ಶ್ರೀನಿವಾಸ್ ಯುನಿವರ್ಸಿಟಿ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ನ್ಯಾನೋ ತಂತ್ರಜ್ಞಾನದ ಸಮ್ಮೇಳನಕ್ಕೆ ಚಾಲನೆ

(ವಿಶ್ವ ಕನ್ನಡಿಗ ನ್ಯೂಸ್) : ಶ್ರೀನಿವಾಸ್ ಯುನಿವರ್ಸಿಟಿ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಟ್ಟದ ನ್ಯಾನೋ ತಂತ್ರಜ್ಞಾನದ ಸಮ್ಮೇಳನಕ್ಕೆ ಮಂಗಳೂರಿನ ಶ್ರೀನಿವಾಸ ಕಾಲೇಜಿನ ಸಭಾಂಗಣದಲ್ಲಿ ಚಾಲನೆ ಸಿಕ್ಕಿತ್ತು.

ಮಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನ ನ್ಯಾನೋ ತಂತ್ರಜ್ಞಾನದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಕೆ. ಬೈರಪ್ಪ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಯುಗದಲ್ಲಿ ದೇಶದ ಪ್ರಗತಿಯಲ್ಲಿ ನ್ಯಾನೋ ತಂತ್ರಜ್ಞಾನ ಪ್ರಮುಖ ಪಾತ್ರವಹಿಸಲಿದೆ. ಭಾರತಕ್ಕೆ ನ್ಯಾನೋ ತಂತ್ರಜ್ಞಾನ ಹೊಸ ವಿಷಯವಲ್ಲ ಸಾವಿರಾರು ವರ್ಷಗಳ ಹಿಂದೆ ದೇಶದಲ್ಲಿ ಈ ತಂತ್ರಜ್ಞಾನಕ್ಕೆ ಹತ್ತಿರವಾದ ಜ್ಞಾನ ಇತ್ತು. ಪ್ರಾಚೀನ ಲೋಹವಿಧ್ಯೆ, ಆರ್ಯವೇದದಲ್ಲಿ ನ್ಯಾನೋ ತಂತ್ರಜ್ಞಾನದ ಬಳಕೆ ನಡೆದಿದೆ.21ನೆ ಶತಮಾನ ದಲ್ಲಿ ನ್ಯಾನೋ ಮೆಡಿಸಿನ್, ತಾಂತ್ರಿ ಕ ತೆಯಲ್ಲಿ ನ್ಯಾನೋ ಜ್ಞಾನ ಬಳಕೆಯಾ ಗುತ್ತಿದೆ ಎಂದು ಭೈರಪ್ಪ ತಿಳಿಸಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೊಚ್ಚಿನ್ ವಿಶ್ವವಿದ್ಯಾಲಯ ದ ಪೆÇ್ರ.ಡಾ. ವಿ.ಪಿ.ಎನ್. ನಾಂಪುರಿಯವರು ಶ್ರೀನಿವಾಸ್ ಯುನಿರ್ಸಿಟಿಯ ಸಂಪೂರ್ಣ ಮಾಹಿತಿ ಇರುವ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಆನಂತರ ಮಾತನಾಡಿದ ಅವರು, ಇವತ್ತಿನ ತಾಂತ್ರಿಕ ವಿದ್ಯಾರ್ಥಿಗಳಿಗೆ ನ್ಯಾನೋ ತಂತ್ರಜ್ಞಾನದ ಬಗ್ಗೆ ತಿಳಿದಿರಬೇಕು ಎಂದ ಅವರು ನ್ಯಾನೋ ತಂತ್ರಜ್ಞಾನದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಆನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀನಿವಾಸ್ ಯುನಿವರ್ಸಿಟಿಯ ಚಾನ್ಸಲರ್ ಸಿಎ.ಎ ರಾಘವೇಂದ್ರ ರಾವ್ ಅವರು ಡಾ. ಕೆ. ಬೈರಪ್ಪ ಮತ್ತು ಪೆÇ್ರ.ಡಾ. ವಿ.ಪಿ.ಎನ್. ನಾಂಪುರಿಯವರು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಣತಿಯನ್ನು ಪಡೆದವರು. ನಮ್ಮ ವಿದ್ಯಾರ್ಥಿಗಳಿಗೆ ಇದೀಗ ಅವರಿಂದ ಉಪಾನ್ಯಾಸ ಕೇಳುವಂತಹ ಸೌಭಾಗ್ಯ ಒದಗಿ ಬಂದಿದೆ ಎಂದು ಹೇಳಿದರು.

ಈ ಸಂದರ್ಭ ಸಮಾರಂಭದಲ್ಲಿ ಡಾ.ಕಲ್ಲಪ್ಪ ಪ್ರಶಾಂತ ಕೆ.ಫ್ರಾನ್ಸ್, ಚೆನ್ನೈ ಯ ಪೇಟೆಂಟ್ ಆಫೀಸರ್ ಪ್ರಸಾದ್ ರಾವ್, ನ್ಯಾನೊ ತಂತ್ರಜ್ಞಾನದಲ್ಲಿ ತೊಡಗಿರುವ ಡಾ.ಕಿರಣ್ ಮಂಜಪ್ಪ ತೈವಾನ್ , ಡಾ.ಮನೋಜ್ ಕೃಷ್ಣ ಬಿಎಎಸ್ ಎಫ್ ,ಶ್ರೀನಿವಾಸ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಎ. ಶ್ರೀನಿವಾಸರಾವ್, ಡಾ ಪ್ರಭಾವತಿ ರಾವ್ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಮಂಡಳಿಯ ವಿವೇಕ್ ಆನಂದ್ ಶ್ರೀನಿವಾಸ ಕಾಲೇಜಿನ ಕುಲಪತಿ ಡಾ.ಪಿ.ಎಸ್.ಐತಾಳ್, ಸಮ್ಮೇಳನದ ಸಂಚಾಲಕ ಡಾ.ಪ್ರವೀಣ್, ಶ್ರೀನಿವಾಸ ತಂತ್ರಜ್ಞಾನ ಕಾಲೇಜಿನ ಡೀನ್ ಡಾ.ಥಾಮಸ್ ಪಿಂಟೋ, ಕುಲಸಚಿವ ಡಾ.ಅನಿಲ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.

 

ವಿಶ್ವ ಕನ್ನಡಿಗ ನ್ಯೂಸ್

    Leave Your Comment

    Your email address will not be published.*

    Open chat
    1
    ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...