ಪುದು ಗ್ರಾಮದ ಪೇರಿಮಾರ್ ಮಸೀದಿ ಬಳಿ ದೀಪ ಉದ್ಘಾಟನೆ

ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಪುದು ಗ್ರಾಮ ಪಂಚಾಯತ್ 14ನೇ ಹಣಕಾಸಿನ ಅಡಿಯಲ್ಲಿ 1 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪೇರಿಮಾರ್ ಮಸೀದಿ ಬಳಿಯ ಹೈಮಾಸ್ಟ್ ದೀಪವನ್ನು ಸ್ಥಳೀಯ ಗ್ರಾಪಂ ಸದಸ್ಯ ಹಾಶೀರ್‌ ಪೇರಿಮಾರ್ ಶನಿವಾರ ರಾತ್ರಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ತನ್ನ ವ್ಯಾಪ್ತಿಯ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುವುದಾಗಿ ತಿಳಿದರು. ಜಮಾಅತ್ ಖತೀಬ್ ರಫೀಖ್ ಸಅದಿ ಅಲ್ ಅಫ್ಳಲಿ ದುವಾ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್ ಫಂರಗಿಪೇಟೆ, ಮಸ್ಕಿದುಲ್ ಖಿಳ್ ರ್ ಜುಮಾ ಮಸೀದಿ ಇದರ ಅಧ್ಯಕ್ಷ ಪಿ ಮಹಮ್ಮದ್ ಶಾಫಿ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಗ್ರಾ.ಪಂ ಸದಸ್ಯರಾದ ಎಂ. ಹುಸೈನ್ ಪಾಡಿ, ಇಕ್ಬಾಲ್ ಸುಜೀರ್, ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫಲೂಲ್ ಪಿ , ಎಸ್ಸೆಸೆಫ್ ಪೇರಿಮಾರ್ ಶಾಖೆ ಅಧ್ಯಕ್ಷ ನಝೀರ್ ಪೇರಿಮಾರ್, ಲತೀಫ್ ಉಸ್ತಾದ್, ಯುವ ಕಾರ್ಯದರ್ಶಿಗಳಾದ ಶೌಕತ್ ಆಲಿ ಪಾಡಿ, ಹಿಶಾಂ ಫರಂಗಿಪೇಟೆ, ಸಿರಾಜ್ ಪೇರಿಮಾರ್, ಬಿ. ರಝಾಕ್ ಹಾಜಿ, ಸಮದ್ ಪೇರಿಮಾರ್, ಮುಸ್ತಫ ಪೇರಿಮಾರ್, ರಿಲ್ವಾನ್ ಅಮ್ಮೆಮಾರ್, ಶಾಹೀಲ್ ಆರ್ ಎಸ್, ಶಿಹಾಬ್ ಪೇರಿಮಾರ್, ವಲಯ ಅಧ್ಯಕ್ಷ ರಫೀಕ್ ಪೇರಿಮಾರ್, ಮಜೀದ್ ಪೇರಿಮಾರ್, ಬಶೀರ್ ಪೇರಿಮಾರ್ ಹಾಜರಿದ್ದರು .

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...