ಪದಕ ವಿಜೇತ ಟ್ವೆಕಾಂಡೋ ವಿದ್ಯಾರ್ಥಿಗಳು ತರಬೇತುದಾರರೊಂದಿಗೆ
ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ಕರ್ನಾಟಕ ರಾಜ್ಯ ಟ್ವೆಕಾಂಡೋ ಎಸೋಸಿಯೇಶನ್ ಇತ್ತೀಚೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 37ನೇ ರಾಜ್ಯ ಸಬ್ ಜ್ಯೂನಿಯರ್, ಜ್ಯೂನಿಯರ್, ಸೀನಿಯರ್ ಹಾಗೂ 6ನೇ ಕೆಡಟ್ ಚಾಂಪಿಯನ್ಶಿಪ್ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಂ ಮತ್ತು ಮಾರ್ಷಲ್ ಆಟ್ರ್ಸ್ ಸೆಂಟರಿನ ಟೇಕ್ವಾಂಡೋ ವಿದ್ಯಾರ್ಥಿಗಳು 3 ಚಿನ್ನ ಹಾಗೂ 4 ಕಂಚಿನ ಪದಕಗಳನ್ನು ಪಡೆದು ಸಾಧನೆಗೈದಿದ್ದಾರೆ.
ಅಂಡರ್ 8 ಜಿ4 ವಿಭಾಗದಲ್ಲಿ ಭಾಗವಹಿಸಿದ್ದ ಮೊಹಮ್ಮದ್ ಅತೀಫ್ ಫೈಟಿಂಗ್ನಲ್ಲಿ ಚಿನ್ನ, ಹಾಗೂ ಮುಹಮ್ಮದ್ ಶಕೀಬ್ ಕಲರ್ ಬೆಲ್ಟ್ ವಿಭಾಗದ ಫೈಟಿಂಗ್ನಲ್ಲಿ ಚಿನ್ನ ಹಾಗೂ ಮೊಹಮ್ಮದ್ ಮುಸ್ತಫಾ ವೈಟ್ ಬೆಲ್ಟ್ ವಿಭಾಗದ ಫೈಟಿಂಗ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಸಬ್ ಜ್ಯೂನಿಯರ್ ವಿಭಾಗದಲ್ಲಿ ಭಾಗವಹಿಸಿದ್ದ ಮುಹಮ್ಮದ್ ನಶಾಲ್ ಅಂಡರ್ 25 ವೈಟ್ ಕೆಟಗೆರಿಯ ಫೈಟಿಂಗ್ನಲ್ಲಿ ಕಂಚು, ಮುಝಮ್ಮಿರುಲ್ ಅಮೀನ್ ಅಂಡರ್ 29 ವೈಟ್ ಕೆಟಗೆರಿಯ ಫೈಟಿಂಗ್ನಲ್ಲಿ ಕಂಚು ಹಾಗೂ ಮುಹಮ್ಮದ್ ಅಯಾನ್ ಅಂಡರ್ 41 ವೈಟ್ ಕೆಟಗೆರಿಯ ಫೈಟಿಂಗ್ನಲ್ಲಿ ಕಂಚು ಮತ್ತು ಜ್ಯೂನಿಯರ್ ವಿಭಾಗದಲ್ಲಿ ಭಾಗವಹಿಸಿದ ನೌಶಿಕ್ರಾಜ್ ಅಂಡರ್ 51 ವೈಟ್ ಕೆಟಗೆರಿಯ ಫೈಟಿಂಗ್ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.
ಈ ಎಲ್ಲಾ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಟ್ವೆಕಾಂಡೋ ತರಬೇತುದಾರ ಇಸಾಕ್ ನಂದವಾರ ತರಬೇತಿ ನೀಡಿದ್ದು, ಜಿಮ್ ತರಬೇತುದಾರರಾದ ಪಿ ಎಂ ಇಲ್ಯಾಸ್ ಹಾಗೂ ರಫೀಕ್ ಸಹಕಾರ ನೀಡಿದ್ದಾರೆ.
ಚಾಂಪಿಯನ್ಶಿಪ್ನಲ್ಲಿ ಒಟ್ಟು 15 ಜಿಲ್ಲಾ ತಂಡಗಳು ಭಾಗವಹಿಸಿವೆ ಎಂದು ರಾಜ್ಯ ಟ್ವೆಕಾಂಡೋ ಎಸೋಸಿಯೇಶನ್ ಕಾರ್ಯದರ್ಶಿ ಸಿ.ಜಿ. ಶಶಿವರ್ದನ್ ತಿಳಿಸಿದ್ದಾರೆ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.