ಉಪ್ಪಿನಂಗಡಿಯ ಮಾದರಿ ಶಾಲೆಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಪೋಷಕರಿಗೆ ಆಟೋಟ ಸ್ಪರ್ಧೆ:ಪೋಷಕರಿಂದ ತುಂಬಿದ ಶಾಲಾ ಮೈದಾನ

.(www.vknews. in)ಉಪ್ಪಿನಂಗಡಿಯ ಹೃದಯಭಾಗದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಹಬ್ಬದ ಸಂಭ್ರಮ.ದಿನಾಂಕ 21/12/2019 ರಂದು ನಡೆಯಲಿರುವ ಅದ್ದೂರಿ ವಾರ್ಷಿಕೋತ್ಸವದ ಅಂಗವಾಗಿ ಪೋಷಕರಿಗೆ ಒಳಾಂಗಣ ಹಾಗೂ ಹೊರಾಂಗಣದ ಆಟೋಟ ಸ್ಪರ್ಧೆಗಳನ್ನು ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಯವರು ಆಯೋಜಿಸಿದ್ದರು. ಅದಕ್ಕೆ ಪೋಷಕರಿಂದ ಅಭೂತಪೂರ್ವ ಸಹಕಾರ ಸಿಕ್ಕಿದ್ದು, ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 4 ಘಂಟೆಯವರೆಗೂ ಆಟೋಟಗಳು ನಡೆದು ಶಾಲಾ ಮೈದಾನ ಪೋಷಕರಿಂದ ತುಂಬಿ ತುಳುಕುತ್ತಿತ್ತು. ಸರಕಾರಿ ಶಾಲೆಗಳು ಮಕ್ಕಲಿಲ್ಲದೆ ಮುಚ್ಚುತ್ತಿರುವ ಕಾಲಘಟ್ಟದಲ್ಲಿ ,ಉಪ್ಪಿನಂಗಡಿ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಿದ್ದು

, ಅದಕ್ಕೆ ಪೋಷಕರೊಂದಿಗೆ ಶಾಲೆಗೆ ಇರುವ ಸಂಬಂಧವನ್ನು ಹೆಚ್ಚಿಸಲು ಇಂತಹ ಕಾರ್ಯಕ್ರಮವು ಸಹಕಾರಿಯಾಗುತ್ತಿದೆ. ಮಕ್ಕಳಿಗೆ ,ಶಿಕ್ಷಕರಿಗೆ ಹಲವು ಸಂಧರ್ಭದಲ್ಲಿ ಸ್ಪರ್ಧೆಗಳು ಆಯೋಜಿನೆ ಮಾಡುವಾಗ ,ಪೋಷಕರಿಗೆ ಕೂಡ ಮಕ್ಕಳು ಕಲಿಯುವ ಶಾಲೆಯಲ್ಲಿ ಮಕ್ಕಳ ರೀತಿ ಮೈದಾನದಲ್ಲಿ ಒಂದು ದಿನವನ್ನು ಮೀಸಲಿಡುವಾಗ ಶಾಲೆಯೊಂದಿಗಿನ ಅವರ ಬಾಂಧವ್ಯವು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ, ಪೋಷಕರಿಗೆ ಆಟೋಟವನ್ನು ಆಯೋಜಿಸಿದ ರೀತಿಯಲ್ಲಿ ಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳಿಗೆ ಕೂಡ ಹಿರಿಯ ವಿದ್ಯಾರ್ಥಿ ಸಂಘದ ಸಹಕಾರದೊಂದಿಗೆ ಡಿಸೆಂಬರ್ 14 ಶನಿವಾರದಂದು ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಒಂದು ಸರಕಾರಿ ಶಾಲೆಯ ಬೆಳವಣಿಗೆಗೆ ಶಿಕ್ಷಕರು ,ಮಕ್ಕಳು, ಪೋಷಕರು ಮತ್ತು ಹಿರಿಯ ವಿದ್ಯಾರ್ಥಿಗಳನ್ನೊಳಗೊಂಡ ಸಮುದಾಯವು ಕೈ ಜೋಡಿಸಿದರೆ ಮೂಲ ಸೌಲಭ್ಯಗಳನ್ನೊಳಗೊಂಡು ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಬಹುದು ಎಂಬುದಕ್ಕೆ ಮಾದರಿ ಶಾಲೆ ಉಪ್ಪಿನಂಗಡಿಯು ಉದಾಹರಣೆಯಾಗಿದೆ

  Leave Your Comment

  Your email address will not be published.*

  ಚಾಟ್ ಮಾಡಿ
  1
  VK News Official Chat
  ವಿಶ್ವ ಕನ್ನಡಿಗ ನ್ಯೂಸ್ ವಾರ್ತಾ ತಾಣಕ್ಕೆ ಸ್ವಾಗತ ...