(ವಿಶ್ವ ಕನ್ನಡಿಗ ನ್ಯೂಸ್) : ಉಪ್ಪಿನಂಗಡಿ ಹತ್ತಿರದ ಇಳಂತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಡಿಯುವ ನೀರು ನೇರವಾಗಿ ನೇತ್ರಾವತಿ ಹೊಳೆಯಿಂದ ಸರಬರಾಜು ಮಾಡುತ್ತಿರುವ ಪಂಚಾಯತ್ ಆಡಳಿತ ನೀರನ್ನು ಸ್ವಚ್ಛ ಗೊಳಿಸದೆ ಜನರಿಗೆ ತಲುಪಿಸುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಪಂಚಾಯತ್ ಆಡಳಿತಕ್ಕೆ ಬಿಸಿ ಮುಟ್ಟಿಸಬೇಕಿದೆ.
ಪಂಚಾಯತ್ ಆಡಳಿತದೊಂದಿಗೆ ಸಾರ್ವಜನಿಕರು ವಿಚಾರಿಸಿದರೆ ಸಿಗುವ ಉತ್ತರ ಉಡಾಫೆಯಿಂದ ಕೂಡಿದ್ದಾಗಿದೆ ಪಂಚಾಯತ್ ಚುನಾವಣಾ ಸಮಯದಲ್ಲಿ ಜನರಿಗೆ ನೂರಾರು ಆಮಿಷವೊಡ್ಡಿ ಚುನಾವಣೆ ಎದುರಿಸಿ ವಿಜಯಿ ಹಾಗುತ್ತಿರುವ ಇಲ್ಲಿನ ಜನಪ್ರತಿನಿಧಿಗಳಿಗೆ ಜನತೆ ಇಡಿ ಶಾಪ ಹಾಕುತ್ತಿದ್ದಾರೆ..
ನೂರಾರು ಸಾಂಕ್ರಾಮಿಕ ರೋಗಗಳು ದಾಳಿ ಮಾಡುತ್ತಿರುವ ಈ ಕಾಲದಲ್ಲಿ ಇನ್ತತಃ ಮಣ್ಣು ಮಿಶ್ರಿತ ಕೆಂಪು ನೀರಿನಿಂದ ಜನತೆ ಕಂಗೆಟ್ಟಿದ್ದಾರೆ ಇನ್ನು ಮುಂದಿನ ದಿನಗಳಲ್ಲಿ ಈಗೆಯೇ ಮುಂದುವರಿದರೆ ಜನತೆ ಪಂಚಾಯತ್ ಗೆ ದಾಳಿ ಮಾಡೋ ದಿನಗಳು ದೂರವಿಲ್ಲ.
ಸದಾ ಒಂದಲ್ಲೊಂದು ಆರೋಪಗಳಿಂದ ಸುದ್ದಿಯಾಗುತ್ತಿರುವ ಇಲ್ಲಿನ ಆಡಳಿತದ ಎದುರಾಗಿ ಇಲ್ಲಿನ ಯುವ ಜನರು ಸೆಟೆದು ನಿಲ್ಲಬೇಕಿದೆ ಸಾಂಕ್ರಮಿಕ ರೋಗದಿಂದ ನಮ್ಮಲ್ಲೊಬ್ಬರನ್ನ ಕಳೆದುಕೊಳ್ಳೋ ಮುನ್ನ…
– ನೊಂದು ಬೆಂದ ಗ್ರಾಮಸ್ಥ