(ವಿಶ್ವ ಕನ್ನಡಿಗ ನ್ಯೂಸ್) : ಈ ದಿನ ಎರಡು ಸಂಗತಿಗಳನ್ನು ನಿಮ್ಮಲ್ಲಿ ಹೇಳಲಿಕ್ಕಿದೆ.ಅದರಲ್ಲೊಂದು ಅಲ್ಲಾಹನ ಮಹಾತ್ಮರ ಬಗ್ಗೆ ಕುರಾನ್ ಧಾರಾಳವಾಗಿ ವಿವರಿಸುತ್ತದೆ.ಅಲ್ಲಾಹನ ಪುಣ್ಯ ಮಹಾತ್ಮ ರಲ್ಲಿ ಅತ್ಯಂತ ಶ್ರೇಷ್ಠ ರಾದ ಮಹಾನರಾಗಿದ್ದರು.ಹಝ್ರತ್ ಮುಹ್ಯುದ್ದೀನ್ ಶೈಖ್ (ಖ.ಸಿ)ರವರು.
ಹುಟ್ಟಿನಲ್ಲೆ ಅದ್ಬುತ ವನ್ನು ತೋರಿದ ಮಹಾನ್ ಜಗತ್ತಿನ ಶ್ರೇಷ್ಠ ಸಂತರಾಗಿ ಗುರುತಿಸಲ್ಪಟ್ಟಿದ್ದಾರೆ.ಆ ಮಹಾನುಭಾವರು ಪವಿತ್ರ ರಂಜಾನ್ ತಿಂಗಳಲ್ಲಿ ಜನ್ಮವೆತ್ತುತ್ತಾರೆ.ಆದರೆ ಆ ತಿಂಗಳಿನ ಹಗಲಿನಲ್ಲಿ ತಾಯಿಯಿಂದ ಮೊಲೆ ಹಾಲನ್ನು ಕೂಡಾ ಕುಡಿಯುತ್ತಿರಲಿಲ್ಲ ಎನ್ನುವುದು ಅಸಾಧಾರಣ ಸಂಗತಿಯಾಗಿ ಚರಿತ್ರೆಯಲ್ಲಿ ಬರೆಯಲ್ಪಟ್ಟಿದೆ. ದೀನಿನ ನವೋತ್ಥಾನ ಪ್ರಕ್ರಿಯೆಯಲ್ಲಿ ಅಸಾಮಾನ್ಯ ಕೊಡುಗೆಯನ್ನು ನೀಡಿದ ಪುಣ್ಯಾತ್ಮರು ಆಗಿದ್ದಾರೆ ಶೈಖ್ ಜೀಲಾನಿ (ಖ ಸಿ).
ಶೈಖ್ ಜೀಲಾನಿ ಯವರ ಈ ಪುಣ್ಯ ಸ್ಮರಣೆಯಲ್ಲಿ ಅವರ ಜೀವನ ಸಂದೇಶಗಳನ್ನು ಪಾಲಿಸಲು ನಾವು ಮುಂದಾಗಬೇಕಾಗಿದೆ. ಮಹಾನುಭಾವರ ಸಂದೇಶ ಗಳಲ್ಲಿ ಪ್ರಮುಖ ವಾದ ಒಂದು ಸಂದೇಶವನ್ನು ಈಗ ನಿಮ್ಮ ಮುಂದಿಡುತ್ತೇನೆ.ಮಹಾನುಭಾವರು ಹೇಳುತ್ತಾರೆ. ಭೌತಿಕತೆಯನ್ನು ನಿಮ್ಮ ಹೃದಯದಿಂದ ತೆಗೆದು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳಿ.ಆಗ ನಿಮಗೆ ಯಾವ ತೊಂದರೆಯೂ ಆಗದು.ಲೌಕಿಕ ಜೀವನವನ್ನು ಹೆಚ್ಚಾಗಿ ಹಚ್ಚಿಕೊಳ್ಳಬೇಡಿ ಎನ್ನುವುದೇ ಉದ್ದೇಶ ವಾಗಿದೆ. ಲೌಕಿಕ ವಿಷಯಗಳ ಹಿಂದೆ ಬಿದ್ದರೆ ಸುಧಾರಿಸಿಕೊಳ್ಳುವುದು ತುಂಬಾ ಕಷ್ಟ.ಒಮ್ಮೆ ಸ್ನೇಹಿತ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಕಂಬಳಿಯನ್ನು ಹಿಡಿಯಲು ನೀರಿಗೆ ಧುಮುಕುತ್ತಾನೆ.ಹೊತ್ತು ಕಳೆದರೂ ಸ್ನೇಹಿತ ಬಾರದೇ ಇದ್ದಾಗ ಕರೆದು ಹೇಳುತ್ತಾನೆ ಯಾಕೆ ಬರುತ್ತಿಲ್ಲ.?ಆಗ ಆತ ಹೇಳುತ್ತಾನೆ. ನನಗೆ ಬರಲಾಗುತ್ತಿಲ್ಲ.ಇದು ಕಂಬಳಿ ಯಲ್ಲ ಕರಡಿ. ಅದು ನನ್ನ ನ್ನು ಹಿಡಿದು ಕೊಂಡಿದೆ.ಇದೇ ರೀತಿಯಲ್ಲಿ ಪ್ರಪಂಚದ ಹಿಂದೆ ಬಿದ್ದರೆ ಅದರಿಂದ ಹೊರಬರುವುದು ಅಸಾಧ್ಯ ವಾದ ಮಾತಾಗಿದೆ.ಅದು ನಮ್ಮನ್ನು ಬಿಡುವುದಿಲ್ಲ.
ಇಂದಿನ ದಿನದ ಮತ್ತೊಂದು ಘಟನೆ ಇಡೀ ದೇಶ ತಲ್ಲಣಗೊಂಡ ಪಶುವೈದ್ಯ ಯ ಮೇಲೆ ನಡೆಸಲಾದ ಅಮಾನುಷ ಕ್ರೌರ್ಯ!.ವೈದ್ಯೆಯ ಮೇಲೆ ಸರಣಿ ಅತ್ಯಾಚಾರ ಮಾಡಿ ಕೊಂದು ಸುಟ್ಟುಹಾಕಿದ ಮಹಾ ಅಪರಾಧ ಕ್ಕೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿತ್ತು.ಅಷ್ಟರಲ್ಲೇ ಆ ನಾಲ್ವರು ಕಿರಾತಕರು ಎನ್ಕೌಂಟರ್ ಗೆ ಬಲಿಯಾಗಿದ್ದಾರೆ.ಹೋಗಲಿ ಬಿಡಿ.ಅಪರಾಧಿಗಳು ಯಾವತ್ತೂ ಕರುಣೆಗೆ ಅರ್ಹರು ಅಲ್ಲವೇ ಅಲ್ಲ.ಆದರೆ ಇದಕ್ಕೂ ಮೊದಲು ನಡೆದಂತಹ ಅನೇಕ ಅಪರಾಧ ಪ್ರಕರಣಗಳು ಕೂಡಾ ನಮ್ಮ ಮುಂದಿದೆ.ನಿರ್ಭಯಾ,ದಾನಮ್ಮ,ಆಸಿಫಾ, ಉನ್ನೋವಾದ ಹೆಣ್ಣುಮಗಳು. ಇವರ ಮೇಲೆಲ್ಲಾ ಘೋರ ಅಪರಾಧಗಳು ನಡೆದಿದೆ.ಆಸಿಫಾ ಎಂಬ ಎಂಟರ ಬಾಲೆ ಮೇಲೆ ಅತ್ಯಾಚಾರ ನಡೆದದ್ದು ಏಳು ಮಂದಿ ಆರೋಪಿಗಳಿಂದ ನಿರಂತರವಾಗಿ ಎಂಟು ದಿನ ರಾತ್ರಿಗಳು.ಪಶುವೈದ್ಯೆಯನ್ನು ಕೊಂದು ಸುಟ್ಟುಹಾಕಿದ್ದು ಲಾರಿ ಡ್ರೈವರ್ ಗಳು ಮತ್ತು ಕ್ಲೀನರುಗಳಾದರೆ ಆಸಿಫಾಳನ್ನು ಮುಗಿಸಿದ್ದು ಸಾಮಾನ್ಯರಲ್ಲ.ಅವರಲ್ಲಿ ಅಧಿಕಾರಿಗಳು,ಮತ್ತು ಪೋಲೀಸರು ಭಾಗಿಯಾಗಿದ್ದರು.ಕೇಸನ್ನು ಮುಚ್ಚಿಹಾಕಲು ಲಂಚದ ಆಮಿಷ ಒಡ್ಡಲಾಗಿತ್ತು.ಆರೋಪಿಗಳ ಪರವಾಗಿ ಬ್ರಹತ್ ಪ್ರತಿಭಟನೆಗಳನ್ನು ನಡೆಸಲಾಯಿತು.ಕೇಸನ್ನು ವಾದಿಸುವ ವಕೀಲರಿಗೆ ಜೀವ ಬೆದರಿಕೆ ಒಡ್ಡಲಾಯಿತು.ಅದೇ ರೀತಿಯಲ್ಲಿ ಸರಣಿ ಅತ್ಯಾಚಾರ ಕ್ಕೆ ಒಳಗಾದ ಉನ್ನೋವ ದ ಸಂತ್ರಸ್ತೆಯ ಮೇಲೆ ಬೆಂಕಿಹಾಕಲಾಗುತ್ತದೆ.ಸುಮಾರು ಒಂದು ಕಿ.ಮೀ ದೂರ ಆ ಹೆಣ್ಣು ಮಗಳು ಜೀವರಕ್ಷಣೆಗಾಗಿ ಓಡಿ ಹೋಗುತ್ತಾಳೆ.ನಂತರ ಯಾರದೋ ಪೋನ್ ತೆಗೆದು ಪೋಲೀಸರಿಗೆ ಫೋನ್ ಮಾಡ್ತಾಳೆ.ಇದೀಗ ಶೇಕಡಾ ತೊಂಬತ್ತರಷ್ಟು ಸುಟ್ಟುಹೋದ ದೇಹದೊಂದಿಗೆ ದೆಹಲಿಯ ಆಸ್ಪತ್ರೆಯಲ್ಲಿ ಆಕೆ ಜೀವನ್ಮರಣ ಹೋರಾಡುತ್ತಿದ್ದಾಳೆ.ಇದು ನಡೆಯುವುದು ಎನ್ಕೌಂಟರ್ ನಡೆದ ದಿನದ ರಾತ್ರಿಯ ಹಗಲಿನ ಸಮಯದಲ್ಲಿ ಆಗಿರುತ್ತದೆ.ಎರಡು ಪ್ರಕರಣದ ವರದಿಗಳು ಕೂಡಾ ಒಂದೇ ದಿನದಲ್ಲಿ ಪತ್ರಿಕೆಗಳಲ್ಲಿ ವರದಿಯಾಗುತ್ತದೆ.ಅದು ದಿನಾಂಕ ಡಿಸೆಂಬರ್ ಆರು.
ಇಲ್ಲಿ ನಮ್ಮನ್ನು ಕಾಡುವ ಪ್ರಶ್ನೆ! ಅತ್ಯಾಚಾರ ,ಕೊಲೆ ನಡೆದಾಗ ಕೆಲವೊಮ್ಮೆ ಆರೋಪಿ ಗಳ ಪರ ಧ್ವನಿ ಎದ್ದು ಕಾನೂನಾತ್ಮಕ ವ್ಯವಸ್ಥೆ ಯಾಕೆ ನಿಷ್ಕ್ರಿಯ ವಾಗುತ್ತದೆ ?.ಹಾಗೇ ಸಂತ್ರಸ್ತೆಯರನ್ನೇ ಮುಗಿಸಿ ಅವರ ಧ್ವನಿ ಯನ್ನೆ ಅಡಗಿಸುವ ಪ್ರಯತ್ನ ಯಾಕೆ ನಡೆಯುತ್ತದೆ ?ಎನ್ನುವುದಾಗಿದೆ.ಅತ್ಯಾಚಾರ ಪ್ರಕರಣಗಳಲ್ಲಿ ಅನೇಕ ಸಲ ಶರೀಅತ್ತ್ ನಿಯಮ ಪಾಲಿಸಬೇಕೆಂಬ ಕೂಗು ಸಾರ್ವಜನಿಕ ರಿಂದ ಕೇಳಿಬರುತ್ತಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಕಾರುಣೆ ಬೇಕಾಗಿಲ್ಲ.ಹಾಗೇ ತಾರತಮ್ಯವೂ ಸಮಂಜಸವಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.