ಕುದುರೆಯಲ್ಲಿ ಅಪಾಯಕಾರಿ ಪರ್ವತಾರೋಹಣ ಮಾಡಿದ ಕಿಮ್ ಜೊಂಗ್ ಉನ್ : ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ಈ ಪರ್ವತವೇರುವ ಹವ್ಯಾಸ ಈತನದ್ದು

(ವಿಶ್ವ ಕನ್ನಡಿಗ ನ್ಯೂಸ್,www.vknews.in ): ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಬಿಳಿ ಕುದುರೆ ಏರಿ ಅಪಾಯಕಾರಿ ಪರ್ವತಾರೋಹಣ ಮಾಡಿದ್ದಾನೆ . ಕಿಮ್ ತನ್ನ ಜೀವನದ ಯಾವುದೇ ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ಈ ಪರ್ವತವೇರುವ ಹವ್ಯಾಸ ಮಾಡಿಕೊಂಡಿದ್ದನಂತೆ . ಈಗ ಎಲ್ಲರಿಗು ಕಾಡುತ್ತಿರುವ ಪ್ರಶ್ನೆ ಕಿಮ್ ನ ಮುಂದಿನ ನಡೆಯೇನು ಎಂಬುದು .

ಈಗಾಗಲೇ ಅಮೇರಿಕ ಆರ್ಥಿಕ ದಿಗ್ಬಂಧನದ ಮೇಲೆ ತಾನು ಸವಾರಿ ಮಾಡುತ್ತೇನೆ ಎಂದು ಘೋಷಿಸಿರುವ ಕಿಮ್ ಮುಂದಿನ ನಡೆ ಕುತೂಹಲ ಮೂಡಿಸಿದೆ .ಈಗಾಗಲೇ ಯುಎಸ್ ಜೊತೆಗಿನ ಮೊದಲ ಪರಮಾಣು ಮಾತುಕತೆಗಳು ವಿಫಲವಾಗಿದ್ದು ಕಿಮ್ ನಡೆ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ . 2013 ರಲ್ಲಿ ತನ್ನ ಚಿಕ್ಕಪನನ್ನು ಹತ್ಯೆ ಮಾಡುವ
ಮೊದಲು ಮತ್ತು ಸಿಯೋಲ್ ಮತ್ತು ವಾಷಿಂಗ್ಟನ್‌ನೊಂದಿಗಿನ ರಾಜತಾಂತ್ರಿಕತೆಗೆ 2018 ರ ಪ್ರವೇಶದಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಕಿಮ್ ಈ ಪರ್ವತಾರೋಹಣ ಮಾಡಿದ್ದನಂತೆ .ಈಗ ಮುಂದೇನು ಎಂಬುದು ವಿಶ್ವಕ್ಕೆ ಆತಂಕ ಉಂಟು ಮಾಡಿದೆ .

ಸಂಪಾದಕರು,
ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...