ಹಸು ಹೆಚ್ಚು ಹಾಲು ಕೊಡಬೇಕೇ.?ಹಸುವಿನ ಮುಂದೆ ಕೃಷ್ಣ ಕೊಳಲು ಬಾರಿಸಿದಂತೆ ಬಾರಿಸಿ:ಬಿಜೆಪಿ ಶಾಸಕ ದಿಲೀಪ್ ಕುಮಾರ್


ಅಸ್ಸಾಮ್ (ವಿಶ್ವ ಕನ್ನಡಿಗ ನ್ಯೂಸ್): ಹಸುವಿನ ಮುಂದೆ ಕೃಷ್ಣ ಕೊಳಲು ಬಾರಿಸಿದಂತೆ ಬಾರಿಸಿದರೆ ಹಾಲಿನ ಪ್ರಮಾಣ ಇಮ್ಮಡಿಯಾಗುತ್ತದೆ ಎಂದು ಅಸ್ಸಾಮಿನ ಬಿಜೆಪಿ ಶಾಸಕ ದಿಲೀಪ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ತನ್ನ ಸ್ವಂತ ಅನುಭವದಲ್ಲಿ ಹೀಗೆ ಹಸುವಿನ ಹಾಲಿನಲ್ಲಿ ಪ್ರಮಾಣದಲ್ಲಿ ಏರಿಕೆಯಾದ ಹಲವು ಅನುಭವ ಇದೆ ಎಂದು ಸಿಲ್ಚಾರ್ ಶಾಸಕ ವಿವರಿಸಿದರು.ನಾನು ವಿಜ್ಞಾನಿಯಲ್ಲ ಆದರೆ ಭಾರತದ ಸಂಸ್ಕೃತಿಯ ಅಪಾರ ಅರಿವಿನ ಹಿನ್ನಲೆಯಲ್ಲಿ ಹಾಗು ಪ್ರಸ್ತುತ ಅನೇಕ ವಿಚಾರಗಳನ್ನು ವಿಜ್ಞಾನಿಗಳು ನಂಬುದರಿಂದಲೇ ಇದನ್ನು ಸತ್ಯ ಎಂದು ವಿಶ್ವಸಿಸುವುದಾಗಿ ಅವರು ತಿಳಿಸಿದರು.ಕಳೆದ ವರ್ಷ ನಡೆದ ಪ್ರತಿಭಟನೆ ಸಂಬಂಧಿಸಿ , ಸಿಲ್ಚಾರ್ ಎಂ.ಪಿ ಸುಶ್ಮಿತಾ ದೇವಿ ಯನ್ನು “ಸಿಲ್ಚಾರ್ ನ ಕಳಂಕ” , “ಐವತ್ತರ ಹರೆಯದಲ್ಲಿಯು ಮದುವೆಯಾಗದ ಮಹಿಳೆ” ಎಂದು ಜರೆದು ವಿವಾದಕ್ಕೀಡಾಗಿದ್ದರು.

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...