(ವಿಶ್ವ ಕನ್ನಡಿಗ ನ್ಯೂಸ್ ) : ಕಳೆದ ಜುಲೈ ತಿಂಗಳಿನಲ್ಲಿ ಪ್ರತಿ ಸೆಕೆಂಡಿಗೆ 21 ಮೆಗಾಬಿಟ್ಸ್ (Mbps) ಸರಾಸರಿ ಡೌನ್ಲೋಡ್ ವೇಗದೊಂದಿಗೆ, ಅತ್ಯಂತ ವೇಗದ ಮೊಬೈಲ್ ಜಾಲವಾಗಿ ರಿಲಯನ್ಸ್ ಜಿಯೋ ತನ್ನ ಮುಂಚೂಣಿ ಸ್ಥಾನದಲ್ಲಿ ಮುಂದುವರೆದಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಇತ್ತೀಚೆಗೆ ಬಿಡುಗಡೆಗೊಳಿಸಿರುವ ದತ್ತಾಂಶದಲ್ಲಿ ಈ ವಿಷಯವನ್ನು ಪ್ರಕಟಿಸಿದ್ದು, ಅಪ್ಲೋಡ್ ವೇಗದಲ್ಲಿ ವೋಡಾಫೋನ್ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಜೂನ್ ತಿಂಗಳಿನಲ್ಲಿ 17.6 Mbps 4ಜಿ ಡೌನ್ಲೋಡ್ ವೇಗ ದಾಖಲಿಸಿದ್ದ ಜಿಯೋ, ಜುಲೈನಲ್ಲಿ 21 Mbps ತಲುಪುವ ಮೂಲಕ ವೇಗವನ್ನು ಉತ್ತಮಪಡಿಸಿಕೊಂಡಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಪ್ರಕಟಿಸಿರುವ ಸ್ಪೀಡ್ ಚಾರ್ಟ್ ಪ್ರಕಾರ ಏರ್ಟೆಲ್, ವೋಡಾಫೋನ್ ಹಾಗೂ ಐಡಿಯಾ ಸೆಲ್ಯುಲರ್ ಅನುಕ್ರಮವಾಗಿ 8.8 Mbps, 7.7 Mbps ಹಾಗೂ 6.6 Mbps ಸರಾಸರಿ ಡೌನ್ಲೋಡ್ ವೇಗವನ್ನು ದಾಖಲಿಸಿವೆ.
ಜುಲೈ ತಿಂಗಳಿನಲ್ಲಿ 2.5 Mbps ಸರಾಸರಿ ಡೌನ್ಲೋಡ್ ವೇಗದೊಡನೆ ಸರ್ಕಾರಿ ಒಡೆತನದ ಬಿಎಸ್ಎನ್ಎಲ್ ಅತಿವೇಗದ 3G ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2 Mbps ಸರಾಸರಿ ಡೌನ್ಲೋಡ್ ವೇಗದೊಡನೆ ಐಡಿಯಾ, 1.9 Mbpsನೊಡನೆ ವೋಡಾಫೋನ್ ಹಾಗೂ 1.4 Mbpsನೊಡನೆ ಏರ್ಟೆಲ್ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
ಜುಲೈನಲ್ಲಿ 5.8 Mbps ಸರಾಸರಿ ಅಪ್ಲೋಡ್ ವೇಗದೊಡನೆ ವೋಡಾಫೋನ್ ಅತಿವೇಗದ 4G ಅಪ್ಲೋಡ್ ಜಾಲವಾಗಿ ಹೊರಹೊಮ್ಮಿದೆ. 5.3 Mbps ಅಪ್ಲೋಡ್ ವೇಗದೊಡನೆ ಐಡಿಯಾ ಸೆಲ್ಯುಲರ್, 4.3 Mbpsನೊಡನೆ ಜಿಯೋ ಹಾಗೂ 3.2 Mbpsನೊಡನೆ ಏರ್ಟೆಲ್, ಈ ಪಟ್ಟಿಯಲ್ಲಿ ನಂತರದ ಸ್ಥಾನಗಳನ್ನು ಪಡೆದಿವೆ.
ಬಳಕೆದಾರರು ಯಾವುದೇ ವೀಡಿಯೋ ವೀಕ್ಷಿಸಲು, ಅಂತರಜಾಲ ತಾಣಗಳನ್ನು ಬ್ರೌಸ್ ಮಾಡಲು, ಇಮೇಲ್ ಸಂದೇಶಗಳನ್ನು ಪಡೆದುಕೊಳ್ಳಲು ಡೌನ್ಲೋಡ್ ವೇಗ ಉತ್ತಮವಾಗಿರಬೇಕಾದ್ದು ಅತ್ಯಗತ್ಯ. ಇದೇರೀತಿ ಗ್ರಾಹಕರು ಇಮೇಲ್ ಅಥವಾ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ಗಳ ಮೂಲಕ ಚಿತ್ರ, ವೀಡಿಯೋ ಮತ್ತಿತರ ಕಡತಗಳನ್ನು ಹಂಚಿಕೊಳ್ಳಲು ಅಪ್ಲೋಡ್ ವೇಗ ಉತ್ತಮವಾಗಿರಬೇಕಾಗುತ್ತದೆ.
3G ಜಾಲಗಳ ಪೈಕಿ ಬಿಎಸ್ಎನ್ಎಲ್, ವೋಡಾಫೋನ್ ಹಾಗೂ ಐಡಿಯಾ ಜುಲೈ ತಿಂಗಳಿನಲ್ಲಿ 1.2 Mbps ಸರಾಸರಿ ಅಪ್ಲೋಡ್ ವೇಗ ದಾಖಲಿಸಿದರೆ, ಏರ್ಟೆಲ್ನ ಅಪ್ಲೋಡ್ ವೇಗ 0.6 Mbpsಗಳಷ್ಟಿತ್ತು.
ಜೂನ್ ತಿಂಗಳಿನಲ್ಲಿ ಜಿಯೋ ಗ್ರಾಹಕರ ಸಂಖ್ಯೆ 82.6 ಲಕ್ಷದಷ್ಟು ಹೆಚ್ಚಳ ರಿಲಯನ್ಸ್ ಜಿಯೋ ಕಳೆದ ಜೂನ್ ತಿಂಗಳಿನಲ್ಲಿ 82.6 ಲಕ್ಷ ಹೊಸ ಗ್ರಾಹಕರನ್ನು ಪಡೆದುಕೊಂಡಿದೆ ಎಂದೂ ಟ್ರಾಯ್ ದತ್ತಾಂಶ ಹೇಳಿದೆ. ಇದೇ ಅವಧಿಯಲ್ಲಿ ಹಳೆಯ ಸಂಸ್ಥೆಗಳಾದ ಭಾರ್ತಿ ಏರ್ಟೆಲ್ ಹಾಗೂ ವೋಡಾಫೋನ್ ಐಡಿಯಾ ಒಟ್ಟಾರೆ 41.75 ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ.
ಈ ಮೂಲಕ ಒಟ್ಟು ಗ್ರಾಹಕರ ಪಟ್ಟಿಯಲ್ಲಿ ಜಿಯೋ 33.12 ಕೋಟಿ ಗ್ರಾಹಕರೊಡನೆ ಎರಡನೇ ಸ್ಥಾನಕ್ಕೆ ತಲುಪಿದ್ದು, 38.34 ಕೋಟಿ ಗ್ರಾಹಕರೊಡನೆ ವೋಡಾಫೋನ್ ಐಡಿಯಾ ಮೊದಲ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಭಾರ್ತಿ ಏರ್ಟೆಲ್ಗೆ 32.03 ಕೋಟಿ ಗ್ರಾಹಕರಿದ್ದಾರೆ.
ಪತ್ರಿಕಾ ಪ್ರತಿನಿಧಿ, ವಿಕೆ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.