ತಾನು ಬೆಳೆದು ಜೊತೆಗೆ ಮತ್ತೊಬ್ಬರನ್ನು ಬೆಳೆಸುವ ಗಾಯಕ ಹಿಮೇಶ್ ರೇಶ್ಮಿಯಾ

(ವಿಶ್ವ ಕನ್ನಡಿಗ ನ್ಯೂಸ್,www.vknews.in ): ಬಾಲಿವುಡ್ ಅಥವಾ ಯಾವುದೇ ರಂಗದಲ್ಲಿ ಮತ್ತೊಬ್ಬರನ್ನು ತುಳಿದು ಮುಂದೆ ಸಾಗುವವರೇ ಹೆಚ್ಚಾಗಿ ಕಾಣಸಿಗುವಾಗ ತಾನು ಬೆಳೆದು ಮತ್ತೊಬ್ಬರನ್ನು ಬೆಳೆಸುವ ಮನೋಭಾವ ಇರುವ ಕೆಲವೇ ಕೆಲವು ಸಾಧಕರಲ್ಲಿ ಹಿಮೇಶ್ ರೇಶ್ಮಿಯಾ ಕೂಡ ಒಬ್ಬರು .

ಹಿಮೇಶ್ ಇದೀಗ ರೈಲ್ವೆ ನಿಲ್ದಾಣದ ಹಾಡುಗರ್ತಿ ರಾನು ಮೊಂಡಲ್ ಅವರನ್ನು ಬಾಲಿವುಡ್ ಗೆ ಪರಿಚಯಿಸಿ ಅವರ ಜೀವನಕ್ಕೆ ಒಂದು ದಾರಿ ಮಾಡಿ ಕೊಟ್ಟಿದ್ದಾರೆ .ಇದು ಸಧ್ಯ ಕಣ್ಣ ಮುಂದಿರುವ ಉದಾಹರಣೆಯಾದರೆ ಹಿಮಿಶ್ ಸಾಕಷ್ಟು ಪ್ರತಿಭೆಗಳನ್ನು ಬೆಳೆಸಿದ್ದಾರೆ . ಬಡ ಪ್ರತಿಭೆಗಳ ಆರ್ಥಿಕ ಬೆಂಬಲಕ್ಕು ನಿಂತು ಅವರನ್ನು ಪ್ರೋತ್ಸಾಹಿಸಿದ್ದಾರೆ .ನೇರ ನಡೆ ನುಡಿಯ ಹಿಮೇಶ್ ಯಾರಿಗೂ ತಲೆಬಾಗಿ ಬದುಕಿದವರಲ್ಲ , ಸರಿಗಮಪ ದಲ್ಲಿ ತೀರ್ಪುಗಾರರಾಗಿ ಇದ್ದಾಗ ತನ್ನ ಸ್ಪರ್ಧಿಗೆ ಅನ್ಯಾಯವಾಗಿದೆ ಎಂದು ದೊಡ್ಡ ಕಲಾವಿದರಿಗೆ ಸವಾಲು ಹಾಕಿ ತನ್ನ ಸ್ಪರ್ಧಿಯ ಬೆಂಬಲಕ್ಕೆ ನಿಂತವರು ಹಿಮೇಶ್ .’ಆಶಿಕ್ ಬನಾಯ’ ದಂತ ಹಿಟ್ ಹಾಡು ನೀಡಿರುವ ಹಿಮೇಶ್ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ .

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...