ಮಾತೃಶ್ರೀ ಯೋಜನೆಯನ್ನು ಸ್ತ್ರೀಯರು ಸದ್ಬಳಕೆ ಮಾಡಿಕೊಳ್ಳಿ – SDPI ಪುರಸಭಾ ಸದಸ್ಯ ಹೆಚ್.ಆರ್.ರಾಜ್ ಗೋಪಾಲ್

ಗುಂಡ್ಲುಪೇಟೆ (ವಿಶ್ವ ಕನ್ನಡಿಗ ನ್ಯೂಸ್) : ಪಟ್ಟಣದ ೨ ನೇ ವಾರ್ಡ್ ಜಾಕೀರ್ ಹುಸೇನ್ ನಗರದ ಅಂಗನವಾಡಿ ಕೇಂದ್ರ ದಲ್ಲಿ ಇಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಇಲಾಖೆಯ ವತಿಯಿಂದ ನಡೆದ ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮ ವನ್ನು ಪುರಸಭಾ ಸದಸ್ಯರಾದ ರಾಜ್ ಗೋಪಾಲ್ ಹೆಚ್.ಆರ್.ರವರು ಉದ್ಘಾಟಿಸಿದರು..

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಮಹಿಳೆಯರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಅದರಂತೆ ಗರ್ಭಿಣಿ ಮತ್ತು ಬಾಣಂತಿಯ ರಿಗಾಗಿ ಇಲಾಖೆಯ ವತಿಯಿಂದ ಮಾತೃವಂದನಾ,ಮಾತೃಶ್ರೀ,ಮಾತೃಪೂರ್ಣ ಯೋಜನೆ ಯಂತಹ ಕಾರ್ಯಕ್ರಮ ವನ್ನು ಜಾರಿಗೆ ತಂದು ಗರ್ಭಿಣಿ ಬಾಣಂತಿಯರು ಹಾಗೂ ಮಕ್ಕಳ ಪೋಷಣೆ ಅಭಿವೃದ್ಧಿ ಪಡಿಸಲು ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಿ ಆರೋಗ್ಯದ ದೃಷ್ಟಿಯಿಂದ ಸಹಕಾರಿಯಾಗಿದ್ದು ಇಂತಹ ಯೋಜನೆ ಗಳನ್ನು ಸಮಪರ್ಕವಾಗಿ ಸದ್ಬಳಕೆಮಾಡಿಕೊಳ್ಳಿ ಎಂದು ಕಾರ್ಯಕ್ರಮ ದಲ್ಲಿದ್ದ ಗರ್ಭಿಣಿ ಬಾಣಂತಿಯರಿಗೆ ಕಿವಿ ಮಾತು ಹೇಳಿದರು…

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಗೀತಾ, ಅಂಗನವಾಡಿ ಕಾರ್ಯಕರ್ತೆಯರಾದ ಕಲಾವತಿ,ಜಬೀನಾ,ನಿರ್ಮಲಾ,ಸರೋಜ,ಎಸ್.ಡಿ.ಪಿ.ಐ ಸದಸ್ಯ ರಿಜ್ವಾನ್ ಪಾಷಾ ಹಾಗೂ ಪಟ್ಟಣದ ವಿವಿಧ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

 

ವಿಶ್ವ ಕನ್ನಡಿಗ ನ್ಯೂಸ್

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...