ಬಿಸಿಸಿಐ ನಲ್ಲಿ ‘ದಾದಾಗಿರಿ’ ಆರಂಭದ ಸೂಚನೆ ಸಿಕ್ಕಂತೆ ಹಲವರಲ್ಲಿ ನಡುಕ

(ವಿಶ್ವ ಕನ್ನಡಿಗ ನ್ಯೂಸ್,www.vknews.in ):ನಾಯಕನಾಗಿ ಭಾರತೀಯ ಕ್ರಿಕೆಟ್ ಗೆ ಹೊಸ ರೂಪ ನೀಡಿದ ಸೌರವ್ ಗಂಗೂಲಿ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ .

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗುವ ಸುದ್ದಿ ಕೇಳಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷವಾಗಿದೆ . ಯಾವುದೇ ಕಾರಣಕ್ಕೂ ಯಾರಿಗೂ ಜಗ್ಗದ ,ನೇರ ನಡೆ ನುಡಿಯ ವ್ಯಕ್ತಿತ್ವ ಹೊಂದಿರುವ ಗಂಗೂಲಿ ಭಾರತೀಯ ಕ್ರಿಕೆಟ್ ನ ಚಿತ್ರಣವನ್ನೇ ಬದಲಿಸುತ್ತಾರೆ ಎಂಬ ಆಶಾವಾದ ಹಲವರದ್ದು . ಜೊತೆಗೆ ಅನೇಕರಿಗೆ ನಡುಕ ಉಂಟಾಗಿದೆ . ಬಿಸಿಸಿಐ ಮೇಲೆ ಸಾಕಷ್ಟು ಆರೋಪಗಳು ಈ ಹಿಂದೆ ಕೇಳಿ ಬಂದಿತ್ತು ,ಇಲ್ಲಿ ಭ್ರಷ್ಟಾಚಾರ ಮಿತಿ ಮೀರಿ ನಡೆಯುತ್ತಿದೆ ಎಂಬುದು ಎಲ್ಲರಿಗು ತಿಳಿದಿರುವ ನಗ್ನ ಸತ್ಯ ಕೂಡ . ಇದೀಗ ಗಂಗೂಲಿ ಇದನ್ನು ಕೈವಶ ಮಾಡಿಕೊಂಡಿರುವುದು ಅನೇಕರಿಗೆ ತಲೆನೋವು ಕೂಡ ಉಂಟು ಮಾಡಿದೆ .

ತಾನು ನಾಯಕನಾಗಿದ್ದಾಗ ಕೇವಲ ಪ್ರತಿಭೆಗೆ ಮಾತ್ರ ಬೆಂಬಲ ನೀಡುತ್ತಿದ್ದ ಗಂಗೂಲಿ ಯುವರಾಜ್ , ಮೊಹಮ್ಮದ್ ಕೈಫ್ ,ಜಹೀರ್ ಖಾನ್ , ವೀರೇಂದ್ರ ಸೆಹ್ವಾಗ್ ರಂತ ಆಟಗಾರರನ್ನು ಬೆಳೆಸಿದ್ದರು . ಟೀಮ್ ಇಂಡಿಯಾಗೆ ಮಹತ್ವದ ಕೊಡುಗೆಯನ್ನು ನೀಡಿದ್ದರು . ಇದೀಗ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗುತ್ತಿದ್ದು ದೇಶದ ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ .

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...