ರಾಜ್ಯ ರೇಷ್ಮೆ ಅಭಿವೃಧ್ಧಿ ಆಯುಕ್ತರ ಕಾರಿಗೆ ಘೇರಾವ್ ಮಾಡಿದ ರೀಲರ್ಸ್ ಸಂಘದ ಅಧ್ಯಕ್ಷ!


ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ರೇಷ್ಮೆ ನೂಲು ಬಿಚ್ಚಾಣಿಕೆದಾರರ ಬೇಡಿಕೆಗಳನ್ನು ಆಲಿಸದೆ ವಾಪಸ್ಸು ತೆರಳಲು ಸಿದ್ದರಾದ ರಾಜ್ಯ ರೇಷ್ಮೆ ಅಭಿವೃಧ್ಧಿ ಆಯುಕ್ತೆ ರೋಹಿನಿ ಸಿಂಧೂರಿ ಅವರ ಕಾರನ್ನು ತಡೆದು ಪ್ರತಿಭಟನೆ ನಡೆಸಿದ ಪ್ರಸಂಗ ಇಲ್ಲಿನ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸಂಭವಿಸಿತು.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ ನಗರವೆಂದು ಖ್ಯಾತಿ ಹೊಂದಿರುವ ಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಲು ಬಂದಿದ್ದ ರಾಜ್ಯ ರೇಷ್ಮೆ ಅಭಿವೃಧ್ಧಿ ಆಯುಕ್ತೆ ರೋಹಿನಿ ಸಿಂಧೂರಿ ಅವರು ಕೇವಲ ರೇಷ್ಮೆ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಮನವಿ ಸ್ವೀಕರಿಸಲು ನಿರಾಕರಿಸಿದಾಗ ಅಸಮಾಧಾನಗೊಂಡ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ಅಧ್ಯಕ್ಷ ಅನ್ಸರ್ ಖಾನ್ ಆಯುಕ್ತರ ಕಾರು ತಡೆದು ನಮ್ಮ ಮೇಲೆ ಕಾರು ಹರಿಸಿ ಮುಂದೆ ಹೋಗಿ ಪ್ರತಿಭಟನೆ ಮಾಡಿದರು.

ರೇಷ್ಮೆ ಉದ್ಯಮದಲ್ಲಿ ರೇಷ್ಮೆ ಬೆಳೆಗಾರರು ಮತ್ತು ನೂಲು ಬಿಚ್ಚಾಣಿಕೆದಾರರು ಎರಡು ಕಣ್ಣುಗಳಿದ್ದಂತೆ ತಾವು ರೇಷ್ಮೆ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ ಹೊರಟು ಹೋದರೇ ತಮಗಾಗಿ ಕಾಯುತ್ತಿರುವ ನಮ್ಮ ಸಮಸ್ಯೆಗಳನ್ನು ಕೇಳುವರ್ಯಾರು? ಎಂದು ಪ್ರಶ್ನಿಸಿದರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆಯುಕ್ತರು ನಿಮಗೆ ಯಾರು ಕಾಯಿರಿ ಎಂದು ಹೇಳಿದರು ನಾನು ಮಾರುಕಟ್ಟೆಯಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಲು ಬಂದಿದ್ದೇನೆ ಇಲ್ಲಿನ ಕುಂದುಕೊರತೆಗಳನ್ನು ವೀಕ್ಷಣೆ ಮಾಡಿ ನಂತರ ರೇಷ್ಮೆ ಉದ್ದಮೆಗೆ ಸಂಬಂಧಿಸಿದಂತೆ ರೀಲರ್ಸ್ ಮತ್ತು ರೇಷ್ಮೆ ಬೆಳೆಗಾರರ ಸಭೆಯನ್ನು ಆಯೋಜಿಸಲು ಕ್ರಮ ಕೈಗೊಳ್ಳುತ್ತೇನೆ ನೀವು ನನ್ನ ಕಾರು ತಡೆದಿರುವ ವರ್ತನೆ ಸರಿಯಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊನೆಗೂ ರೇಷ್ಮೆ ಆಯುಕ್ತರ ಕಾರು ಮುಂದೆ ಪ್ರತಿಭಟನೆ ನಡೆಸಿದ ಸಂಘದ ಅಧ್ಯಕ್ಷ ಅನ್ಸರ್ ಖಾನ್ ಅವರನ್ನು ಸಮಾಧಾನಪಡಿಸಿದ ರೇಷ್ಮೆ ಇಲಾಖೆಯ ಅಧಿಕಾರಿಗಳು ರೀಲರ್ಸ್ ಸಂಘದ ಪ್ರತಿನಿಧಿಗಳಿಂದ ಆಯುಕ್ತರಿಗೆ ಮನವಿಪತ್ರ ಸಲ್ಲಿಸಲು ಅವಕಾಶ ಕಲ್ಪಿಸಿದರು ತದನಂತರ ರೇಷ್ಮೆ ಅಭಿವೃಧ್ಧಿ ಆಯುಕ್ತರು ತೆರಳಿದರು ಇದೇ ವೇಳೆಯಲ್ಲಿ ರೀಲರ್ಸ್ ಮುಖಂಡ ಜಿ.ರೆಹಮಾನ್ ಮಾತನಾಡಿ ರೇಷ್ಮೆ ಇಲಾಖೆಯಲ್ಲಿರುವ ನೂನ್ಯತೆಗಳನ್ನು ಎತ್ತಿಹಿಡಿಯುವ ನೂಲು ಬಿಚ್ಚಾಣಿಕೆದಾರರಿಗೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಮಾತನಾಡಲು ಅಥವಾ ಭೇಟಿ ಮಾಡಲು ಬಿಡುವುದಿಲ್ಲ ಕೇವಲ ಅವರ ಕಾರ್ಯವೈಖರಿಯನ್ನು ಹೊಗಳುವರಿಗೆ ಕರೆಸಿಕೊಳ್ಳುತ್ತಾರೆ ಜೊತೆಗೆ ವಿನಾಕಾರಣ ಗೊಂದಲದ ವಾತಾವರಣ ಸೃಷ್ಠಿಸಿ ರೀಲರ್ಸ್‍ಗಳನ್ನು ಗೂಂಡಾಗಳಂತೆ ಪ್ರತಿಬಿಂಬಿಸುತ್ತಾರೆ ಎಂದು ಆಯುಕ್ತರ ಸಮ್ಮುಖದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರೀಲರ್ಸ್ ಅಸಮಾಧಾನ: ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿರುವ ಸಮಸ್ಯೆಗಳು ಮತ್ತು ರೇಷ್ಮೆ ವ್ಯಾಪಾರವನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿರುವ ರೀಲರ್ಸ್‍ಗಳ ಸಮಸ್ಯೆಯನ್ನು ರಾಜ್ಯ ರೇಷ್ಮೆ ಅಭಿವೃಧ್ಧಿ ಆಯುಕ್ತರಿಗೆ ಗೌರವಪೂರ್ವಕವಾಗಿ ಮಾಲಾರ್ಪಣೆ ಮಾಡಿ ಬೇಡಿಕೆಗಳನ್ನು ಒಳಗೊಂಡಂತೆ ಮನವಿ ಸಲ್ಲಿಸಲು ಬಂದ ರೀಲರ್ಸ್ ಸಂಘದ ಪ್ರತಿನಿಧಿಗಳೊಂದಿಗೆ ಕನಿಷ್ಠ ಸೌರ್ಜನ್ಯಕ್ಕಾದರೂ ಮಾತನಾಡಲು ಒಪ್ಪದ ಆಯುಕ್ತರ ಕಾರ್ಯವೈಖರಿ ವಿರುಧ್ಧ ರೀಲರ್ಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು ರೀಲರ್ಸ್‍ಗಳು ತಮ್ಮ ಸಮಸ್ಯೆಗಳನ್ನು ಆಯುಕ್ತರ ಬಳಿ ಹೇಳಿಕೊಳ್ಳಲು ಸಾಧ್ಯವಾಗದಿದ್ದರೇ ಇನ್ನೂ ಯಾರ ಬಳಿ ಆಹ್ವಾಲು ಸಲ್ಲಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಕುಮಾರ್,ಜಿಪಂ ಉಪನಿರ್ದೇಶಕ ಬೈರಪ್ಪ,ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್,ಸಹಾಯಕ ನಿರ್ದೇಶಕ ಅಕ್ಮಲ್ ಪಾಷ, ಭಾನುಪ್ರಕಾಶ್,ರೀಲರ್ಸ್ ಸಂಘದ ರಾಮಕೃಷ್ಣಪ್ಪ,ಜೋಹರ್ ಪಾಷ,ಅಕ್ರಮ್,ನಾಗನರಸಿಂಹ,ನರಸಿಂಹಮೂರ್ತಿ,ನಗರಸಭಾ ಸದಸ್ಯ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ವರದಿ: ಎಂ.ಎ.ತಮೀಮ್ ಪಾಷ ಶಿಡ್ಲಘಟ್ಟ

ವರದಿಗಾರರು,
ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...