(ವಿಶ್ವ ಕನ್ನಡಿಗ ನ್ಯೂಸ್,www.vknews.in ): ಕೇಂದ್ರದ ಮಾಜಿ ಗೃಹ ಮಂತ್ರಿ , ವಿತ್ತ ಸಚಿವ ಚಿದಂಬರಂ ಅವರನ್ನು ಈಗಾಗಲೇ ವಶಕ್ಕೆ ಪಡೆದಿರುವ ಸಿಬಿಐ ಇದೀಗ ತನ್ನ ಮುಂದಿನ ಟಾರ್ಗೆಟ್ ಆಗಿ ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದ ಹಿಂದೆ ಬೀಳುವುದರಲ್ಲಿ ಯಾವುದೆ ಅನುಮಾನವಿಲ್ಲ .
ಶಾರದಾ ಪೊಂಜಿ ಹಗರಣ ಹಾಗೂ ವಂಚನೆ ಸಂಬಂಧ ಈಗಾಗಲೇ ಸಾಕಷ್ಟು ಬಾರಿ ಸಿಬಿಐ ಸಿಂಹ ಹೆಜ್ಜೆ ಯಿಟ್ಟಿತ್ತು , ಆದರೆ ಮಮತಾ ಬೆನರ್ಜಿ ವಿರುದ್ಧ ಕ್ರಮ ಕೈಗೊಳ್ಳುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ ,ಈಗ ಕೇಂದ್ರ ಸರಕಾರ ಕೂಡ ಮಮತಾ ಬ್ಯಾನರ್ಜಿ ವಿರುದ್ದವಿರುವುದು ಸಿಬಿಐ ಗೆ ವರದಾನವಾಗಿದೆ . ಕಳೆದಬಾರಿ ಆರೋಪಿಯಾಗಿದ್ದ ಪೋಲಿಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಹೋಗಿದ್ದ ಸಿಬಿಐ ವಿರುದ್ಧ ಮಮತಾ ಬ್ಯಾನರ್ಜಿ ಅಕ್ಷರಶಃ ಕೆಂಡ ಮಂಡಲವಾಗಿದ್ದರು. ಆದರೆ ಇದೀಗ ಚಿತ್ರಣವೇ ಬದಲಾಗಿದೆ .
ಪಶ್ಚಿಮ ಬಂಗಾಳದ ಬಹು ದೊಡ್ಡ ಹಗರಣವಾಗಿರುವ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಾಕಷ್ಟು ಪ್ರಭಾವಿ ನಾಯಕರಿದ್ದಾರೆ .ವಿಶೇಷವೆಂದರೆ ಈ ಪ್ರಕರಣದಲ್ಲಿ ಪಿ. ಚಿದಂಬರಂ ಅವರ ಪತ್ನಿ ನಳಿನಿ ಕೂಡ ಇದ್ದು ಅವರ ವಿರುದ್ಧ ಕೂಡ ಸಿಬಿಐ ಜಾರ್ಜ್ ಶೀಟ್ ಹಾಕಿದೆ. ಐಪಿಎಸ್ ಅಧಿಕಾರಿ ರಾಜೀವ್ ಕುಮಾರ್ ಈ ಪ್ರಕರಣದ ಸಾಕ್ಷಿ ನಾಶ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪ ಕೂಡ ಇದೆ .ಇದು ಮಮತಾ ಬ್ಯಾನರ್ಜಿ ಅವರ ಸೂಚನೆಯಂತೆ ನಡೆದಿದೆ ಎಂಬ ಬಲವಾದ ಆರೋಪ ಕೂಡ ಕೇಳಿ ಬಂದಿತ್ತು . ಈ ಪ್ರಕರಣ ಈಗ ವೇಗ ಪಡೆದುಕೊಂಡರೆ ಇದರಲ್ಲಿ ಸಾಕಷ್ಟು ಜನ ಜೈಲು ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.