ಹೊಸ ನೀತಿಗೆ ಮುನ್ನುಡಿ ಬರೆದ ಯುವರಾಜ : ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಸ್ವದೇಶಿಕರಣದ ಸುಳಿಯಲ್ಲಿ ವಿದೇಶಿ ಕೆಲಸಗಾರರು ?

(ವಿಶ್ವ ಕನ್ನಡಿಗ ನ್ಯೂಸ್,www.vknews.in ): ಸೌದಿ ಅರೇಬಿಯಾದಲ್ಲಿ ಈಗಾಗಲೇ ಸೌದಿಕರಣ ಕೈಗೊಂಡ ಸರಕಾರ ತನ್ನ ದೇಶದ ಪ್ರಜೆಗಳಿಗೆ ಕೆಲಸ ನೀಡಲು ತೀರ್ಮಾನಿಸಿದ್ದು ಈಗಾಗಲೇ ಸಾಕಷ್ಟು ಕ್ಷೇತ್ರಗಳಲ್ಲಿ ವಿದೇಶಿ ಕೆಲಸಗಾರರು ಕೆಲಸ ಕಳೆದುಕೊಂಡು ತನ್ನ ದೇಶಕ್ಕೆ ಮರಳಿದ್ದಾರೆ . ಈಗ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಕೂಡ ಇದೆ ರೀತಿಯ ಕಾನೂನು ಕೈಗೊಳ್ಳಲು ಅಲ್ಲಿನ ಯುವರಾಜ ಶೇಕ್ ಹಮ್ದಾನ್ ಅಲ್ ಮಕ್ತುಮ್ ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ .

ಯುವರಾಜ ಶೇಕ್ ಹಮ್ದಾನ್ ಅಲ್ ಮಕ್ತುಮ್ ಈಗಾಗಲೇ ಈ ಕಾರ್ಯ ಸೂಚಿಯ ಬಗ್ಗೆ ವಿಶೇಷ ಚಿಂತನೆಯನ್ನು ನಡೆಸಿದ್ದು ಅತಿ ಶೀಘ್ರದಲ್ಲಿ ಸ್ವದೇಶಿಕರಣಕ್ಕೆ ಒತ್ತು ನೀಡುವ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ .ಇದರಿಂದ ಸಾಕಷ್ಟು ವಿದೇಶಿ ಕೆಲಸಗಾರರು ಕೆಲಸ ಕಳೆದುಕೊಳ್ಳುವ ಭೀತಿಯಿದೆ .

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...