ಕಲ್ಲೇಗ ಮದ್ರಸದಲ್ಲಿ ಸಂಭ್ರಮದ ಮುಅಲ್ಲಿಮ್ ಡೇ ಹಾಗೂ ಜಂಇಯ್ಯತ್ತುಲ್ ಮುಅಲ್ಲಿಮೀನ್ 60ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರ ಸಭೆ

ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಕಲ್ಲೇಗ ಮ-ಅದನುಲ್ ಉಲೂಂ ಮದ್ರಸದಲ್ಲಿ ಸಂಭ್ರಮದ ಮುಅಲ್ಲಿಮ್ ಡೇ ಹಾಗೂ ಜಂಇಯ್ಯತ್ತುಲ್ ಮುಅಲ್ಲಿಮೀನ್ 60 ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರ ಸಭೆ ಮತ್ತು ಸಾಮೂಹಿಕ ಖಬರ್ ಝೀಯಾರತ್ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.

ಕಲ್ಲೇಗ ಜುಮಾ ಮಸೀದಿಯ ಮುದರ್ರಿಸ್ ಬಹು: ಅಬುಬ್ಬಕ್ಕರ್ ಸಿದ್ದೀಕ್ ಜಲಾಲಿ ಉಸ್ತಾದ್ ರವರು ಧ್ವಜಾರೋಹಣಗೈದರು. ಸಭಾಕಾರ್ಯಕ್ರಮದಲ್ಲಿ ಪುತ್ತೂರು ರೇಂಜ್ ಮದ್ರಸ ಮೆನೇಜ್ಮೆಂಟ್ ಅಸೋಸಿಯೇಷನ್ ನ ಅಧ್ಯಕ್ಷರೂ, ಕಲ್ಲೇಗ ಮ-ಅದನುಲ್ ಉಲೂಂ ಮದ್ರಸದ ಉಸ್ತುವಾರಿಯೂ ಆದ ಹಾಜಿ ಕೆ.ಪಿ.ಝಾಕೀರ್ ಹನೀಫ್(ಉದಯ) ರವರು ಎಲ್ಲರನ್ನ ಸ್ವಾಗತಿಸಿ ಮುಅಲ್ಲಿಮ್ ರವರಿಗೆ ಮುಅಲ್ಲಿಮ್ ಡೇಯ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುದರ್ರಿಸ್ ಬಹು: ಅಬುಬ್ಬಕ್ಕರ್ ಸಿದ್ದೀಕ್ ಜಲಾಲಿ ಉಸ್ತಾದ್ ರವರನ್ನು ಸಾಲು ಹೊದಿಸಿ ಸನ್ಮಾನಿಸಲಾಯಿತು. ಬಳಿಕ ಜಲಾಲಿ ಉಸ್ತಾದ್ ರವರು ಕಾರ್ಯಕ್ರಮವನ್ನ ಉದ್ಘಾಟಿಸಿ ಮುಅಲ್ಲಿಮ್ ರವರ ಬಗ್ಗೆ ಬಹಳ ಅರ್ಥವತ್ತಾದ ಮಾತುಗಳನ್ನು ಹೇಳಿ ಡಿಸೆಂಬರ್ 27,28,29 ರಂದು ಕೇರಳದ ಕೊಚ್ಚಿಯಲ್ಲಿ ನಡೆಯುವ ಜಂಇಯ್ಯತ್ತುಲ್ ಮುಅಲ್ಲಿಮೀನ್ ನ 60 ನೇ ವಾರ್ಷಿಕ ಮಹಾ ಸಮ್ಮೇಳನದಲ್ಲಿ ಎಲ್ಲಾ ಸಮಸ್ತಾಭಿಮಾನಿಗಳು ಪಾಲ್ಗೊಳ್ಳಬೇಕಾಗಿ ವಿನಂತಿಸಿ, ಮದ್ರಸದ ಎಲ್ಲಾ ಮುಅಲ್ಲಿಮ್ ನವರಿಗೆ ಶುಭ ಹಾರೈಸಿದರು.

ಕಲ್ಲೇಗ ಮೌಲಾನಾ ಆಝಾದ್ ಅಂಗ್ಲ ಮಾದ್ಯಮ ಶಾಲೆಯ ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷರಾದ ಇಸಾಖ್ ಸಾಲ್ಮರ ರವರು ಸಂಧರ್ಭೊಚಿತವಾಗಿ ಮಾತನಾಡಿದರು. ಬಳಿಕ ಮಾತನಾಡಿದ ಮದ್ರಸ ಅಧ್ಯಾಪಕರಾದ ಮುಹಮ್ಮದ್ ಶಾಫಿ ಉಸ್ತಾದ್ ರವರು ಬಹು: ವರಕ್ಕಳ್ ಮುಲ್ಲಾಕೋಯ ತಂಙಳ್ ರವರು ಸ್ಥಾಪಿಸಿದ ಸಮಸ್ತದ ಅಧೀನದಲ್ಲಿ ವಿದ್ಯಾಭ್ಯಾಸ ಬೋರ್ಡ್ ಸ್ಥಾಪಿಸಿದ ಸೈಯ್ಯದ್ ಅಬ್ದುಲ್ ರಹಿಮಾನ್ ಬಾಫಾಕಿ ತಂಙಳ್ ರವರ ಜೀವನ ಶೈಲಿಯ ಬಗ್ಗೆ ಹಾಗೂ ನಮ್ಮ ಸಮುದಾಯಕ್ಕೆ ನೀಡಿದ ಕೊಡುಗೆ ಬಗ್ಗೆ ವಿವರಿಸಿ, ವಿದ್ಯಾರ್ಥಿಗಳ ರಕ್ಷಕರು ಧಾರ್ಮಿಕ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ನಮ್ಮ ಮರಣದ ನಂತರದ ದಿನಗಳಲ್ಲಿ ನಮ್ಮ ಪರಲೋಕ ವಿಜಯದ ಮೋಕ್ಷಕ್ಕಾಗಿ ದುವಾ: ಮಾಡುವ ಮಕ್ಕಳಾಗಿ ಬರಲಿ ಎಂದು ಆಶಿಸಿ, ಜಂಇಯ್ಯತ್ತುಲ್ ಮುಅಲ್ಲಿಮೀನ್ ನ 50ನೇ ವಾರ್ಷಿಕ ಮಹಾ ಸಮೇಳನದಲ್ಲಿ ನಮ್ಮನ್ನಗಲಿದ ಶೈಖುನಾ ಕೆ.ಟಿ.ಮಾನು ಉಸ್ತಾದ್ ರವರನ್ನು ಸ್ಮರಿಸುತ್ತಾ, ಡಿಸೆಂಬರ್ 27, 28,29, ರ ಜಂಇಯ್ಯತ್ತುಲ್ ಮುಅಲ್ಲಿಮೀನ್ 60 ನೇ ವಾರ್ಷಿಕ ಮಹಾ ಸಮ್ಮೇಳನವನ್ನು ವಿಜಯಗೊಳಿಸ ಬೇಕಾಗಿ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಲ್ಲೇಗ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ (ಅದ್ದಮ) ಅಬ್ದುಲ್ ರಹಿಮಾನ್, ಜೊತೆ ಕಾರ್ಯದರ್ಶಿ (ಅಂದು) ಅಬ್ದುಲ್ ರಹಿಮಾನ್, ಜಮಾಅತ್ ನ ಅನಿವಾಸಿ ಭಾರತೀಯ ಸಮಿತಿಯಾದ NRI ಪ್ರವಾಸಿಗರು ಕಲ್ಲೇಗ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಲತೀಫ್ ಹಾಜಿ, ಮತ್ತು ಮದ್ರಸ ಅಧ್ಯಾಪಕರಾದ ಅಬ್ದುಲ್ ಹಮೀದ್ ಮುಸ್ಲಿಯಾರ್, ಮುಹಮ್ಮದ್ ಮುಸ್ಲಿಯಾರ್, ಹಾಗೂ ಮದ್ರಸ ವಿದ್ಯಾರ್ಥಿಗಳ ರಕ್ಷಕರು ಪಾಲ್ಗೊಂಡರು.

ಬಳಿಕ SKSBV ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ನಡೆಯಿತು. ಮದ್ರಸ ವಿದ್ಯಾರ್ಥಿಗಳು ತಮಗೆ ಧಾರ್ಮಿಕ ವಿದ್ಯಾಭ್ಯಾಸ ನೀಡುತ್ತಿರುವ ತಮ್ಮ ಅಧ್ಯಾಪಕರಿಗೆ ನೆನಪಿನ ಕಾಣಿಕೆ(ಗಿಪ್ಟ್) ನೀಡಿ ಗೌರವಿಸಿದರು. ಸದರ್ ಉಸ್ತಾದ್ ಅಬ್ದುಲ್ ರಹಮಾನ್ ಯಾಮಾನಿ ರವರಿಂದ ಬುರ್ದಾ ಮತ್ತು ಸಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ವರದಿ : ಹನೀಫ್ ಹಾಜಿ ಉದಯ, ಪುತ್ತೂರು

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...