(ವಿಶ್ವ ಕನ್ನಡಿಗ ನ್ಯೂಸ್,www.vknews.in ): ದಕ್ಷಿಣ ಕನ್ನಡ ಕಾಂಗ್ರೆಸ್ ನಲ್ಲಿ ಗುರುತಿಸಿ ಕೊಂಡಿರುವ ಪ್ರಮುಖ ನಾಯಕರಲ್ಲಿ ಓರ್ವರಾಗಿರುವ ಕಾವು ಹೇಮನಾಥ ಶೆಟ್ಟಿ ಇದೀಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದು ಹಲವು ಕಾಂಗ್ರೆಸ್ ನ ಪ್ರಮುಖ ಯುವ ನಾಯಕರು ಹೇಮನಾಥ ಶೆಟ್ಟಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ .ಕೆ.ಪಿ.ಸಿ.ಸಿ ಈಗಾಗಲೇ 10 ಜಿಲ್ಲೆಯ ಅಧ್ಯಕ್ಷರ ಬದಲಾವಣೆಯ ತೀರ್ಮಾನ ಕೈಗೊಂಡಿದ್ದು ಅದರಲ್ಲಿ ದಕ್ಷಿಣ ಕನ್ನಡ ಕೂಡ ಒಳಗೊಂಡಿದೆ .
ಯುವ ಸಮುದಾಯದ ಜೊತೆ ಆತ್ಮೀಯವಾಗಿ ಬೆರೆಯುವ ಕಾವು ಹೇಮನಾಥ ಶೆಟ್ಟಿ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಗೂ ಒಲವಿದ್ದು ಅವರು ಅಧ್ಯಕ್ಷರಾದರೆ ಜಿಲ್ಲೆಯಲ್ಲಿ ಯುವ ಸಮೂಹವನ್ನು ಕಾಂಗ್ರೆಸ್ ಕಡೆ ಸೆಳೆಯ ಬಹುದು ಎಂಬುದು ಹಲವರ ಅಭಿಪ್ರಾಯ .ಸಾಕಷ್ಟು ವರುಷದಿಂದ ಪಕ್ಷಕ್ಕೋಸ್ಕರ ದುಡಿದ ಶೆಟ್ಟಿಯವರು ಜನಪರ ಕೆಲಸದಿಂದ ಗುರುತಿಸಿಕೊಂಡಿದ್ದಾರೆ . ಅದೇ ಅಲ್ಲದೆ ಯುವ ಸಮೂಹವನ್ನು ಪಕ್ಷಕ್ಕೆ ಸೆಳೆಯುವುದು ಈಗಿನ ಪ್ರಮುಖ ಸವಾಲಾಗಿದ್ದು ಅದನ್ನು ಶೆಟ್ಟಿಯವರು ನಿಭಾಯಿಸಲು ಶಕ್ತರು ಎಂಬುದು ಎಲ್ಲರ ಅಭಿಪ್ರಾಯ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.