(ವಿಶ್ವ ಕನ್ನಡಿಗ ನ್ಯೂಸ್ www.vknews.in): ಮೈತ್ರಿ ಸರಕಾರ ಪತನದ ನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿ ಜೆಡಿಎಸ್ ನ್ನು ಜಾಡಿಸಿದ್ದಾರೆ.
ಏಕಾಏಕಿಯಾಗಿ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ‘ಇವರ ನಾಟಕ ,ಕುತಂತ್ರ ನನಗೆ ಗೊತ್ತಿಲ್ವೆ ,ರಾಜ್ಯದಲ್ಲಿ ಬಿಜೆಪಿ ಸರಕಾರ ಬರಲು ಜೆಡಿಎಸ್ ಕಾರಣ,ದೇವೇಗೌಡರು ವಚನಭ್ರಷ್ಟರು ,ದೇವೇಗೌಡರು ಹೇಳೋದೆಲ್ಲ ಸುಳ್ಳು, ಸರಕಾರ ಮಾಡುವಾಗ ನೆರವು ಕೇಳ್ತಾರೆ ನಂತರ ಮರೀತಾರೆ ,ಇದು ಅವರ ಬುದ್ದಿ. ನಾನು ಮುಖ್ಯಮಂತ್ರಿಯಾಗೋದನ್ನ ಕುಮಾರಸ್ವಾಮಿ ಮೊದಲಬಾರಿ ತಪ್ಪಿಸಿದ್ರು ಅದನ್ನು ಅವರು ಸ್ವತಃ ಒಪ್ಪಿಕೊಂಡಿದ್ದಾರೆ ‘ ಎಂದು ಗುಡುಗಿದರು . ದೇವೇಗೌಡರು ಯಾರನ್ನು ಬೆಳೆಸಲ್ಲ , ಅವರು ಅವರ ಕುಟುಂಬವನ್ನಷ್ಟೇ ಬೆಳೆಸುತ್ತಾರೆ , ಸ್ವಜಾತಿಯನ್ನೇ ಬೆಳೆಸಲ್ಲ ಅವರು ಎಂದು ಮಾತಿನೇಟು ನೀಡಿದರು .