ಹೊಸನಗರದಲ್ಲಿ ಈದುಲ್ ಅಝ್ಹಾ ಆಚರಣೆ

(www.vknews.com) : ಹೊಸನಗರ ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಮಸೀದಿಯ ಖತೀಬರಾದ ಮೌಲಾನಾ ಮೊಹಮ್ಮದ್ ಅಲಿ ಮದನಿ ಹಬ್ಬದ ವಿಶೇಷತೆಯನ್ನು ವಿವರಿಸುತ್ತಾ ತ್ಯಾಗ ಬಲಿದಾನಗಳ ಸ್ಮರಣೆಗಳು ಮತ್ತೆ ಮರುಕಳಿಸುತ್ತಾ ಮತ್ತೊಮ್ಮೆ ಬಕ್ರೀದ್ ನಮ್ಮೆಡೆಗೆ ಬಂದಿದೆ.

ಈ ಬಕ್ರೀದ್ ಹಬ್ಬದ ಶುಭ ಸಂದರ್ಭದಲ್ಲಿ ನಿಮ್ಮ ಮನದಲ್ಲೂ ಮನೆಯಲ್ಲೂ ಸಂತೋಷ ತುಂಬಿ ತುಳುಕಲಿ. ಶಾಂತಿ ಸಮಾಧಾನ ಸಂತೋಷ ಸಂಭ್ರಮದ ಸಂದೇಶಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು, ಮನದಲ್ಲಿರುವ ಹಳೆಯ ದ್ವೇಷ ವೈಷಮ್ಯಗಳನ್ನು ದೂರ ಮಾಡಿಕೊಂಡು ಮುಂಬರುವ ಜೀವನ ಸಂತೋಷದಿಂದ ಕೂಡಿರಲು ಈ ಈದುಲ್ ಅಝ್’ಹಾ ಕಾರಣವಾಗಲಿ.

ಪ್ರವಾಹಕ್ಕೆ ಬಲಿಯಾಗಿ ಮನೆಗಳನ್ನು ಮನೆಮಂದಿಯನ್ನು ಕಳಕೊಂಡ ಸಂತ್ರಸ್ತರನ್ನು ಮರೆಯದಿರೋಣ, ಇದ್ದುದನ್ನು ಪರಸ್ಪರ ಹಂಚಿ ಕೊಂಡು ಈದ್ ಆಚರಿಸೋಣ, ಈ ದಿನ ಅವರಿಗಾಗಿ ಏನಾದರು ಸಹಾಯ ಮಾಡೋಣ, ಅವರ ಕಣ್ಣೀರಿನಲ್ಲಿ ನಾವು ಭಾಗಿಯಾಗೋಣ. ಎಂದು ಹೇಳಿದರು ಈ ಸಂದರ್ಭದಲ್ಲಿ ಜಮಾಅತ್ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...