(ವಿಶ್ವ ಕನ್ನಡಿಗ ನ್ಯೂಸ್)
ನಿನ್ನೊಡನೆ ಹೆಜ್ಜೆಯನಿಟ್ಟು
ಬರುವೆನು ನಾನು
ನನ್ನನು ಹೊರಗೇ ಬಿಟ್ಟು
ಒಳ ಹೋಗುವೆ ನೀನು
ಕಲ್ಲಿರಲಿ ಮುಳ್ಳಿರಲಿ
ನಿನ್ನ ಪಾದಕೆ ರಕ್ಷೆಯು ನಾನು
ಇಂಥ ಸೇವೆಯ ಮಾಡಿದುದಕೆ
ನನಗಿಂತ ಶಿಕ್ಷೆ ನೀಡಿದೆ ನೀನು
ಮಹಿಮರ ಪಾದುಕೆ ಮುಟ್ಟಿ
ನಮಿಸುವೆ ನೀನು
ಅದೇ ಕಾಯಕವ ನಾ ಮಾಡುತಲಿದ್ದರೂ
ನನ್ನನೇಕೆ ಹೊರಗಿಟ್ಟೆ ನೀನು
ನಾನಿಲ್ಲದೆ ನಿನ್ನ ಪಾದಕೆ
ರಕ್ಷಣೆ ಎಂಬುದೇ ಇಲ್ಲ
ಅದರೂ ನಿಮಗೇಕೆ
ನನ್ನ ಸ್ಪರ್ಶ ಅಸಹ್ಯವೆನಿಸುವುದಲ್ಲ
ನನ್ನನು ಬಳಸಿದ ನಿಮಗೆಲ್ಲಾ
ಸಿಕ್ಕಲಿ ಒಳ್ಳೆಯ ಸಂಸ್ಕಾರ
ನನ್ನನು ನೋಯಿಸಿದ
ನಿಮಗೆಲ್ಲಾ ಇರಲಿ ದಿಕ್ಕಾರ

ನಡೆವ ನಿಮ್ಮ ಕಾಲಿಗೆ
ನಾನಾಗಿರುವೆನು ಭರವಸೆ
ಬಿಡದೆ ನೀವು ಬಳಸಿಕೊಳ್ಳಿರಿ
ನನ್ನನು ನಿಮ್ಮವನೆಂದು ಭಾವಿಸಿ.
ಅಮು ಭಾವಜೀವಿ ಮುಸ್ಟೂರು