ಅಲ್ಪಸಂಖ್ಯಾತರಿಗೆ ಯಡಿಯೂರಪ್ಪ ಸರಕಾರ ನೀಡಿದ ಸೇವೆ ಯಾರೂ ಮರೆಯಬಾರದು – ರಫೀಕ್ ದರ್ಬೆ

(ವಿಶ್ವ ಕನ್ನಡಿಗ ನ್ಯೂಸ್) : ಅಂದಿನ ಯಡಿಯೂರಪ್ಪ ಸರಕಾರದ ಕೊನೆ ಹಂತದ ಯೋಜನೆ ಈಮಾಮ್ ಗೌರವ ಧನದ ಸೇವೆ, ಇಮಾಮ್ ಗೌರವ ಧನದಲ್ಲಿ ಇದೀಗ ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದೆ. ಇದು ಮಸೀದಿ ಕೆಲಸದ ಮೌಲವಿ ಯವರಿಗೆ ಸಲ್ಲುವ ಗೌರವಧನವಾಗಿದೆ, 25 ವರ್ಷದ ಅವರ ಕನಸು ನನಸಾದದ್ದು ಬಿಜೆಪಿ ಆಡಳಿತದಲ್ಲಿ ಎಂಬುವುದನ್ನು ಅಲ್ಪಸಂಖ್ಯಾತ ಮುಸಲ್ಮಾನರು ಮರೆಯಬಾರದು..

ಅಲ್ಪಸ೦ಖ್ಯಾತ ಅಭಿವ್ರದ್ದಿಗೆ 20 ವರ್ಷದ ಹಜ್ ಭವನದ ಬೇಡಿಕೆ : ಆಗಿನ ಯಡಿಯೂರಪ್ಪ ಸರಕಾರ ಸುಮಾರು 40 ಕೋಟಿ ವೆಚ್ಚದಲ್ಲಿ ಏಕಕಾಲದಲ್ಲಿ 1500ಜನ ನಮಾಜ಼್ ಮಾಡುವ ಹಜ್ ಭವನದ ನಿರ್ಮಾಣ ಮಾಡಿದೆ. ಯಡಿಯೂರಪ್ಪ(ಬಿಜೆಪಿ)ನೀಡಿದ ಸೇವೆ ಹಿಂದೆಂದು ಯಾವ ಸರಕಾರವೂ ಮಾಡಿಲ್ಲ ಎಂಬುವುದನ್ನು ಅಲ್ಪಸಂಖ್ಯಾತರು ಮರೆಯಬಾರದು.

ಕೇಂದ್ರ ಸರಕಾರ ಅತೀ ಬಡವರಿಗಾಗಿ ನೀಡುವ ಗ್ಯಾಸ್ ಯೋಜನೆಯಲ್ಲಿ‌ ಅಲ್ಪಸಖ್ಯಾತರೇ ಅಧಿಕ, ಉಜ್ವಲ ಯೋಜನೆಯ ಜಾಮೀನು ರಹಿತ ವಾಹನ ಸಾಲದಲ್ಲಿಯೂ ಅಲ್ಪಸ0ಖ್ಯಾತರು ಅಧಿಕ ಎನ್ನುವುದನ್ನು ಮರೆಯಬಾರದು..

ಹೀಗೆ ಬಿಜೆಪಿ ಸರಕಾರದ ಹಲವು ವಿಧದ ಫ಼ಲ ಪಡೆದವರಲ್ಲಿ ಹೆಚ್ಚಿನವರು ಅಲ್ಪಸ೦ಖ್ಯಾತರೇ ಎನ್ನುವುದನ್ನು ಮರೆಯುಬಾರದು. ಅಲ್ಪಸ೦ಖ್ಯಾತ ಮತಗಳು ಹೆಚ್ಚಿಗೆ ಬಿಜೆಪಿ ಪಾಲಾಗದಿದ್ದರೂ ಅಭಿವ್ರದ್ದಿಯಲ್ಲಿ ಎಂದೂ ಬಿಜೆಪಿ ತಾರತಮ್ಯ ಮಾಡಿಲ್ಲ ಎಂಬುವುದಕ್ಕೆ ಇದು ಕೆಲವೊಂದು ಉದಾಹರಣೆಗಳು ಮಾತ್ರ.

ಇನ್ನೂ ಹಲವು ಯೋಜನೆಗಳು ಅಲ್ಪಸ೦ಖ್ಯಾತರಿಗೆ ಬಿಜೆಪಿ ಹಿಂದೆ ನೀಡಿದೆ ಹಾಗೆ ಮುಂದೆಯೂ ನೀಡುತ್ತಿದೆ, ಮೋದಿ, ವಾಜಪಯಿ ಕೇಂದ್ರ ಸರಕಾರ ಏನೆಲ್ಲಾ ನೀಡಿದೆ ಎಂಬುವುದನ್ನು ವಿವರವಾಗಿ ಮುಂದೆ ನೀಡುತ್ತೇನೆ. ಇಂತಹ ಉತ್ತಮ ಕೆಲಸ ಕಾರ್ಯದ ವಿಷಯವನ್ನು ತಿಳಿಸುವುದು ಪಕ್ಷದ ಒರ್ವ ಕಾರ್ಯಕರ್ತನಾಗಿ ಅಲ್ಪಸ0ಖ್ಯಾತನಾಗಿ ನನ್ನ ಆದ್ಯ ಕರ್ತವ್ಯವೂ ಆಗಿದೆ ಎಂದು ನಾನು ಭಾವಿಸಿದ್ದೇನೆ..

ವಾಟ್ಸ್ ಅಪ್ ಗಳಲ್ಲಿ ಅನಗತ್ಯ ವಿಚಾರ ವಿಮರ್ಶಣೆಯಿಂದ ದೂರ ಸರಿದು ಉತ್ತಮ ಸೇವಾ ವಿಚಾರಗಳು, ಅಭಿವ್ರದ್ಧಿ ವಿಚಾರಗಳನ್ನು ಪ್ರಚಾರಪಡಿಸಿ ದೇಶ ಸಧ್ರಢವಾಗುವಲ್ಲಿ ಪ್ರತೀಯೊಬ್ಬ ನಾಗರೀಕನೂ ಪ್ರಯತ್ನಿಸಿದಲ್ಲಿ ನಮ್ಮ ಭಾರತದಷ್ಟು ಉತ್ತಮ ದೇಶ ಇನ್ನೊಂದಿಲ್ಲ..

ನಾವೆಲ್ಲ ಉತ್ತಮ ಭಾರತ ನಿರ್ಮಾಣಕ್ಕಾಗಿ ಶ್ರಮಿಸೋಣ,
ಜೈ ಹಿಂದ್, ಜೈ ಕರ್ನಾಟಕ

– ರಫೀಕ್ ದರ್ಬೆ(ಪುತ್ತೂರು)

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...