(ವಿಶ್ವ ಕನ್ನಡಿಗ ನ್ಯೂಸ್) : ಸಮಸ್ತ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧೀನದ ದ.ಕ.ಜಿಲ್ಲೆಯ ಸಜೀಪ ರೇಂಜ್ ನ ಮದ್ರಸ ಅಧ್ಯಾಪಕರ ರೇಂಜ್ ಸಭೆಯಲ್ಲಿ ಮೊನ್ನೆ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ನಡೆಯುವಂತೆ ಮಾಡೆಲ್ ಕ್ಲಾಸ್ ನಡೆದಿದೆ. ಆದರೆ ಮೊನ್ನೆಯ ಅಲ್ಲಿನ ತರಗತಿಯು ಅಲ್ಲಿ ಸೇರಿದ್ದ ಸರ್ವರ ಪ್ರಶಂಸೆಗೆ ಪಾತ್ರವಾಗಿರುವುದರ ಜೊತೆಗೆ ವಿವಿಧ ಮಾಧ್ಯಮಗಳಲ್ಲೂ ಸದ್ದು ಮಾಡಿದ್ದು ಗಮನಾರ್ಹ.
ಅಷ್ಟಕ್ಕೂ ಅದರ ಹಕೀಕತ್ತೇನೆಂದರೆ ದ.ಕ.ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರೇಂಜ್ ನ ಮಾಡೆಲ್ ಕ್ಲಾಸ್ ಗೆ ತರಗತಿ ನಡೆಸಿಕೊಟ್ಡ ಅಧ್ಯಾಪಕರೊಬ್ಬರು ಆಧುನಿಕ ಸ್ಪರ್ಶವನ್ನು ನೀಡಿದ್ದೇ ಆಗಿದೆ.
ಮಾಹಿತಿ ಮತ್ತು ತಂತ್ರಜ್ಞಾನ ದ ವ್ಯಾಪ್ತಿಯು ಸರ್ವ ಕ್ಷೇತ್ರಗಳನ್ನೂ ವ್ಯಾಪಿಸುತ್ತಿರುವ ಇಂದಿನ ಕಾಲದಲ್ಲಿ ಇಸ್ಲಾಂ ಧರ್ಮದ ಅತ್ಯಂತ ಪರಿಣಾಮಕಾರಿ ದಅವಾ ಕ್ಷೇತ್ರವಾಗಿರುವ ಮದ್ರಸಾ ಶಿಕ್ಷಣ ಕ್ಷೇತ್ರಕ್ಕೂ ಈ ಆಧುನಿಕತೆಯ ಟಚ್ ನೀಡುವುದು ಕೂಡ ಅನಿವಾರ್ಯ.
ಕಳೆದ ಆರು ದಶಕಗಳಿಂದ ಧಾರ್ಮಿಕ ಶಿಕ್ಷಣವನ್ನು ನೀಡುವಲ್ಲಿ ತಳಮಟ್ಟದಲ್ಲಿ ಕ್ರಾಂತಿಯನ್ನೇ ಸೃಷ್ಠಿಸಿದ ಸಮಸ್ತ ದ ಮದ್ರಸಾ ವ್ಯವಸ್ಥೆ ಹಾಗೂ ಅದರ ಪಾರಂಪರ್ಯಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡು ಈ ಹೊಸತನದ ಸ್ಪರ್ಶವನ್ನು ನೀಡಿದರೆ ಅದು ಉತ್ತಮ ಫಲಿತಾಂಶವನ್ನು ತಂದು ಕೊಡುವುದು ಗ್ಯಾರಂಟಿ.
ದೃಶ್ಯ ಹಾಗೂ ಶ್ರಾವ್ಯ ಮಾಧ್ಯಮದ ಉಪಯೋಗದಿಂದ ಸುಲಭವಾಗಿ ಮಕ್ಕಳಿಗೆ ವಿಷಯ ಅರ್ಥೈಸಲು ಸಾಧ್ಯವಾಗುವುದು, ಕ್ರಿಯಾತ್ಮಕ ಕಲಿಕೆ, ಪರಿಮಿತ ಸಮಯದಲ್ಲಿ ಹೆಚ್ಚಿನ ಕಲಿಕೆ ,ಕಲಿಕೆಯ ಪ್ರಗತಿಗೆ ಆಸಕ್ತಿದಾಯಕ ವಾತಾವರಣದ ನಿರ್ಮಾಣ…. ಹೀಗೆ ಹತ್ತು ಹಲವು ಪ್ರಯೋಜನಗಳು ಈ ಸ್ಮಾರ್ಟ್ ಕ್ಲಾಸ್ ಗಳಿಂದ ಸಿಗುವುದು.
ಮದ್ರಸಾ ಕಲಿಕೆಯ ಬಳಿಕ ಶಾಲಾ ಶಿಕ್ಷಣ ದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳನ್ನು ಸ್ಮಾರ್ಟ್ ಕ್ಲಾಸ್ ಅಥವಾ ದೃಶ್ಯ -ಶ್ರಾವ್ಯ ಮಾಧ್ಯಮಗಳ ಮೂಲಕ ಬೋಧನೆಮಾಡಲಾಗುತ್ತಿದೆ. ಇದರಿಂದಾಗಿ ಬಹಳ ಬೇಗನೆ ಮಗುವಿಗೆ ವಿಷಯ ಜ್ಞಾನದ ಅರಿವಾಗುವುದರೊಂದಿಗೆ ಕಲಿಕೆಯಲ್ಲಿ ಪ್ರಗತಿಯೂ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಸಜೀಪ ರೇಂಜ್ ನ ಮಾಡೆಲ್ ಕ್ಲಾಸ್ ನಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಯೋಗ ಮಾಡಿರುವುದು ಒಂದು ಉತ್ತಮ ಬೆಳವಣಿಗೆಯಾಗಿದ್ದು ಜಿಲ್ಲೆಯ ಮದ್ರಸಾ ವ್ಯವಸ್ಥೆಯಲ್ಲಿ ಇದೊಂದು ಹೊಸತನದ ಮೈಲುಗಲ್ಲು ಎನ್ನಬಹುದು. ಆದ್ದರಿಂದಲೇ ಈ ಮಾಡೆಲ್ ಕ್ಲಾಸ್ ನ ಬಗ್ಗೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಫತ್ತಿಷ್ ಉಮರ್ ದಾರಿಮಿ ಮತ್ತು ಆರ್.ಪಿ.ಮುಹಮ್ಮದ್ ಮುಸ್ಲಿಯಾರ್ ಅವರು ಮುಕ್ತಕಂಠದಿಂದ ಪ್ರಶಂಸಿಸಿದ್ದರು.
ಅಷ್ಟಕ್ಕೂ ಅಲ್ಲಿ ತರಗತಿ ನಡೆಸಿದ್ದು ಯಾರೆಂದರೆ ವಿಟ್ಲ ಸಮೀಪದ ಕಡಂಬುವಿನ ಖ್ಯಾತ ಗಾಯಕ ರಫೀಕ್ ಮುಸ್ಲಿಯಾರ್ ಕಡಂಬು (ಆಲಾಡಿ ಸದರ್ ಉಸ್ತಾದ್)
ಪ್ರತಿಭಾವಂತರಾಗಿವ ಅವರು ರೇಂಜ್ ನಲ್ಲಿ ಮಾಡೆಲ್ ಕ್ಲಾಸ್ ಗೆ ಹೈಟೆಕ್ ಟಚ್ ನೀಡಿ ಗಮನ ಸೆಳೆದ ಅವರಿಗೆ ಹೃದಯಸ್ಪರ್ಶಿ ಅಭಿನಂಧನೆಗಳು.
✒ ಅಲ್ ಅಹ್ಸನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ. ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಅಸಭ್ಯ, ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಪ್ರತಿಕ್ರಿಯೆಗಳನ್ನು ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ. ಇಂತಹ ಪ್ರತಿಕ್ರಿಯೆಗಳ ಬಗ್ಗೆ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ಕೇಳಿದರೆ ಪ್ರತಿಕ್ರಿಯೆ ಬರೆದವರ ಇ-ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ.
ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ.
ಇಲ್ಲಿ ಪ್ರಕಟವಾದ ಸುದ್ದಿ ಮತ್ತು ಕಾಮೆಂಟುಗಳ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಂಪಾದಕರನ್ನು ಸಂಪರ್ಕಿಸಿರಿ
ಅಬ್ದುಲ್ ಹಮೀದ್ .ಸಿ .ಹೆಚ್. ಪ್ರಧಾನ ಸಂಪಾದಕರು [email protected]vknews.in
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.