(ವಿಶ್ವ ಕನ್ನಡಿಗ ನ್ಯೂಸ್) : ಕಾಶಿಪಟ್ಣ:ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕ-ರಕ್ಷಕ ಸಭೆಯು ನಡೆಯಿತು. ಸಮಾರಂಭದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೇರಳದ ದಾರುಲ್ ಹುದಾ ಯುನಿವರ್ಸಿಟಿ ಪ್ರೊಫೆಸರ್ ಉಸ್ತಾದ್ ಕೆ.ಸಿ ಮುಹಮ್ಮದ್ ಬಾಖವಿ ಅವರು ಮಾತನಾಡಿ “ಸಮನ್ವಯ ಶಿಕ್ಷಣದಿಂದ ಮಕ್ಕಳ ಉಜ್ವಲ ಭವಿಷ್ಯ” ಹಾಗೂ “ಮಕ್ಕಳು ಪರಲೋಕದ ಸಂಪತ್ತು” ಎಂಬ ವಿಷಯದಲ್ಲಿ ಮಾತನಾಡಿದರು.
ಶಿಕ್ಷಕ-ರಕ್ಷಕ ಸಮಿತಿಯ ಅಧ್ಯಕ್ಷರಾದ ಜನಾಬ್ ಫಕೀರಬ್ಬ ಮಾಸ್ಟರ್ ಸಭಾಧ್ಯಕ್ಷತೆಯನ್ನು ವಹಿಸಿ ಪೋಷಕರು ಸಂಸ್ಥೆಯೊಂದಿಗೆ ಸಂಪರ್ಕವನ್ನಿಟ್ಟು ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕೆಂದರು. ಸಮಿತಿಯ ಪ್ರ.ಕಾರ್ಯದರ್ಶಿ ಹಸನ್ ಕುಟ್ಟಿ ಹೊಕ್ಕಾಡಿ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿದರು.ದಾರುನ್ನೂರ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ರಝಾಕ್ ಹಾಜಿ,ಉಪಾಧ್ಯಕ್ಷರಾದ ಜನಾಬ್ ಹನೀಫ್ ಹಾಜಿ ಬಂದರ್ ಸಾಂದರ್ಭಿಕವಾಗಿ ಮಾತನಾಡಿದರು. ಸಭೆಯಲ್ಲಿ ಕೇಂದ್ರ ಸಮಿತಿ ಜೊತೆ ಕಾರ್ಯದರ್ಶಿ ರಿಯಾಝುದ್ದೀನ್ ಬಂದರ್, ಪಿ.ಟಿ.ಎ ಕೋಶಾಧಿಕಾರಿ ಯಾಕೂಬ್ ಲಾವಣ್ಯ,ವ್ಯವಸ್ಥಾಪಕರಾದ ಅಬ್ದುಲ್ ಹಕೀಂ ಹಾಗೂ ಪಿ.ಟಿ.ಎ ವರ್ಕಿಂಗ್ ಕಾರ್ಯದರ್ಶಿ ತ್ವಾಹಾ ಹುದವಿ ಉಪಸ್ಥಿತರಿದ್ದರು.ಸಂಸ್ಥೆಯ ಪ್ರಾಂಶುಪಾಲರಾದ ಅಮೀನ್ ಹುದವಿ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು.
ಇದೇ ಸಂದರ್ಭದಲ್ಲಿ 2018-19 ನೇ ಸಾಲಿನ ಸಮಿತಿಯನ್ನು ಹೆಚ್ಚುವರಿ ಸದಸ್ಯರನ್ನು ಸೇರಿಸಿಕೊಂಡು ಮುಂದಿನ ಒಂದು ವರ್ಷದ ಅವಧಿಗೆ ಪುನರಾಯ್ಕೆ ಮಾಡಲಾಯಿತು.
ಸಮಾರಂಭದಲ್ಲಿ ಕಾಲೇಜ್ ವಿದ್ಯಾರ್ಥಿ ಸಂಘಟನೆ ” ತನ್ವೀರ್ ” ಪ್ರತಿ ತಿಂಗಳು ಹೊರ ತರುವ ಮಾಸಿಕ ‘ನವ ವೈಭವ’ ವನ್ನು ಜನಾಬ್ ಅಬ್ದುಲ್ ರಝಾಕ್ ಹಾಜಿಯವರು ಜನಾಬ್ ಹನೀಫ್ ಹಾಜಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು.
ಬಹುಮಾನ ವಿತರಣೆ: “ತನ್ವೀರ್ ” ಆಯೋಜಿಸಿದ ಭಾಷಾವಾರು ಹಾಗೂ ವಿಜ್ಞಾನ ಪ್ರದರ್ಶನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.