ಬೆಂಗಳೂರಿನಲ್ಲಿ ರಿಲಾಯನ್ಸ್ ಸ್ಮಾರ್ಟ್‍ನ ಹೊಸ ಸ್ಟೋರ್ ಆರಂಭ

ಬೆಂಗಳೂರು (www.vknews.com) : ರಿಲಾಯನ್ಸ್ ರೀಟೇಲ್‍ನ ಗ್ರಾಸರಿ ಸೂಪರ್‍ಮಾರ್ಕೆಟ್ ಸ್ಮಾರ್ಟ್‍ನ ಹೊಸ ಸ್ಟೋರ್ ಅನ್ನು ಬೆಂಗಳೂರಿನ ಆರ್.ಕೆ.ಹೆಗ್ಡೆ ನಗರದ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಮೊನಾರ್ಕ್ ಸೆರೆನಿಟಿಯಲ್ಲಿ ಆರಂಭಿಸಿದೆ. ಗ್ರಾಸರಿ, ಹಣ್ಣು & ತರಕಾರಿ, ಡೇರಿಯಿಂದ ಕಿಚನ್‍ವೇರ್, ಹೋಂವೇರ್ ಸೇರಿದಂತೆ ಎಲ್ಲಾ ಉತ್ಪನ್ನಗಳು ಒಂದೇ ಸೂರಿನಡಿ ಸಿಗಲಿವೆ.

ರಿಲಾಯನ್ಸ್ ಸ್ಮಾರ್ಟ್‍ನಲ್ಲಿ ವರ್ಷಪೂರ್ತಿ ಎಲ್ಲಾ ಉತ್ಪನ್ನಗಳ ಎಂಆರ್‍ಪಿ ಮೇಲೆ ಕನಿಷ್ಠ ಶೇ.6 ರಷ್ಟು ರಿಯಾಯ್ತಿಯನ್ನು ನೀಡಲಿದ್ದು, 1499 ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ಖರೀದಿಸಿದರೆ ಕೇವಲ 9 ರೂಪಾಯಿಗೆ ಒಂದು ಕೆಜಿ ಸಕ್ಕರೆ ಲಭ್ಯವಾಗಲಿದೆ. ಇದಲ್ಲದೇ, ಸ್ಟೇಪಲ್ಸ್ ಮತ್ತು ಹಣ್ಣು/ತರಕಾರಿಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುತ್ತಿವೆ.

ಬೆಂಗಳೂರಿನಲ್ಲಿ ಆರಂಭವಾಗಿರುವ ಈ ಹೊಸ ಸ್ಟೋರ್‍ನಿಂದಾಗಿ ಬೆಂಗಳೂರಿನಲ್ಲಿ ಒಟ್ಟು 7 ಸ್ಟೋರ್‍ಗಳು ಮತ್ತು ಕರ್ನಾಟಕದಲ್ಲಿ 17 ಸ್ಟೋರ್‍ಗಳನ್ನು ಹೊಂದಿದಂತಾಗಿದೆ. ಬೆಂಗಳೂರಿನ ಈ ಹೊಸ ಸ್ಟೋರ್ 13,000 ಚದರಡಿ ವಿಸ್ತೀರ್ಣ ಹೊಂದಿದ್ದು, ಗ್ರಾಹಕ ಸಹಾಯಕರು, ಆಕರ್ಷಕವಾದ ವಿನ್ಯಾಸ ಮತ್ತು ಗುಣಮಟ್ಟದ ಉತ್ಪನ್ನಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಾಗುವ ಮೂಲಕ ಗ್ರಾಹಕರ ನೆಚ್ಚಿನ ಸ್ಟೋರ್ ಎನಿಸಲಿದೆ. ಈ ಮೂಲಕ ಸ್ಟೋರ್ ಗ್ರಾಹಕರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಲಿದೆ. ಉದ್ಘಾಟನಾ ಆಫರ್ ಆಗಿ `ಪವರ್ ಆಫ್ 9’ ನ್ನು ಪರಿಚಯಿಸಲಾಗಿದ್ದು, ಗ್ರಾಹಕರು 500 ಎಂಎಲ್‍ನ ಶ್ರೀಕೃಷ್ಣ ಟೋನ್ಡ್ ಮಿಲ್ಕ್, ಪ್ಲಾಸ್ಟಿಕ್ ಕಂಟೇನರ್‍ಗಳ ಸೆಟ್ ಅನ್ನು ಕೇವಲ 9 ರೂಪಾಯಿಗೆ ಖರೀದಿಸಬಹುದಾಗಿದೆ (999 ರೂಪಾಯಿಗಳ ಉತ್ಪನ್ನಗಳನ್ನು ಖರೀದಿಸಿದರೆ ಈ ಆಫರ್).

ಕಳೆದ ಹಲವಾರು ವರ್ಷಗಳಿಂದ ರಿಲಾಯನ್ಸ್ ಸ್ಮಾರ್ಟ್ ಗ್ರಾಹಕರ ದೈನಂದಿನ ಅಗತ್ಯತೆಗಳನ್ನು ಆಕರ್ಷಕ ಬೆಲೆಗಳ ಮೂಲಕ ಪೂರೈಸುತ್ತಾ ಬರುತ್ತಿದೆ. ಗ್ರಾಹಕರಿಗೆ ಹೆಚ್ಚಿನ ಆದ್ಯತೆ ನೀಡುವ ರಿಲಾಯನ್ಸ್ ಸ್ಮಾರ್ಟ್ ಸೂಪರ್ ಮಾರ್ಕೆಟ್ ವಿಭಾಗದಲ್ಲಿ ಗ್ರಾಹಕರಿಗೆ ಅತ್ಯುತ್ತಮವಾದ ಶಾಪಿಂಗ್ ಅನುಭವವನ್ನು ನೀಡಲಿದೆ. ಪ್ರಸ್ತುತ ರಿಲಾಯನ್ಸ್ ಸ್ಮಾರ್ಟ್ ಸ್ಟೋರ್‍ಗಳು ದೇಶದ 115 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...