ಮೊದಲ ಟೆಸ್ಟ್ : ಟೀಮ್ ಇಂಡಿಯಾಗೆ ಆಸರೆಯಾದ ಅಜಿಂಕ್ಯ ರಹಾನೆ

(ವಿಶ್ವ ಕನ್ನಡಿಗ ನ್ಯೂಸ್ www.vknews.in): ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡಿದ್ದು ಮೊದಲ ದಿನ ವಿಂಡೀಸ್ ವೇಗಿಗಳ ವಿರುದ್ಧ ಟೀಮ್ ಇಂಡಿಯಾ ದ ಅಗ್ರ ಶ್ರೇಯಾಂಕದ ಬ್ಯಾಟ್ಸ್ ಮ್ಯಾನ್ ಗಳು ನಿರುತ್ತರರಾಗಿದ್ದರು .

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಟೀಮ್ ಇಂಡಿಯಾ ಮಾಯಾಂಕ್ ಅಗರ್ವಾಲ್ (5),ಪೂಜಾರ (2)ಮತ್ತು ನಾಯಕ ವಿರಾಟ್ ಕೊಹ್ಲಿ(9)ಯನ್ನು ಬಹುಬೇಗ ಕಳೆದುಕೊಂಡಿತು . ಆದರೆ ನಂತರ ರಹಾನೆ (81)ಉತ್ತಮ ಆಟ ಪ್ರದರ್ಶಿಸಿದರೆ ,ರಾಹುಲ್ (44)ಮತ್ತು ವಿಹಾರಿ (32)ಉತ್ತಮ ಸಾಥ್ ನೀಡಿದರು . ಮಳೆಯ ಕಾರಣ ಆಟ ನಿಂತಾಗ ಟೀಮ್ ಇಂಡಿಯಾ 6 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿದೆ. ರಿಷಬ್ ಪಂತ್ ಅಜೇಯ 20 ಮತ್ತು 3 ರನ್ ಗಳಿಸಿದ ಜಡೇಜಾ ಕ್ರೀಸ್ ನಲ್ಲಿದ್ದಾರೆ .

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...