ಶ್ರೀನಿವಾಸ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ

ಮಂಗಳೂರು (www.vknews.com) : ಶ್ರೀನಿವಾಸ್ ವಿಶ್ವವಿದ್ಯಾಲಯದ ಪಾಂಡೇಶ್ವರ ಸಿಟಿ ಕ್ಯಾಂಪಸ್‍ನಲ್ಲಿ 2019-20ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ವಿಭಾಗದ ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ. ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮವನ್ನು ಕಾಲೇಜಿನ ಗ್ಯಾಲರಿ ಹಾಲ್‍ನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಸಿ.ಎ. ಎ. ರಾಘವೇಂದ್ರ ರಾವ್‍ರವರು ಉದ್ಘಾಟಿಸಿ, ಕ್ಯಾಂಪಸ್‍ನಲ್ಲಿ ದೊರಕುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್‍ರವರು ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜಿನ ವಿಶೇಷತೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕುಲಪತಿ ಡಾ. ಪಿ. ಎಸ್. ಐತಾಳ್ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಮಾತನಾಡಿದರು.

ಗೌರವ ಅತಿಥಿಯಾಗಿ ಸೋಲರೈಸರ್ ಬಿಸ್‍ನ ಸಿ.ಇ.ಓ. ಅಜಿತ್ ಕುಮಾರ್ ಆಗಮಿಸಿದ್ದರು. ಈ ವೇಳೆ ಸಿ.ಸಿ.ಐ.ಎಸ್. ನ ಡೀನ್ ಫ್ರೊ. ಶ್ರೀಧರ್ ಆಚಾರ್ಯ, ಸಿ.ಎಸ್.ಎಸ್.ಹೆಚ್.ನ ಡೀನ್ ಡಾ. ಲವೀನ, ಸಿ.ಎಂ.ಸಿ. ಯ ಡೀನ್ ಡಾ ಶೈಲಶ್ರೀ ವಿ.ಟಿ. ಕಾಲೇಜಿನ ಅದ್ಯಾಪಕರು ಉಪಸ್ಥಿತರಿದ್ದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...