ್ತಾರೆ

www.vknews.in

ಪ್ರಧಾನ ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...