(ವಿಶ್ವ ಕನ್ನಡಿಗ ನ್ಯೂಸ್) : ವಿಶ್ವ ಓಝೋನ್ ದಿನಾಚರಣೆ ಪ್ರಯುಕ್ತ ಪುತ್ತೂರಿನ ಕಲ್ಲೇಗ ಎಸ್ಕೆಎಸ್ಸೆಸ್ಸೆಫ್ ಶಾಖೆಯ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಕಲ್ಲೇಗ ಮ-ಅದನುಲ್ ಉಲೂಂ ಮದ್ರಸದ ಮತ್ತು ಕಲ್ಲೇಗ ಜುಮಾ ಮಸೀದಿಯ ಪರಿಸರದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಾಗೂ ಪರಿಸರದಲ್ಲಿ ಉತ್ತಮ ಜಾತಿಯ ಗಿಡ ನೆಡುವ ಮೂಲಕ ವಿಶ್ವ ಓಝೋನ್ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮವು ಎಸ್ಕೆಎಸ್ಸೆಸ್ಸೆಫ್ ಕಲ್ಲೇಗ ಶಾಖೆಯ ಅಧ್ಯಕ್ಷರಾದ ಡಿ.ಕೆ.ಅದಂ ರವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಎಸ್ಕೆಎಸ್ಸೆಸ್ಸೆಫ್ ಸದಸ್ಯರಾದ ಹನೀಫ್ ಹಾಜಿ ಉದಯ, ಮೂಸಾ ಕುಂಞ ಹಾಜಿ, ಶಂಸುದ್ದೀನ್ ಕಲ್ಲೇಗ,ಹಾಗೂ ಎಸ್ಕೆಎಸ್ಸೆಸ್ಸೆಫ್ ಸದಸ್ಯರು ಹಾಜರಿದ್ದರು.