WWW.VKNEWS.IN ಹಾವೇರಿ ತಾಲೂಕು, ಹಾವೇರಿ ಜಿಲ್ಲೆಯ ಜನ ಮನ ಫೌಂಡೇಷನ್ (ರಿ) ಸಂಸ್ಥೆಯ ಸಂಸ್ಥಾಪಕಿ ಹಾಗು ಕರ್ನಾಟಕ ಆಚೀವರ್ಸ್ ಬುಕ್ ಆಫ್ ರೆಕಾರ್ಡ್ ನ ಮುಖ್ಯಸ್ಥೆಯಾದ ಡಾ.ಅಂಬಿಕಾ ಹಂಚಾಟೆ ಯವರ ಕಾರ್ಯ ಸಾಧನೆಗೆ ಮ್ಯಾನೇಜ್ಮೆಂಟ್ /ಅಡ್ಮಿನಿಸ್ಟ್ರೇಷನ್ ವಿಭಾಗದಲ್ಲಿ ಇನೋವೆಟಿವ್ ವಿಶೇಷತೆಯಲ್ಲಿ ಚೆನ್ನೈ ಮೂಲದ ಜೀವ ಥಿಯೋಲಾಜಿಕಲ್ ಓಪನ್ ಯುನಿವರ್ಸಿಟಿಯು ಈ ವರ್ಷದ 10 ನೆಯ ಘಟಿಕೋತ್ಸವದಲ್ಲಿ ದೇಶದ ಒಟ್ಟು 8 ಮೇರು ಸಾಧಕರಿಗೆ ಅವರ ಅಪ್ರಿತಮ ಸಾಧನೆಗೆ ಗೌರವ ಡಾಕ್ಟ್ರೇಟ್ ಪದವಿ ಪ್ರಧಾನ ಮಾಡಲಿದ್ದು ಈ ಸಾಲಿನಲ್ಲಿ ನಮ್ಮ ಹಾವೇರಿ ಜಿಲ್ಲೆಯ ಡಾ.ಅಂಬಿಕಾ ಹಂಚಾಟೆ ಯವರು ಒಬ್ಬರು.
ದಿನಾಂಕ 27 ರ ಸೆಪ್ಟೆಂಬರ್ 2019 ರ ಮಧ್ಯಾಹ್ನ 2 ಘಂಟೆಗೆ ಘಟಿಕೋತ್ಸವ ಚೆನ್ನೈ ನ ಆರಂಭಕಮ್ ನಲ್ಲಿ ನಡೆಯಲಿದೆ ಎಂಬ ಮಾಹಿತಿಯನ್ನು ಯುನಿವರ್ಸಿಟಿ ಕುಲಪತಿಗಳಾದ ಡಾ.ಮುತ್ತುರಾಜ್ ,ವೈಸ್ ಪ್ರೆಸಿಡೆಂಟ್ ಶಾಂತಿ ಜೈರಾಣಿ, ಜಾಯಿಂಟ್ ಸೇಕ್ರೆಟ್ರಿ ರೀಟ ಜಾಯ್ ಮಾಹಿತಿ ನೀಡಿರುತ್ತಾರೆ.