ಪಾದುವ ಥಿಯೇಟರ್ ಹಬ್ : ದ್ವೀಪ ನಾಟಕದ ಪ್ರದರ್ಶನ


ಮಂಗಳೂರು(ವಿಶ್ವಕನ್ನಡಿಗ ನ್ಯೂಸ್):
ರಂಗಭೂಮಿಯ ನಿರಂತರತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಮಂಗಳೂರಿನ ಹಲವು ಹವ್ಯಾಸಿ ರಂಗತಂಡಗಳು ಜೊತೆ ಸೇರಿ ಆರಂಭಗೊಂಡ ಪಾದುವ ಥಿಯೇಟರ್ ಹಬ್, ವಾರಾಂತ್ಯ ನಾಟಕ ಪ್ರದರ್ಶನದಲ್ಲಿ ಲಕ್ಷ್ಮಣ್ ಕೆಪಿ ನಿರ್ದೇಶನದ, ಆಯನ ನಾಟಕ ಮನೆಯ ಕಲಾವಿದರು ಅಭಿನಯಿಸಿದ ಕನ್ನಡ ನಾಟಕ “ದ್ವೀಪ”, ಪಾದುವ ಕಾಲೇಜಿನ ಬಯಲು ರಂಗಮಂದಿರದ ಆವರಣದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ಇದು ಈ ನಾಟಕದ ಎರಡನೇ ಪ್ರದರ್ಶನವಾಗಿತ್ತು. ಈ ರಂಗಪ್ರದರ್ಶನಕ್ಕೆ ಖ್ಯಾತ ತುಳು ರಂಗಭೂಮಿ ಕಲಾವಿದರಾದ ಶ್ರೀ. ವಿಜಯಕುಮಾರ್ ಕೊಡಿಯಾಲಬೈಲ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ನಾಟಕಕ್ಕೆ ಶುಭಕೋರಿ, ಇಂತಹ ಒಂದು ನಿರಂತರ ರಂಗಪ್ರದರ್ಶನದ ಉದ್ದೇಶವನ್ನು ಸಾಕಾರಗೊಳಿಸುವುದ್ದಕ್ಕಾಗಿ ಥಿಯೇಟರ್ ಹಬ್ ಪ್ರಾರಂಭಗೊಳಿಸಿದ್ದಕ್ಕಾಗಿ ಎಲ್ಲಾ ಸಂಘಟಕರನ್ನು ಅಭಿನಂದಿಸಿದರು.

ಹಾಗೆಯೇ ಮುಂದೆಯೂ ತಮ್ಮ ಸಹಕಾರ ನೀಡುವುದಾಗಿ ತಿಳಿಸಿದರು. ಆಯನ ನಾಟಕ ಮನೆಯ ಶ್ರೀ. ಮೋಹನ ಚಂದ್ರ ಕಾರ್ಯಕ್ರಮ ನಿರ್ವಹಿಸಿದರು. ರಂಗಪ್ರದರ್ಶನವನ್ನು ರಂಗವೇದಿಕೆಯಲ್ಲಿ ಪ್ರದರ್ಶಿಸದೇ, ಬಯಲು ರಂಗಮಂದಿರದ ಒಂದು ಭಾಗದಲ್ಲಿ ವಿನೂತನವಾಗಿ ಪ್ರದರ್ಶಿಸಲಾಯಿತು.


ನಾಟಕದ ಬಳಿಕ ಪ್ರೇಕ್ಷಕರ ಜೊತೆ ಸಂವಾದವನ್ನು ಇರಿಸಲಾಗಿತ್ತು. ನಾಟಕದ ತಾಂತ್ರಿಕತೆಯಲ್ಲಿ ಆಹಾರ್ಯಂ ಸಂಸ್ಥೆ ಸಹಕಾರ ನೀಡಿತ್ತು. ಮುಂದಿನ ಶನಿವಾರ ಇದೇ ಬಯಲು ರಂಗಮಂದಿರದಲ್ಲಿ ನಂದಗೋಕುಲ ಕಲಾವಿದರು ಅಭಿನಯಿಸುವ ಪು.ತಿ.ನ. ವಿರಚಿತ, ಕುಮಾರಿ ಶ್ವೇತ ಅರೆಹೊಳೆ ನಿರ್ದೇಶನದ ‘ಗೋಕುಲ ನಿರ್ಗಮನ’ ಎಂಬ ನೃತ್ಯ ನಾಟಕದ ಪ್ರದರ್ಶನವಿದೆ.

ನಾಟಕ: ದ್ವೀಪ
ರಚನೆ: ಅಥೋಲ್_ಫ್ಯುಗಾರ್ಡ್
ನಿರ್ದೇಶನ: ಲಕ್ಷ್ಮಣ್ ಕೆಪಿ
ನಟನೆ: ಚಂದ್ರಹಾಸ್_ಉಳ್ಳಾಳ್ ಹಾಗೂ ಪ್ರಭಾಕರ್_ಕಾಪಿಕಾಡ್
ಸಂಗೀತ ನಿರ್ವಹಣೆ: ಶ್ಯಾಮಸುಂದರ್_ರಾವ್
ಬೆಳಕಿನ ನಿರ್ವಹಣೆ: ಕ್ರಿಸ್ಟಿ
ಪ್ರಸ್ತುತಿ: ಆಯನ್_ನಾಟಕದ_ಮನೆ
ಚಿತ್ರ ಕೃಪೆ:ಅರವಿಂದ_ಕುಡ್ಲ
ತಾಂತ್ರಿಕ ಸಹಾಯ: ಆಹಾರ್ಯಂ (ಜಾಕ್ಸನ್&ಜೀವನ್)

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...