ಹತ್ತಿ ಬೆಳೆಯುವ ಪ್ರದೇಶದಲ್ಲಿ ಸಿಂಗೆಂಟಾದಿಂದ “ವಿ-ಕೇರ್ ಅಭಿಯಾನ”

ಹುಬ್ಬಳ್ಳಿ (ವಿಶ್ವ ಕನ್ನಡಿಗ ನ್ಯೂಸ್) : ಭಾರತ ವಿಶ್ವದ ಅತಿದೊಡ್ಡ ಹತ್ತಿ ಉತ್ಪಾದಕ ಹಾಗೂ ರಫ್ತು ಮಾಡುವ ದೇಶವಾಗಿದ್ದು, ಲಕ್ಷಾಂತರ ರೈತರಿಗೆ ಜೀವನಾಧಾರವಾಗಿದೆ. ದೇಶದ ಹತ್ತಿ ಉತ್ಪಾದನೆಯಲ್ಲಿ ಕರ್ನಾಟಕ ಗೌರವದ ಸ್ಥಾನ ಹೊಂದಿದೆ. ಇಂದಿನವರೆಗೂ ಹತ್ತಿ ಬೆಳೆ ರೈತರಿಗೆ ಸುಸ್ಥಿರ ಹಾಗೂ ಲಾಭದ ಬೆಳೆಯಾಗಿ ಮುಂದುವರಿದಿದೆ. ಇದರ ಜತೆಜತೆಗೇ ಹತ್ತಿ ಬೆಳೆಯುವಲ್ಲಿ ಅನುಶೋಧನೆಗಳನ್ನು ಹಾಗೂ ಉತ್ತಮ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಗುಣಾತ್ಮಕ ಹಾಗೂ ಪರಿಮಾಣಾತ್ಮಕ ಪ್ರಗತಿ ಸಾಧಿಸುವುದೂ ಅಗತ್ಯವೆನಿಸಿದೆ. ತನ್ನ ಕಳೆದ ವರ್ಷದ ಫಲಿತಾಂಶದಿಂದ ಉತ್ತೇಜಿತವಾದ ಸಿಂಗೆಂಟಾ ಇಂಡಿಯಾ, ಈ ಬಾರಿ ವಿಕೇರ್ ಎಂಬ ವಿಶಿಷ್ಟ ಅಭಿಯಾನವನ್ನು ಹತ್ತಿ ಬೆಳೆಗಾರರಿಗಾಗಿ ಕರ್ನಾಟಕದ ಹುಬ್ಬಳಿ, ಗಂಗಾವತಿ, ಬಿಜಾಪುರ ಹಾಗೂ ರಾಯಚೂರಿನಲ್ಲಿ ಹಮ್ಮಿಕೊಂಡಿತ್ತು.

ಜಿಲ್ಲಾ ಕೃಷಿ ಇಲಾಖೆ ಸಹಯೋದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ವಿತರಕರು ಹಾಗೂ ಚಿಲ್ಲರೆ ಮಾರಾಟಗಾರರು ಸೇರಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿ ಕಡೆಗಳಲ್ಲಿ 200ಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗವಹಿಸಿದ್ದರು.

ಎರಡು ದಿನಗಳ ವಿಕೇರ್ ಅಭಿಯಾನವು ಪ್ರಮುಖವಾಗಿ ಆರೋಗ್ಯ ಮತ್ತು ನೈರ್ಮಲ್ಯದ ಮೂಲ ಆಯಾಮಗಳ ಬಗ್ಗೆ ಗಮನ ಹರಿಸಿತ್ತು. ಇದರ ಜತೆಗೆ ಬೆಳೆ ಸಂರಕ್ಷಣಾ ಉತ್ಪನ್ನಗಳ ಸುರಕ್ಷಿತ ಹಾಗೂ ಸುಭದ್ರ ದಾಸ್ತಾನಿನ ಬಗ್ಗೆ ಕೂಡಾ ಅರಿವು ಮೂಡಿಸಿತು. ಶಾಲಾ ಮಕ್ಕಳಿಗೆ ಇದನ್ನು ಬೋಧಿಸಿ, ಅವರ ಮೂಲಕ ಕುಟುಂಬಗಳಿಗೆ ಇದನ್ನು ತಲುಪಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಈ ವಿಶಿಷ್ಟ ಅಭಿಯಾನವು ದ್ವಿಮುಖ ಸಂವಹನ ದೃಷ್ಟಿಕೋನವನ್ನು ಹೊಂದಿದ್ದು, (ಶಾಲೆಯಿಂದ ಮನೆಗೆ, ಮನೆಯಿಂದ ಶಾಲೆಗೆ) ಇದು ರೈತಾಪಿ ವರ್ಗವನ್ನು ತಲುಪುವ ವಿಶಿಷ್ಟ ವಿಧಾನವಾಗಿದೆ.

ಸಿಂಗೆಂಟಿಯಾ ಇಂಡಿಯಾ ಲಿಮಿಟೆಡ್‍ನ ಸುಸ್ಥಿರ ಅಧಿಕಾರಿ ಡಾ.ಕೆ.ಸಿ.ರವಿ ಈ ಬಗ್ಗೆ ಮಾತನಾಡಿ, “ಸಿಂಗೆಂಟಾ ಇಂಡಿಯಾ ಈ ವಿನೂತನ ಉಪಕ್ರಮದಲ್ಲಿ ಶಾಲಾಮಕ್ಕಳಿಗಾಗಿ ವೈವಿಧ್ಯಮಯ ಶ್ರೇಣಿಯ ಸಂಕ್ಷಿಪ್ತ, ಕುತೂಹಲಕಾರಿ ಮತ್ತು ವಿನೂತನ ವಿಧಾನಗಳಾದ ಅಕ್ಬರ್ ಬಿರಬಲ್ ಕತೆಗಳ ಮೂಲಕ ಮಾಹಿತಿ ನೀಡುವ ಪ್ರಯತ್ನ ಮಾಡಿದೆ. ಇಂಥ ಕಥೆಗಳ ಮೂಲಕ ಕೃಷಿ ಸಂರಕ್ಷಣಾ ಉತ್ಪನ್ನಗಳನ್ನು ಸುರಕ್ಷಿತ ಹಾಗೂ ಜವಾಬ್ದಾರಿಯುತವಾಗಿ ಬಳಕೆ ಮಾಡುವ ವಿಧಾನವನ್ನು ವಿವರಿಸಲಾಗಿದೆ. ಮಕ್ಕಳು ಸಾಮಾನ್ಯವಾಗಿ ಶಾಲೆಯ ಘಟನಾವಳಿಗಳನ್ನು ಪೋಷಕರ ಜತೆ ಹಂಚಿಕೊಳ್ಳುತ್ತಾರೆ. ಈ ಕಥೆಗಳನ್ನು ಪೋಷಕರಿಗೆ ವಿವರಿಸುವ ವೇಳೆ ರೈತಾಪಿವರ್ಗದಲ್ಲಿ ಬೆಳೆರಕ್ಷಕ ಉತ್ಪನ್ನಗಳ ಸುರಕ್ಷಿತ ಹಾಗೂ ಜವಾಬ್ದಾರಿಯುತ ಬಳಕೆ ಬಗ್ಗೆಯೂ ಮಾಹಿತಿ ರವಾನೆಯಾಗುತ್ತದೆ. ಈ ಕಥೆಗಳ ಮೂಲಕ ಕಲಿಕೆಯು, ಮಕ್ಕಳನ್ನು ಜೀವನದದುದ್ದಕ್ಕೂ ಸುರಕ್ಷತೆ ಹಾಗೂ ಹೊಣೆಗಾರಿಕೆಯ ರಾಯಭಾರಿಗಳನ್ನಾಗಿ ಮಾಡುತ್ತದೆ ಹಾಗೂ ಇವರು ಬೀರಿದ ಪರಿಣಾಮ ದೊಡ್ಡವರ ಮೇಲೆ ಮುದ್ರೆಯೊತ್ತುತ್ತದೆ” ಎಂದು ಹೇಳಿದ್ದಾರೆ.

ಸಿಂಗೆಂಟಾ ಹತ್ತಿ ಬೆಳೆಗಾರರಿಗೆ ಮತ್ತು ಔಷಧಿ ಸಿಂಪಡಿಸುವವರಿಗೆ ತರಬೇತಿ ಶಿಬಿರವನ್ನೂ ಆಯೋಜಿಸಿದ್ದು, ಬೆಳೆ ಸುರಕ್ಷಾ ಉತ್ಪನ್ನಗಳ ಸುರಕ್ಷಿತ ಬಳಕೆ ಮತ್ತು ನಿರ್ವಹಣೆಗೆ, ಉತ್ಪನ್ನಗಳ ಮೇಲಿನ ಲೇಬಲ್‍ಗಳ ಬಗ್ಗೆ, ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಹಾಗು ಸುರಕ್ಷಿತವಾಗಿ ಖಾಲಿ ಡಬ್ಬಿಗಳನ್ನು ವಿಲೇವಾರಿ ಮಾಡುವ ಬಗ್ಗೆಯೂ ತರಬೇತಿ ನೀಡಲಾಗಿದೆ.

“ಈ ಕಾರ್ಯಕ್ರಮವನ್ನು ಭಾರತದ ಅಧಿಕ ಹತ್ತಿ ಬೆಳೆಯುವ ಆರು ರಾಜ್ಯಗಳಾದ ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಈ ತಿಂಗಳ 19 ಹಾಗೂ 20ರಂದು ಏಕಕಾಲಕ್ಕೆ ಹಮ್ಮಿಕೊಳ್ಳಲಾಗಿತ್ತು ಎಂದು ರವಿ ವಿವರಿಸಿದ್ದಾರೆ.

ಸಿಂಗೆಂಟಾ ಇಂಡಿಯಾ ಕ್ಷೇತ್ರ ತಂಡವು ರೈತರಿಗೆ ನಿಯತವಾಗಿ ಪಾಲಕ ತರಬೇತಿಯನ್ನು ನೀಡುತ್ತಾ ಬಂದಿದೆ. ಈ ಸೆಷನ್‍ಗಳಲ್ಲಿ ರೈತರು ಬೆಳೆರಕ್ಷಕ ಉತ್ಪನ್ನಗಳನ್ನು ಸುರಕ್ಷಿತವಾಗಿ ಬಳಸುವನಿಟ್ಟಿನಲ್ಲಿ ಐದು ಚಿನ್ನದ ನಿಯಮಗಳನ್ನು ವಿವರಿಸಲಾಗಿದೆ. ಈ ತೀವ್ರತರ ತರಬೇತಿಯ ಬಳಿಕ ರೈತರು ಲೇಬಲ್ ಓದುವುದು ಹಾಗೂ ಅರ್ಥ ಮಾಡಿಕೊಳ್ಳುವುದು, ಈ ಉತ್ಪನ್ನಗಳನ್ನು ಬಳಸುವ ಎಲ್ಲ ಹಂತದಲ್ಲಿ ಮುಂಜಾಗ್ರತೆ ತೆಗೆದುಕೊಳ್ಳುವುದು, ಅನ್ವಯಿಕೆ ಸಾಧನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು, ಉತ್ಪನ್ನಗಳ ಬಳಕೆಯ ಮೊದಲು, ಬಳಕೆಯ ಅವಧಿಯಲ್ಲಿ ಹಾಗೂ ಬಳಕೆಯ ನಂತರ ಶುಚಿತ್ವ ಕಾಪಾಡಿಕೊಳ್ಳುವುದು, ಸಮರ್ಪಕವಾಗಿ ವೈಯಕ್ತಿಕ ಸುರಕ್ಷಾ ಸಾಧನಗಳ ಬಳಕೆ ಮತ್ತಿತರ ವಿಚಾರಗಳ ಬಗ್ಗೆ ತಿಳಿದುಕೊಂಡಿದ್ದಾರೆ.
ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ : www.syngenta.com

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...