ಕೋಲಾರ: ಕೃಷಿ ಉತ್ಪನ್ನ ಮಾರುಕಟ್ಟೆಯ ಕಚೇರಿಯ ಮುಂದೆ ಟೋಮೋಟೋ ಸುರಿದು ಹೋರಾಟ

ಕೋಲಾರ(ವಿಶ್ವಕನ್ನಡಿಗ ನ್ಯೂಸ್): ಮಾನವೀಯತೆ ದೃಷ್ಠಿಯಿಂದ ಹೊರ ರಾಜ್ಯದ ಟೋಮೋಟವನ್ನು ತರಿಸುವುದನ್ನು ನಿಲ್ಲಿಸಬೇಕು ಹಾಗೂ ಮಾರುಕಟ್ಟೆಯ ಜಾಗದ ಸಮಸ್ಯೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಒತ್ತಾಯಿಸಿ ರೈತ ಸಂಘದಿಂದ ಕೃಷಿ ಉತ್ಪನ್ನ ಮಾರುಕಟ್ಟೆಯ ಕಚೇರಿಯ ಮುಂದೆ ಟೋಮೋಟೋ ಸುರಿದು ಹೋರಾಟ ಮಾಡಿ ಅದ್ಯಕ್ಷರು ಮತ್ತು ಸಂಸಧರಿಗೆ ಮನವಿ ನೀಡಿ ಅಗ್ರಹಿಸಲಾಯಿತು.

ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ತೀವ್ರವಾದ ಬರಗಾಲದ ಜೊತೆಗೆ ಕೊಳವೆಬಾವಿಗಳು ಕೈಕೊಟ್ಟ ಹಿನ್ನಲೆಯಲ್ಲಿ ಸರ್ಕಾರದ ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿ ಇತ್ತೀಚೆಗೆ ಸುರಿದ ಅಲ್ಪ ಸ್ವಲ್ಪ ಮಳೆಯಿಂದ ಬೆಳೆದ ಬೆಳೆ ಮಾರುಕಟ್ಟೆಗೆ ತಂದರೆ ಬೆಲೆ ಕುಸಿತದಿಂದ ರೈತ ಮತ್ತೆ ಸಾಲದ ಸುಳಿಗೆ ಸಿಲುಕುತ್ತಿದ್ದಾನೆ, ಜೊತೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ರೈತರ ಜೀವನಾಡಿ ಕಷ್ಟಪಟ್ಟು ಬೆಳೆದ ಬೆಳೆ ಮಾರಾಟ ಮಾಡಲು ಮಾರುಕಟ್ಟೆಯೆಂಬುದು ರೈತರ ಪಾಲಿನ ದೇವಾಲಯವಿದ್ದಂತೆ ಅಲ್ಲಿನ ಅಧಿಕಾರಿಗಳು ಹಾಗೂ ಮಂಡಿ ಮಾಲೀಕರು ದೇವರುಗಳಿಂದಂತೆ ಆದರೆ ಅತಿ ಹೆಚ್ಚು ತರಕಾರಿ ಬೆಳೆದ ದೇಶ ವಿದೇಶಗಳಿಗೆ ಕಳುಹಿಸುವ ದೇಶದಲ್ಲೇ ನಂ.01 ಮಾರುಕಟ್ಟೆಯೆಂದು ಪ್ರಸಿದ್ದಿ ಪಡೆದಿರುವ ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆಯ ಜೊತೆಗೆ ಮೂಲಭೂತ ಸೌಕರ್ಯಗಳು ಮರೀಚೀಕೆಯಾಗಿವೆ. ಸರ್ಕಾರ ಮಾತ್ರ ಖಾಲಿಯಿರುವ ಹುದ್ದೆಗಳನ್ನು ನೇಮಕ ಮಾಡಲು ಮೀನಾಮೇಷ ಎಣಿಸುತ್ತಿದ್ದು, ರೈತರ ತೊಂದರೆಗಳಿಗೆ ಸ್ಪಂದಿಸುವಲ್ಲಿ ಇಲಾಖೆ ಸಂಪೂರ್ಣವಾಗಿ ವಿಪಲವಾಗುತ್ತಿದೆ. ಇರುವ ಅಧಿಕಾರಿಗಳಿಗೆ ಬೇರೆ ಬೇರೆ ಕೆಲಸಗಳ ಒತ್ತಡದ ಜೊತೆಗೆ ಮಾನಸಿಕ ಕೆಲಸ ನಿರ್ವಹಿಸದೇ ಒದ್ದಾಡುವಂತಹ ಪರಿಸ್ಥಿತಿ ಎದುರಾಗಿದೆ. ಮತ್ತೊಂದೆಡೆ ಇರುವ ಸಮಸ್ಯೆಗಳ ಜೊತೆಗೆ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳ ಮರೀಚೀಕೆಯಾಗುತ್ತಿವೆಂದು ಅಸಮಾದಾನ ವ್ಯಕ್ತಪಡಿಸಿದರು.

ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ತೀವ್ರವಾದ ಬರಗಾಲ ಹಾಗೂ ಬೆಳೆದ ಬೆಳೆಗೆ ಸೂಕ್ತವಾದ ಬೆಲೆ ಇಲ್ಲದೆ ಸಂಕಷ್ಟದಲ್ಲಿರುವ ರೈತರು ಬರಗಾಲದಲ್ಲೂ ಕೊಳವೆಬಾವಿಗಳು ಬತ್ತಿಹೋಗಿ ನೀರಿಲ್ಲದಿದ್ದರೂ ಅಲ್ಪಸ್ವಲ್ಪ ಇರುವ ನೀರಿನಲ್ಲಿ ಸಾಲಾ ಮಾಡಿ ಬೆಳೆದ ಬೆಳೆಗಳು ಕೈಗೆ ಸಿಗದೆ ಸಂಕಷ್ಟಕ್ಕೀಡಾಗಿ ಸಾಲದ ಸುಳಿಗೆ ಸಿಲುಕಿ ತನ್ನಸ್ವಾಭೀಮಾನದ ಜೀವನಕ್ಕೆ ಅಂತ್ಯ ಹೇಳಿ ಕೃಷಿಯಿಂದ ವಿಮುಕ್ತಿಹೊಂದುತ್ತಿರುವ ಅನ್ನದಾತನ ನೆರವಿಗೆ ಬರಬೇಕಾದ ಸರ್ಕಾರಗಳು ಅಧಿಕಾರಕ್ಕಾಗಿ ಕಚ್ಚಾಡುತ್ತಿವೆ ಹಿಂದಿನ ವರ್ಷ ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ಸಿಗದೆ ಸಾಲದ ಸುಳಿಗೆ ಸಿಲುಕಿದ್ದಾನೆ ಆದರೂ ಹಠ ಬಿಡದೆ ಬೆಳೆದಿರುವ ಟೊಮೆಟೊ, ಕ್ಯಾಪ್ಷಿಕಾಂ ಮತ್ತಿತರ ಬೆಳೆಗಳಿಗೆ ಅಕಾಲಿಕ ಸಮಯದಲ್ಲಿ ಉತ್ತಮವಾದ ಬೆಲೆ ಬಂದು ಶೇ.100 ರಲ್ಲಿ 10 ಜನ ರೈತರು ಆರ್ಥಿಕವಾಗಿ ಸುದಾರಿಸಿಕೊಳ್ಳುವ ಸಮಯದಲ್ಲಿ ಕೆಲವು ಮಂಡಿ ಮಾಲೀಕರು ಹೊರರಾಜ್ಯದ ನಾಸಿಕ್‍ನಿಂದ ಟೊಮೆಟೊವನ್ನು ತರೆಹಿಸಿಕೊಂಡು ಜಿಲ್ಲೆಯ ರೈತರ ಮರಣಶಾಸನ ಬರೆಯುತ್ತಿದ್ದಾರೆ. ಅವರು ಹೇಳುವ ಪ್ರಕಾರ ನಮ್ಮ ರಾಜ್ಯದ ಟೊಮೆಟೊ ಹೊರರಾಜ್ಯಕ್ಕೆ ರಪ್ತಾಗುತ್ತದೆ. ನಾವು ತರೆಹಿಸಿಕೊಂಡರೆ ತಪ್ಪಲ್ಲ ಎಂಬುದು ಅವರ ವಾದ, ಆದರೆ ನಾವು ಅವರು ತರೆಹಿಸಿಕೊಳ್ಳುವುದಿಕ್ಕೆ ಅಭ್ಯಂತರವಿಲ್ಲ ದಶಕಗಳಿಂದ ಬರಗಾಲದ ಜೊತೆಗೆ ಹಿಂದಿನ ವರ್ಷ ಬೆಳೆದ ಯಾವುದೇ ಬೆಳೆಗೆ ಸೂಕ್ತವಾದ ಬೆಲೆ ಸಿಗದ ಕಾರಣ ಸಂಕಷ್ಟದಲ್ಲಿರುವ ರೈತರ ಹಿತದೃಷ್ಟಿಯಿಂದ ಮಾನವೀಯತೆಯ ದೃಷ್ಟಿಯಿಂದ ಕೇಳುತ್ತಿದ್ದೇವೆ ಹೊರೆತು ಯಾವುದೇ ಮಂಡಿ ಮಾಲೀಕರ ಮೇಲಿನ ದ್ವೇಶಕ್ಕಾಗಿ ಅಲ್ಲ ಆದ್ದರಿಂದ ಮಾನ್ಯ ಅದ್ಯಕ್ಷರು ಜಿಲ್ಲೆಯ ಹಾಗೂ ರಾಜ್ಯದ ರೈತರ ಹಿತದೃಷ್ಟಿಯಿಂದ ಹೊರರಾಜ್ಯದ ಟೊಮೆಟೊವನ್ನು ತಾತ್ಕಾಲಿಕವಾಗಿ ಆಮದು ಮಾಡಿಕೊಳ್ಳದ ರೀತಿ ಮನವರಿಕೆ ಮಾಡಬೇಕೆಂದು ಅಗ್ರಹಿಸಿದರು.

ಹೋರಾಟದ ಸ್ಥಳಕ್ಕೆ ಬಂದು ಮಾತನಾಡಿದ ಸಂಸದರಾದ ಮುನಿಶ್ಯಾಮಿರವರು ಮತ್ತು ಅದ್ಯಕ್ಷರು ಎಲ್ಲಾ ಮಂಡಿ ಮಾಲೀಕರ ಸಭೆ ಕರೆದು ಸ್ಥಳಿಯ ರೈತರಿಗೆ ಮೊದಲ ಆದ್ಯತೆ ನೀಡಿ ಹೊರ ರಾಜ್ಯದ ಟಮೋಟೋವನ್ನು ತರಿಸಿಕೊಳ್ಳದ ಮನವಿ ಮಾಡಲಾಗುವುದು ಹಾಗೂ ಜಾಗದ ಸಮಸ್ಯೆಯನ್ನು ಒಂದು ತಿಂಗಳೊಳಗೆ ಬಗೆಹರಿಸುವ ಭರವಸೆಯನ್ನು ನೀಡಿದರು.ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ತಾ.ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಶ್ರೀನಿವಾಸಪುರ ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಪುರುಷೋತ್ತಮ್, ನಲ್ಲಂಡಹಳ್ಳಿ ಗುರು, ಮೂರ್ತಿ, ಸಹದೇವಪ್ಪ, ಚಂದ್ರಪ್ಪ, ಮುಂತಾದವರಿದ್ದರು.

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...