ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : CITU 16ನೇ ದ.ಕ.ಜಿಲ್ಲಾ ಸಮ್ಮೇಳನವು 2 ದಿನಗಳ ಕಾಲ ನಗರದ ಬೋಳಾರದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಸಮ್ಮೇಳನಕ್ಕೆ ಮಾರ್ಗದರ್ಶಕರಾಗಿ CITU ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿ, ಹಿರಿಯ ಮುಖಂಡರಾದ ಕೆ.ಆರ್. ಶ್ರೀಯಾನ್ ರವರು ಭಾಗವಹಿಸಿದ್ದರು. ಸಮ್ಮೇಳನವು ಮುಂದಿನ 3 ವರ್ಷಗಳ ಅವಧಿಗೆ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆಗೊಳಿಸಿತು.
ಜಿಲ್ಲಾಧ್ಯಕ್ಷರಾಗಿ ಜೆ.ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್ ಬಜಾಲ್, ಖಜಾಂಚಿಯಾಗಿ ಯೋಗೀಶ್ ಜಪ್ಪಿನಮೊಗರು ರವರು ಸರ್ವಾನುಮತದಿಂದ ಪುನರಾಯ್ಕೆಗೊಂಡರು. ಉಪಾಧ್ಯಕ್ಷರುಗಳಾಗಿ ಕೆ.ಆರ್. ಶ್ರೀಯಾನ್, ಯು.ಬಿ. ಲೋಕಯ್ಯ,ವಸಂತ ಆಚಾರಿ, ಪದ್ಮಾವತಿ ಶೆಟ್ಟಿ, ಗಂಗಯ್ಯ ಅಮೀನ್, ರಮಣಿ ಮೂಡಬಿದ್ರೆ ಹಾಗೂ ಕಾರ್ಯದರ್ಶಿಗಳಾಗಿ ಯು.ಜಯಂತ ನಾಯಕ್, ರಾಮಣ್ಣ ವಿಟ್ಲ, ರಾಧಾ ಮೂಡಬಿದ್ರೆ, ಶಿವಕುಮಾರ್, ವಸಂತ ನಡ, ನೋಣಯ್ಯ ಗೌಡರವರನ್ನು ಸರ್ವಾನುಮತದಿಂದ ಆರಿಸಲಾಯಿತು.
ಜಿಲ್ಲಾ ಸಮಿತಿ ಸದಸ್ಯರುಗಳಾಗಿ ರೋಹಿಣಿ ಪೆರಾಡಿ, ರಾಬರ್ಟ್ ಡಿಸೋಜ, ಶಂಕರ ವಾಲ್ಪಾಡಿ, ಗಿರಿಜಾ ಮೂಡಬಿದ್ರೆ, ರವಿಚಂದ್ರ ಕೊಂಚಾಡಿ, ಭಾರತಿ ಬೋಳಾರ, ಸಂತೋಷ್ ಆರ್.ಎಸ್, ಅಹಮ್ಮದ್ ಭಾವ, ವಸಂತಿ ಕುಪ್ಪೆಪದವು, ವಿಲಾಸಿನಿ ತೊಕ್ಕೋಟು, ಜನಾರ್ಧನ ಕುತ್ತಾರ್, ಭವ್ಯ ಮುಚ್ಚೂರು, ಜೋನಿ ಕೆ.ಪಿ, ಜಯಂತಿ ಬಿ.ಶೆಟ್ಟಿ, ಜಯಲಕ್ಷ್ಮಿ ಜಪ್ಪಿನಮೊಗರು, ಬಾಬು ದೇವಾಡಿಗ, ವಾರಿಜಾ ಕುಪ್ಪೆಪದವು, ಜಯಂತಿ ನೆಲ್ಲಿಂಗೇರಿ, ನಾಗರಾಜ್ ಸುಳ್ಯ, ಮಹಮ್ಮದ್ ತಸ್ರೀಫ್, ದಿನೇಶ್ ಶೆಟ್ಟಿ, ಉದಯ ಕುಮಾರ್, ಲೋಲಾಕ್ಷಿ ಬಂಟ್ವಾಳ, ಚಂದ್ರಹಾಸ ಪಿಲಾರ್, ಭವಾನಿ ವಾಮಂಜೂರು, ಸುಂದರ ಕುಂಪಲ, ದೇಜಪ್ಪ ಪೂಜಾರಿ ವಿಟ್ಲ, ಯಶೋಧ ಮಳಲಿಯವರನ್ನು ಆಯ್ಕೆಗೊಳಿಸಲಾಯಿತು.
ಪತ್ರಿಕಾ ಪ್ರತಿನಿಧಿ, ವಿಕೆ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.