ನಿಮಗೆ ಏರ್ವಾಡಿ, ಕೀಳಕ್ಕರೈ, ಮುತ್ತುಪೇಟೆ, ನಾಗೂರು ಝಿಯಾರತ್ ಹೋಗಬೇಕೇ..? ನಿಮ್ಮಲ್ಲಿ 900/ ರೂ. ಇದ್ದರೆ ಸಾಕು…!

… ಉಪಯುಕ್ತ ಮಾಹಿತಿ ….

(ವಿಶ್ವ ಕನ್ನಡಿಗ ನ್ಯೂಸ್) : ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಎಲ್ಲಾ ದಿನ ಬೆಳಿಗ್ಗೆ 6.45ಕ್ಕೆ ಚೆನ್ನೈ-ಎಗ್ಮೂರ್ ಎಕ್ಸ್ಪ್ರೆಸ್ ರೈಲು ಹತ್ತಿ ರಾತ್ರಿ 9.45ಕ್ಕೆ ತಿರುಚಿರಾಪಳ್ಳಿ (ತಿರ್ಚಿ) ತಲುಪುತ್ತದೆ. ಅಲ್ಲಿಂದ (Platform No : 05) 11.20ಕ್ಕೆ ರಾಮೇಶ್ವರಂ ಹೋಗುವ ಸೇತು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಹತ್ತಿ ರಾಮನಾಥಪುರಂ ಎಂಬಲ್ಲಿ ಇಳಿಯಬೇಕು. (ಆಗ ಸಮಯ 2.45)…

ರೈಲ್ವೇ ನಿಲ್ದಾಣದಿಂದ ಹೊರಬರುವಾಗ ಅಲ್ಲೇ ಏರ್ವಾಡಿ ದರ್ಗಾ ಹೋಗುವ ಬಸ್ ರೆಡಿ. ಬಸ್ ಹತ್ತಿ 30 ನಿಮಿಷದೊಳಗೆ ಏರ್ವಾಡಿ ದರ್ಗಾದ ಮುಂದೆ ಹೋಗಿ ನಿಲ್ಲುತ್ತದೆ.

ಅಲ್ಲಿ ಝಿಯಾರತ್ ಮಾಡಿ ಮುಂದೆ ನಿಮಗೆ ಕೀಳಕ್ಕರೈ ಹೋಗಬಹುದು.

ಕೀಳಕ್ಕರೈಯಲ್ಲಿರುವ ಶೇಖ್ ಸ್ವದಖತುಲ್ಲಾಹಿಲ್ ಖಾಹಿರಿ (ರ) ನಮ್ಮ ಖುತುಬಿಯ್ಯತನ್ನು ರಚಿಸಿದವರು.

ಏರ್ವಾಡಿ ದರ್ಗಾ ದಿಂದ ಕೀಳಕ್ಕರೈ ಹೋಗುವ ಬಸ್ ಹತ್ತಿ ಕೀಳಕ್ಕರೈ ಬಸ್ ನಿಲ್ದಾಣ ದಲ್ಲಿ ಇಳಿಯಬೇಕು. ಅಲ್ಲಿಂದ 600 ಮೀಟರ್ ನಡೆದು ಸಾಗಿದಾಗ ಬಲ ಭಾಗದಲ್ಲಿ ಹಸಿರು ದರ್ಗಾ ಸಿಗುತ್ತದೆ. (ನಡೆದು ಹೋಗುವಾಗ ಅಲ್ಲಲ್ಲಿ ದಾರಿ ಕೇಳ್ಬೇಕು, ತಮಿಳರು ಸರಿಯಾಗಿಯೇ ಹೇಳಿಕೊಡುತ್ತಾರೆ.)

ಕೀಳಕ್ಕರೈ ದರ್ಗಾ ಝಿಯಾರತ್ ನಂತರ ಬಸ್ ನಿಲ್ದಾಣಕ್ಕೆ ಬಂದು ನೇರ ಬಸ್ ಮೂಲಕ ಮುತ್ತುಪೇಟೆ ಹೋಗಬಹುದು.

ಮುತ್ತುಪೇಟೆ ಹೋಗಬೇಕಾದರೆ ಕೀಳಕ್ಕರೈ ನಿಂದ ನೇರ ಮೊದಲ ದಿನ ಬಂದಿಳಿದ ರಾಮನಾಥಪುರಂ (ತಮಿಳರ ಮಾತಿನಲ್ಲಿ ರಾಮನಾಡ್) ಕಡೆಗೇ ಹೋಗಬೇಕು. ರಾಮನಾಡ್ ನಿಂದ ಪಟ್ಟುಕ್ಕೋಟೆ ಹೋಗುವ (ಸುಮಾರು 4 ಗಂಟೆಗಳ ಯಾತ್ರೆ) ಬಸ್ ಹತ್ತಿ ಪಟ್ಟುಕ್ಕೋಟೆಯಲ್ಲಿ ಇಳಿಯಬೇಕು. ಅಲ್ಲಿಂದ ಮುತ್ತುಪ್ಪೇಟೆ ದರ್ಗಾ ಹೋಗುವ ಬಸ್ ಸಿಗುತ್ತದೆ. ಮುತ್ತುಪೇಟೆಗೆ ಪಟ್ಟುಕೋಟೆಯಿಂದ ಅರ್ಧ ಗಂಟೆಯ ಯಾತ್ರೆ. ಮುತ್ತುಪೇಟೆ ಸಿಟಿಯಲ್ಲಿ ಬಸ್ ಇಳಿದು ದರ್ಗಾಕ್ಕೆ 650 ಮೀಟರ್ ನಡೆಯಬಹುದು. ಆಟೋದಲ್ಲಾದರೆ 50 ರೂ. ಕೊಡಬೇಕು.

ಮುತ್ತುಪೇಟೆಗೆ ತಲುಪುವಾಗ ಸಂಜೆ ಹೊತ್ತಾಗಿರುತ್ತದೆ. ಅಲ್ಲಿ ಲಬ್ಬಾಗಳ ಮಾತಿಗೆ ಮರುಳಾದರೆ ನಿಮ್ಮಿಂದ ಹೇಗೆ ಬೇಕೋ ಹಾಗೆ ಹಣ ಪೀಕಿಸುತ್ತಾರೆ. ದರ್ಗಾದ ಸಮೀಪ ಹತ್ತಿರ ಬರುವ ಯಾರ ಬಳಿಯೂ ಮಾತಿನ ಮೂಲಕ ಸಹಾಯ ಕೇಳಲೇಬೇಡಿ.

ದರ್ಗಾದ ಬಾಗಿಲಿನ ಸಮೀಪ ಒಬ್ಬರಿಗೆ 10 ರೂ. ಪಾಸ್ ಕೊಟ್ಟರೆ ದರ್ಗಾದ ಒಳಗೆ ಬಿಡುತ್ತಾರೆ. ಒಳಗೆ ಹೋಗದೆ ಹೊರಗೆನಿಂತೂ ಝಿಯಾರತ್ ಮಾಡಬಹುದು. ಮತ್ತುಪೇಟೆಯಲ್ಲಿ ಇನ್ನೆರಡು ದರ್ಗಾಗಳು ಇದೆ. ಅದರಲ್ಲಿ ಪ್ರಸಿದ್ಧಿ ಪಡೆದಿರುವ ಬೀವಿ ಫಾತಿಮಾ (ರ) ಶೇಖ್ ದಾವೂದುಲ್ ಹಕೀಮ್ (ಖ. ಸಿ)ರವರ ನರ್ಸ್ ಆಗಿದ್ದರಿಂದ ಈ ಮಹದಿ ತಾಯಿಯ ಸಮೀಪಕ್ಕೆ ಪುರುಷರಿಗೆ ಪ್ರವೇಶವಿಲ್ಲ. ಮಹಿಳೆಯರಿಗೆ ಮಾತ್ರ ಪ್ರವೇಶ. ಇಲ್ಲಿ ಮಹಿಳೆಯರ ಏನೇ ರೋಗವಿದ್ದರೂ ಶಮನವಾಗುತ್ತದೆ. ಪಿಶಾಚಿಯು ಬಾಧಿಸಿದ
ಮಹಿಳೆಯರು ಇಲ್ಲಿ ಹೆಚ್ಚಿರುತ್ತಾರೆ.

ಮುತ್ತುಪೇಟೆಯಿಂದ ನಾಗೂರಿಗೆ ಹೋಗಲು ಮುತ್ತುಪೇಟೆ ಬಸ್ ನಿಲ್ದಾಣಕ್ಕೆ ಬಂದರೆ ಅಲ್ಲಿಂದ ನಾಗಪಟ್ಟಣಂ ಹೋಗುವ ಬಸ್ ಹತ್ತಬೇಕು. ನಾಗಪಟ್ಟಣದಲ್ಲಿ ಇಳಿದು ಅಲ್ಲಿಂದ ನಾಗೂರು ದರ್ಗಾ ಹೋಗುವ ಬಸ್ ಸಿಗುತ್ತದೆ. ದರ್ಗಾದ ಸಮೀಪವೇ ಬಸ್ ನಿಲ್ಲಸುತ್ತಾರೆ. ನಡೆದು ಸಾಗುವಷ್ಟು ದೂರ.

ಊರಿನ ಕಡೆಗೆ ಬರುವುದಕ್ಕಿಂತ ಮೊದಲು ಅಲ್ಲೇ ಒಂದುವರೆ ಕಿ. ಮೀಟರ್ ಆಟೋ ಹಿಡಿದರೆ ಬೀಚ್ ಗೆ ಹೋಗಬಹುದು. ಅಲ್ಲಿ ಶೈಖ್ ಶಾಹುಲ್ ಹಮೀದ್ ನಾಗೂರ್ ವಲಿಯ್ಯ್ ರವರ ಆರಾಧನೆ ಮಾಡುತ್ತಿದ್ದ ಪುಣ್ಯ ಸ್ಥಳವನ್ನು ಕಾಣಬಹುದು. ಇದು ಪ್ರಾರ್ಥನೆಗೆ ಶೀಘ್ರ ಉತ್ತರ ಲಭಿಸುವ ಸ್ಥಳ. ನಂತರ ಅಲ್ಲಿಂದ ಆಟೋ ಹತ್ತಿ ದರ್ಗಾದ ಒಳಗೆ ಬಂದರೆ ಹಿಂಬದಿಯಲ್ಲಿ ಬೃಹದಾಕಾರವಾದ ಕೆರೆಯಿದೆ. ಅದರ ಹಿಂಬದಿಯಿರುವ ಕಾಲು ದಾರಿಯಲ್ಲಿ 600 ಮೀಟರ್ ನಡೆದರೆ ನೇರ ರೈಲ್ವೇ ನಿಲ್ದಾಣಕ್ಕೆ ತಲುಪಲು ಸಾಧ್ಯ. (ದಾರಿ ತಿಳಿಯದಿದ್ದರೆ ಅಲ್ಲಿದ್ದವರಲ್ಲಿ ಕೇಳಬೇಕು)

ನಾಗೂರಿನಿಂದ ಸಂಜೆ 4.30ಕ್ಕೆ ಕಾರೈಕಲ್ ನಿಂದ ಬರುವ ಎರ್ಣಾಕುಳಂ ಎಕ್ಸ್ಪ್ರೆಸ್ ಹತ್ತಿ ಪಾಲಕ್ಕಾಡ್ ಜಂಕ್ಷನ್ ಗೆ ತಲುಪುವಾಗ ಬೆಳಿಗ್ಗೆ 3.00 ಗಂಟೆಯಾಗಿರುತ್ತದೆ. ರೈಲ್ವೆ ನಿಲ್ದಾಣದಲ್ಲಿ ಇಳಿದು ಮಂಗಳೂರಿಗೆ ಬರುವ ಮಂಗಳೂರು ಮೈಲ್ ಸೂಪರ್ ಫಾಸ್ಟ್ ರೈಲು ಹತ್ತಬೇಕು. 4.15ಕ್ಕೆ ಪಾಲಕ್ಕಾಡ್ ನಿಂದ ರೈಲು ಹತ್ತಿದರೆ ಮಧ್ಯಾಹ್ನ 12.30ಕ್ಕೆ ಮಂಗಳೂರು ತಲುಪಬಹುದು.

ನನಗಾದ ಯಾತ್ರೆಯ ಖರ್ಚಿನ ವಿವರ :

▪Manglore Central – Tiruchirapalli : 350/-
(Sleeper Seat)
▪Tiruchirapalli – Ramanathpuram : 190/- (Sleeper seat)
▪Ramanathpurm – Erwadi : 30/-
▪Erwadi – Keelakkarai : 10/-
▪ Keelakarai – Ramanathpuram : 17/-
▪Ramnathprm – Pattukotai : 115/-
▪Pattukotai – Muthupaete : 15/-
Mutbuupete – Nagapattanam : 56/-
Nagapatnam – Nagore : 7/-
Nagore Railway Station – Palakkad : 260/-
Palakkad – Mangalore : 255/-
TOTAL : 1071/-

ಇದು ಗಮನದಲ್ಲಿರಲಿ.

🔹 ಮೇಲೆ ನೀಡಲಾದ ರೈಲು ಟಿಕೇಟ್ ಸ್ಲೀಪರ್ ಕೋಚ್ ದರ.
🔹 ಜನರಲ್ ಕಂಪಾರ್ಟ್ಮೆಂಟ್ ಟಿಕೆಟ್ ಪಡೆಯುವುದಾದರೆ ಖರ್ಚು 900/- ಒಳಗಾಗುತ್ತದೆ.
🔹 ಮೇಲಿನ ಖರ್ಚಿನಲ್ಲಿ ಆಹಾರ ತಿಂಡಿ ತಿನಿಸುಗಳನ್ನು ಒಳಪಡಿಸಲಾಗಿಲ್ಲ.
🔹 ಮೇಲೆ ಹೇಳಿದ ರೈಲುಗಳು ಎಲ್ಲಾ ದಿನವೂ ಇರುತ್ತದೆ.
🔹 ಸ್ಲೀಪರ್ ಟಿಕೆಟ್ ಪಡೆಯುವುದು ಉತ್ತಮ ಮತ್ತು ಸುಖಕರ.
🔹 1 ವಾರದ ಮೊದಲೇ ಟಿಕೇಟ್ ತೆಗೆದು ಇಟ್ಟುಕೊಂಡರೆ ಉತ್ತಮ. ಕೊನೆಯ ಸಮಯದಲ್ಲಿ ಟಿಕೇಟ್ ಸಿಗುವುದು ಅಸಾಧ್ಯ.

ಮಾಹಿತಿಯ ಸಹಾಯಕ್ಕೆ ಸಂಪರ್ಕಿಸಬಹುದು : +91 897 097 5695

– ಹಂಝತ್ತುಲ್ ಖರ್ರಾರ್ ಅಲ್ ಮುಈನಿ, ಸಾಲೆತ್ತೂರು

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...