ವೈಲ್ಡ್ ಕಾಡ್೯ ಎಂಟ್ರಿ ಮೂಲಕ ಬಿಗ್ ಬಾಸ್ ಗೆ ಕಾಲಿಡುತ್ತಾರಾ ಕಾಂಟ್ರವರ್ಸಿ ಕಿಂಗ್ ಕಿರಿಕ್ ಹುಡ್ಗ ?

(ವಿಶ್ವ ಕನ್ನಡಿಗ ನ್ಯೂಸ್) : ಕನ್ನಡದ ಬಿಗ್ ಬಾಸ್ ಏಳನೇಯ ಸೀಸನ್ ಈಗಾಗಲೇ ಶುರುವಾಗಿದ್ದು ಮೊದಲ ದಿನವೇ ಹದಿನೆಂಟು ಮಂದಿ ದೊಡ್ಮನೆಯೊಳಗೆ ಕಾಲಿಟ್ಟಿದ್ದರೆ, ಇನ್ನೊಂದು ವಿಶೇಷವೆನೆಂದರೆ ಪ್ರತಿಸಲವೂ ವೈಲ್ಡ್ ಕಾಡ್೯ ಎಂಟ್ರಿ ಇರುವುದರಿಂದ ಈ ಸಲ ಕೂಡ ವಿಶೇಷವಾದ ಎಂಟ್ರಿ ಹೊಸ ರೀತಿಯಲ್ಲಿ ಇರಬಹುದು ಎಂದು ಹೇಳಲಾಗುತ್ತಿದೆ.

ಈಗಾಗಲೇ ಕೆಲವು ಸೋಷಿಯಲ್ ಮೀಡಿಯಾ ಮತ್ತು ಟ್ರೋಲ್ ಫೇಜ್ ನಲ್ಲಿ ಓಡಾಡುತ್ತಿರುವ ಸುದ್ದಿ ಪ್ರಕಾರ ಕಾಂಟ್ರವರ್ಸಿ ಕಿಂಗ್ ಅಂತ ಖ್ಯಾತಿಗಳಿಸಿರುವ ಯುವ ನಿರ್ದೇಶಕ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ ವೈಲ್ಡ್ ಕಾಡ್೯ ಎಂಟ್ರಿ ಮೂಲಕ ಹೋಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ವಿಕೆ ನ್ಯೂಸ್ ಅವರನ್ನು ಸಂಪರ್ಕಿಸಿದಾಗ ಕಾದುನೋಡಿ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ.

ಈ ಹಿಂದೆ ಕಿರಿಕ್ ಹುಡ್ಗ ನಟ ನಿರ್ದೇಶಕ ಹುಚ್ಚ ವೆಂಕಟ್, ನಟಿ ಸಂಯುಕ್ತ ಹೆಗ್ಡೆ, ನಟ ಆ ದಿನಗಳು ಚೇತನ್, ನಟಿ ಸಂಸದೆ ರಮ್ಯ ಮತ್ತು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರ ವಿಷಯದಲ್ಲಿ ಸುದ್ದಿಯಾದವರು. ಎಲ್ಲಿಯಾದರೂ ಕಿರಿಕ್ ಹುಡ್ಗ ದೊಡ್ಮನೆಗೆ ಕಾಲಿಟ್ಟರೆ ದಿನ ಜಗಳ ತಪ್ಪಿದಲ್ಲ ತಣ್ಣಗಿನ ದೊಡ್ಮನೆಗೆ ಬೆಂಕಿ ಹತ್ತಿಕೊಳ್ಳುವುದು ಖಚಿತ ಎಂದು ಸಾಮಾಜಿಕ ತಾಣಗಳಲ್ಲಿ ಜನರು ಹೇಳುತ್ತಿದ್ದಾರೆ.

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...