ಬೆಂಗಳೂರು ಗ್ರಾಹಕರಿಗಾಗಿ ಶೇಕಡ 15ರ ಡಿಸ್ಕೌಂಟ್
ಬೆಂಗಳೂರು (www.vknews.com) : ಭಾರತದ ಅಗ್ರಗಣ್ಯ ಎಲೆಕ್ಟ್ರಾನಿಕ್ ಉತ್ಪನ್ನಗಳ ಬ್ರಾಂಡ್ಗಳಲ್ಲೊಂದಾಗಿರುವ ಟ್ಯಾಗ್ (ಟಿಎಜಿಜಿ), ಮೊಟ್ಟಮೊದಲ ನೈಜ ವೈರ್ಲೆಸ್ ಈಯರ್ಫೋನ್-ಝೀರೊಜಿ ಬಿಡುಗಡೆ ಮಾಡಿದೆ.
ಕೇವಲ 4999 ರೂಪಾಯಿ ಬೆಲೆ ನಿಗದಿಪಡಿಸಲಾಗಿದ್ದು, ಇದು ಹೈಡೆಫಿನಿಶನ್ ಶಬ್ದಗಳನ್ನು ಅತ್ಯಂತ ನಿಖರತೆಯೊಂದಿಗೆ ಒದಗಿಸುವ 6.11 ಎಂಎಂಗಳ ಎರಡು ಅವಳಿ ಸಾಧನಗಳನ್ನು ಹೊಂದಿದೆ. ಬೆಂಗಳೂರು ಗ್ರಾಹಕರಿಗಾಗಿ ಕಂಪನಿಯು ತನ್ನ ವೆಬ್ಸೈಟ್ನಲ್ಲಿ ಗ್ರಾಗಹಕರಿಗೆ ವಿಶೇಷ ರಿಯಾಯ್ತಿಯನ್ನೂ ಘೋಷಿಸಿದೆ. 2019ರ ಸೆಪ್ಟೆಂಬರ್ 10ರಿಂದ 16ವರೆಗೆ ಟ್ಯಾಗ್ ಝೀರೊ ಮೇಲೆ ಶೇಕಡ 15ರಷ್ಟು ರಿಯಾಯ್ತಿ ಘೋಷಿಸಿದೆ. ಇದರೊಂದಿಗೆ ಬೆಂಗಳೂರು ಮೂಲದ ಗ್ರಾಹಕರು ಟ್ಯಾಗ್ ವೆಬ್ಸೈಟ್ taggdigital.com ಮೂಲಕ ಟ್ಯಾಗ್ ಝೀರೊಜಿ ವಿಶೇಷ ಆಯ್ಕೆ ಮಾಡಿಕೊಂಡು ಮೈಝೀರೊ ಕೂಪನ್ ಕೋಡ್ ಬಳಸಿಕೊಂಡು ವಿಶೇಷ ರಿಯಾಯ್ತಿಯನ್ನು ಪಡೆಯಬಹುದಾಗಿದೆ.
ನೈಜವಾದ ವೈರ್ಲೆಸ್ ಈಯರ್ಫೋನ್, ಅತ್ಯಾಧುನಿಕ ಕ್ವಾಲ್ಕಾಮ್ 2020 ಚಿಪ್ಸೆಟ್ ಮತ್ತು ಬ್ಲೂಟೂಥ್ ವರ್ಷನ್ ವಿ.5.0ದಿಂದ ಕೂಡಿದ್ದು, ಇದು ಸ್ಥಿರವಾದ ಸಂಪರ್ಕವನ್ನು ಒದಗಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಅತ್ಯಂತ ನಿಖರತೆಯೊಂದಿಗೆ ರೂಪಿಸಲಾಗಿದ್ದು, ಟ್ಯಾಗ್ ಝೀರೊಜಿ ನೈಜವಾಗಿ ಅತ್ಯಧಿಕ ಕ್ಷಮತೆಯ ನೈಜವಾದ ವೈರ್ಲೆಸ್ ಇಯರ್ಫೋನ್ಗಳನ್ನು ಹೊಂದಿದ್ದು, ಇದು ಅತ್ಯಾಧುನಿಕ ಶ್ರವಣ ಸ್ಪಷ್ಟತೆಯನ್ನು ಒದಗಿಸಲಿದೆ. ಈಯರ್ಬಡ್ಸ್ನಲ್ಲಿರುವ ಅತ್ಯಾಧುನಿಕ ಸಿವಿಸಿ 8.0 ಮೈಕ್ರೋಫೋನ್, ಹೊರ ವಾತಾವರಣದ ಶಬ್ದವನ್ನು ಕಡಿಮೆ ಮಾಡುವ ಮೂಲಕ, ಯಾವುದೇ ಅಡೆತಡೆ ಇಲ್ಲದ ಸುಸ್ಪಷ್ಟವಾದ ಕರೆಗಳನ್ನು ಮತ್ತು ಸಂಗೀತ ಆಲಿಸುವ ಅನುಭವವನ್ನು ಖಾತರಿಪಡಿಸುತ್ತದೆ.
ಕೇವಲ 7 ಗ್ರಾಂ ತೂಕ ಹೊಂದಿರುವ ಇಯರ್ಫೋನ್ ಸಿಡಿಯುವ ಹಾಗೂ ಬೆವರು ನಿರೋಧಕ ಗುಣಕ್ಕೆ ಐಪಿಎಕ್ಸ್5 ರೇಟಿಂಗ್ ಹೊಂದಿದೆ. ಟ್ಯಾಗ್ ಝೀರೊಜಿಯ ಪ್ರತಿಯೊಂದು ಇಯರ್ಬಡ್ಗೆ 40 ಎಂಎಪಿಎಚ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು 5 ಗಂಟೆ ನಿರಂತರ ಹಾಗೂ ತಡೆರಹಿತ ಸಂಗೀತವನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಒದಗಿಸುತ್ತದೆ. ಹೆಚ್ಚುವರಿಯಾಗಿ ಇಯರ್ಫೋನ್ನ ತೀರಾ ತೆಳುಪಾದ ಸ್ಟೋರೇಜ್ ಕೇಸ್, ಸಮಗ್ರ ಪವರ್ ಬ್ಯಾಂಕ್ ಸಮನ್ವಯಿತವಾಗಿ ದೊರಕುತ್ತದೆ. ಇದು ಈ ಸಾಧನವನ್ನು ಆರು ಬಾರಿ ಚಾರ್ಜ್ ಮಾಡಬಲ್ಲದು. ಈ ಮೂಲಕ ನಿರಂತರವಾಗಿ 35 ಗಂಟೆಗಳಿಗೂ ಅಧಿಕ ಅವಧಿಯ ಹಾಡುಗಳನ್ನು ಆಲಿಸಲು ಅವಕಾಶ ಮಾಡಿಕೊಡುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.